ಮೇಷ ರಾಶಿ: ಈ ದಿನ ನೀವು ಮಾಡಿದ ಕಾರ್ಯಗಳು ಲಾಭವನ್ನು ನೀಡುತ್ತವೆ. ಕುಟುಂಬದೊoದಿಗೆ ಕಾಲ ಕಳೆಯುವಿರಿ. ಪ್ರವಾಸದ ಲಕ್ಷಣಗಳಿವೆ. ಮಾರ್ಕೆಂಟಿoಗ್, ಬ್ಯಾಂಕಿoಗ್ ವಿಭಾಗದಲ್ಲಿರುವವರಿಗೆ ಉತ್ತಮ ದಿನ.
ವೃಷಭ ರಾಶಿ: ದುಪ್ಪಟ್ಟು ಲಾಭ ಸಿಗುವ ದಿನವಾಗಿದ್ದು, ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಉದ್ಯೋಗದ ಅವಕಾಶಗಳು ಬರಲಿದೆ. ಮದುವೆ ಮಾತುಕಥೆಗಳಿಗೆ ಸಕಾಲ. ರಾಜಕೀಯ, ಸಮಾಜ ಸೇವೆಯಲ್ಲಿರುವವರಿಗೆ ಯಶಸ್ಸು ಸಿಗಲಿದೆ.
ಮಿಥುನ ರಾಶಿ: ಧೈರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹೂಡಿಕೆಯಿಂದ ಲಾಭ ಸಿಗಲಿದೆ. ರೈತರಿಗೆ ಉತ್ತಮ ಸಮಯ. ಉದ್ಯೋಗ ಹುಡುಕಾಟದಲ್ಲಿರುವವರಿಗೆ ಶುಭಗಳಿಗೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ.
ಕರ್ಕ ರಾಶಿ: ಉದ್ಯೋಗ, ವ್ಯಾಪಾರದಲ್ಲಿ ಸಹಕಾರದಿಂದ ಯಶಸ್ಸು ಸಿಗಲಿದೆ. ಪರಶಿವನ ಅನುಗ್ರಹದಿಂದ ಉನ್ನತ ಸ್ಥಾನ ದೊರೆಯಲಿದೆ. ನಿಮ್ಮ ಪರಿಶ್ರಮ ಫಲಕಾರಿಯಾಗುತ್ತದೆ.
ಸಿಂಹ: ನಿಮ್ಮ ಪ್ರಯತ್ನಗಳು ಸರಿಯಾದ ಮಾರ್ಗದಲ್ಲಿದ್ದರೆ ಜಯ ಸಿಗುತ್ತದೆ. ವೈಯಕ್ತಿಕ ವಿಷಯಗಳಲ್ಲಿ ಸಂವಹನ ಮುಖ್ಯವಾಗಿದೆ. ಧೈರ್ಯದಿಂದ ಕೆಲಸ ಮಾಡಿ.
ಕನ್ಯಾ ರಾಶಿ: ಕೆಲಸದಲ್ಲಿ ಎಚ್ಚರಿಕೆ ಅಗತ್ಯ. ವಿವಾದದಿಂದ ದೂರವಿದ್ದಷ್ಟು ಒಳಿತು. ವ್ಯಾಪಾರದಲ್ಲಿ ಲಾಭ ಸಾಧ್ಯ. ಸೂರ್ಯನ ಅನುಗ್ರಹದಿಂದ ಯಶಸ್ಸು ಸಿಗಲಿದೆ.
ತುಲಾ ರಾಶಿ: ವ್ಯಾಪಾರದಲ್ಲಿ ಲಾಭ ಸಿಗಲಿದೆ. ಮನಸ್ಸಿನ ಬಯಕೆಗಳು ಈಡೇರಲಿದೆ. ದೂರ ಪ್ರಯಾಣಕ್ಕೆ ಈ ದಿನ ಸೂಕ್ತವಲ್ಲ.
ವೃಶ್ಚಿಕ: ಹೊಸ ಯೋಜನೆಗಳು ಲಾಭದಾಯಕವಾಗಿರಲಿದೆ. ಕುಟುಂಬ ಶಾಂತಿ-ನೆಮ್ಮದಿ ಸಿಗಲಿದೆ. ದೀರ್ಘಕಾಲದ ಹಣಕಾಸಿನ ಸಮಸ್ಯೆಗಳು ದೂರವಾಗಲಿದೆ. ಉದ್ಯೋಗ ಅವಕಾಶಗಳು ಅರೆಸಿ ಬರಲಿದೆ.
ಧನು ರಾಶಿ: ಪ್ರಯಾಣ ಮತ್ತು ಶಿಕ್ಷಣಕ್ಕೆ ಉತ್ತಮ ಸಮಯ. ನೀವು ಎದುರಿಸುವ ಸಮಸ್ಯೆಗಳು ದೂರವಾಗಲಿದೆ. ಪರಿಸ್ಥಿತಿಗೆ ಹೊಂದಿಕೊAಡು ಹೋಗುವುದು ಜಾಣತನ
ಮಕರ ರಾಶಿ: ಮನೆಯ ಬಗ್ಗೆ ಕಾಳಜಿವಹಿಸಿ. ಕುಟುಂಬದವರ ಆಗು-ಹೋಗುಗಳಿಗೆ ಸ್ಪಂದಿಸಿ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
ಕುಂಭ ರಾಶಿ: ಹಣಕಾಸು ಯೋಗ ಕೂಡಿ ಬರಲಿದೆ. ಹೂಡಿಕೆಯಲ್ಲಿ ಲಾಭ ಸಿಗಲಿದೆ. ಮಾಡುವ ಕೆಲಸದಲ್ಲಿ ಶ್ರದ್ದೆ ಅಗತ್ಯ. ಸಂಪತ್ತು ಅಧಿಕವಾಗಲಿದೆ.
ಮೀನ ರಾಶಿ: ಕೆಲಸದಲ್ಲಿ ಬುದ್ಧಿವಂತಿಕೆ ಬೇಕು. ಜೀವನದಲ್ಲಿ ಯಶಸ್ಸು ಸಾಧಿಸಲು ಶ್ರಮ ಅಗತ್ಯ. ವ್ಯಾಪಾರ-ವಹಿವಾಟು ತಕ್ಕಮಟ್ಟಿಗೆ ಆಗಲಿದೆ. ಒತ್ತಡ ನಿವಾರಣೆ ಆಗಲಿದ್ದು, ಕುಟುಂಬದಲ್ಲಿ ನೆಮ್ಮದಿ ಕಾಣುವಿರಿ.