ಮೇಷ ರಾಶಿ: ಹೊಸ ಕಾರ್ಯ ಸಾಧನೆಗೆ ಸಾಕಷ್ಟು ಅವಕಾಶಗಳಿವೆ. ಧನದ ಪ್ರವಾಹ ಸುಧಾರಿಸುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಾಮರಸ್ಯ ಬೆಳೆಯುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಧ್ಯಾನ ಮತ್ತು ಯೋಗ ನಿಮ್ಮ ಆರೋಗ್ಯಕ್ಕೆ ಹಿತ ಕೊಡಲಿದೆ.
ವೃಷಭ ರಾಶಿ: ಬದುಕಿನ ಎರಡು ಕ್ಷೇತ್ರದಲ್ಲಿ ಪ್ರಗತಿ ಸಿಗುತ್ತದೆ. ಹಣಕಾಸು ವಿಚಾರದಲ್ಲಿ ಜಾಗರೂಕತೆ ಅಗತ್ಯ. ವೃತ್ತಿಯಲ್ಲಿ ಉತ್ತಮ ಅವಕಾಶಗಳಿವೆ. ಆಸ್ತಿಕರ ಪ್ರಶ್ನೆಗಳಿಗೆ ಪರಿಹಾರ ಸಿಗಲಿದೆ. ಬಹುದಿನದ ಆಸೆ ಈಡೇರುವ ಕಾಲ ಬಂದಿದೆ.
ಮಿಥುನ ರಾಶಿ: ಉದ್ಯೋಗದಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗುತ್ತದೆ. ಆರೋಗ್ಯದಲ್ಲಿ ಏರುಪೇರು ಆಗುವ ಲಕ್ಷಣವಿದೆ. ಹೊಸ ಕೆಲಸ ಸಿಗಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದ್ದು, ಅದನ್ನು ಬಳಸಿಕೊಳ್ಳುವುದು ಅಗತ್ಯ. ಪ್ರಯಾಣದ ಸಾಧ್ಯತೆಗಳಿವೆ.
ಕರ್ಕ ರಾಶಿ: ಆಧ್ಯಾತ್ಮದಲ್ಲಿ ಹೆಚ್ಚು ಆಸಕ್ತಿ ಮೂಡಲಿದೆ. ಪ್ರಭಾವಶಾಲಿ ವ್ಯಕ್ತಿತ್ವ ಬೆಳೆಯುತ್ತದೆ. ಅದೃಷ್ಟ ದಾರಿ ತೆರೆದಿರುತ್ತದೆ. ವಾಣಿಜ್ಯದಲ್ಲಿ ಲಾಭ ಆಗಲಿದೆ. ಪ್ರವಾಸ ಅವಕಾಶ ಒದಗಿ ಬರಲಿದೆ.
ಸಿಂಹ ರಾಶಿ: ಕೌಟುಂಬಿಕ ಜೀವನ ಸುಧಾರಣೆ ಆಗಲಿದೆ. ಹೊಸ ಸ್ನೇಹಗಳು ಸಾಧ್ಯವಿದೆ. ಆರೋಗ್ಯ ಚೆನ್ನಾಗಿರುತ್ತದೆ. ಉದ್ಯೋಗದಲ್ಲಿ ಬೆಂಬಲ ಸಿಗುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯಿರಿ.
ಕನ್ಯಾ ರಾಶಿ: ಹಳೆಯ ಹೂಡಿಕೆದರಿಂದ ಲಾಭ ಬರಲಿದೆ. ಶೈಕ್ಷಣಿಕ ಯಶಸ್ಸು ಸಿಗಲಿದೆ. ಹೊಸ ಜನರ ಪರಿಚಯ ಆಗಲಿದೆ. ಸಮಯ ಹಾಳು ಮಾಡದೇ ಇದ್ದರೆ ಭವಿಷ್ಯ ಚನ್ನಾಗಿರಲಿದೆ.
ತುಲಾ ರಾಶಿ: ಸಾಮಾಜಿಕ ಚಟುವಟಿಕೆಗಳಿಂದ ಜಯ ಸಿಗಲಿದೆ. ಶಕ್ತಿಯ ಬೆಳವಣಿಗೆ ಸಾಧ್ಯವಿದೆ. ಆರೋಗ್ಯದ ವಿಷಯದ ಬಗ್ಗೆ ಕಾಳಜಿ ಅಗತ್ಯ. ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ.
ವೃಶ್ಚಿಕ ರಾಶಿ: ಆರ್ಥಿಕ ಲಾಭಕ್ಕೆ ಅವಕಾಶಗಳಿವೆ. ವೃತ್ತಿ ಅಭಿವೃದ್ಧಿ ಸಾದ್ಯವಿದೆ. ಯೋಗ-ಧ್ಯಾನ ಸಾಧನೆ ಆಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
ಧನು ರಾಶಿ: ದುಡಿಮೆಗೆ ತಕ್ಕ ಫಲ ಸಿಗಲಿದೆ. ವಿಶ್ವಾಸದಿಂದ ಜೀವನ ನಡೆಸುವುದು ಮುಖ್ಯ. ಅನಗತ್ಯ ಅನುಮಾನಗಳು ನಿಮ್ಮ ಬದುಕು ಹಾಳು ಮಾಡುತ್ತದೆ. ಆರೋಗ್ಯ ಸುಧಾರಣೆ ಅಗಲಿದೆ.
ಮಕರ ರಾಶಿ: ಸಾಮಾಜಿಕ ಗೌರವ ಸಿಗಲಿದೆ. ಧಾರ್ಮಿಕ ಕಾರ್ಯಕ್ರಮ ಪ್ರವೇಶ ಆಗಲಿದೆ. ಭೂಮಿ-ವಾಹನ ಖರೀದಿ ಯೋಗ ಸಮೀಪಿಸಿದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಕುಂಭ ರಾಶಿ: ಕುಟುಂಬ ಸಂತೋಷದ ವಾತಾವರಣ ಸಿಗಲಿದೆ. ಪ್ರಯಾಣದ ಅವಕಾಶ ಕೂಡಿ ಬರಲಿದೆ. ಆರೋಗ್ಯ ಉತ್ತಮವಾಗಿದ್ದು, ಕೆಲಸದ ವಿಷಯದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ.
ಮೀನ ರಾಶಿ: ಮಿಶ್ರ ಫಲಿತಾಂಶಗಳು ನಿಮ್ಮನ್ನು ಆವರಿಸಲಿದೆ. ಹಣಕಾಸಿನಲ್ಲಿ ಜಾಗ್ರತೆ ಅಗತ್ಯ. ಸಂಗಾತಿಯ ಒಡನಾಟ ಹೆಚ್ಚುತ್ತದೆ. ಸಾಮಾಜಿಕ ಒಡನಾಟಗಳು ಫಲ ಕೊಡುತ್ತದೆ.