ಮೇಷ ರಾಶಿ: ನಿತ್ಯದ ಕೆಲಸದಲ್ಲಿ ತೊಂದರೆ ಆಗುವ ಸಾಧ್ಯತೆಗಳಿವೆ. ನಿರೀಕ್ಷಿತ ಲಾಭ ಸಿಗುವುದಿಲ್ಲ. ಶತ್ರುಗಳ ಕಾಟ ಜೋರಾಗಲಿದೆ. ಶನಿದೇವನ ಪೂಜೆಯಿಂದ ಉತ್ತಮ ಫಲಗಳು ದೊರೆಯುತ್ತವೆ. ಆರ್ಥಿಕ ವಿಷಯಗಳಲ್ಲಿ ಜಾಗ್ರತೆ ಅಗತ್ಯ.
ವೃಷಭ ರಾಶಿ: ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಹೊಸ ಆದಾಯದ ಅವಕಾಶಗಳು ಸಿಗುತ್ತದೆ. ಕುಟುಂಬ ಸದಸ್ಯರೊಂದಿಗೆ ಸಂತೋಷದ ದಿನ ಕಳೆಯುವಿರಿ. ವೃತ್ತಿಯಲ್ಲಿ ಸವಾಲು ಎದುರಾದರೂ ಯಶಸ್ಸು ಸಿಗಲಿದೆ.
ಮಿಥುನ ರಾಶಿ: ವೃತ್ತಿಪರ ಜೀವನದಲ್ಲಿ ಪ್ರಗತಿ ಕಂಡುಬರುತ್ತದೆ. ಆರ್ಥಿಕ ಲಾಭಕ್ಕೆ ಸಹಕಾರ ಸಿಗಲಿದೆ. ಕುಟುಂಬದಲ್ಲಿ ಒಗ್ಗಟ್ಟು ಮೂಡಲಿದೆ. ಪ್ರಯಾಣಗಳು ಶುಭ ಫಲ ನೀಡುತ್ತವೆ.
ಕರ್ಕ ರಾಶಿ: ಭಾವನಾತ್ಮಕ ಸಮತೋಲನ ಮುಖ್ಯ. ಉದ್ಯೋಗದಲ್ಲಿ ಕಷ್ಟಪಟ್ಟರೆ ಮಾತ್ರ ಫಲ ಸಿಗುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಗಮನಹರಿಸಿ. ವಿದ್ಯಾರ್ಥಿಗಳು ಚಿಂತೆಯಿAದ ಮುಕ್ತರಾಗುತ್ತಾರೆ.
ಸಿಂಹ ರಾಶಿ: ಅನೀರಿಕ್ಷಿತ ಹಣಕಾಸು ನಷ್ಟ ಆಗಲಿದೆ. ಸಾಲ ಕೊಡಬೇಡಿ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ ಕಂಡುಬರುತ್ತದೆ. ಪ್ರಭಾವಶಾಲಿ ವ್ಯಕ್ತಿಗಳ ಸಂಪರ್ಕ ಸಹಾಯಕವಾಗಲಿದೆ. ದುರಭ್ಯಾಸಗಳಿಂದ ದೂರವಿರದಿದ್ದರೆ ದಾಂಪತ್ಯ ಜೀವನದಲ್ಲಿ ಒಳ ಜಗಳ ಆಗಲಿದೆ.
ಕನ್ಯಾ ರಾಶಿ: ಕೆಲಸದಲ್ಲಿ ಅಡೆತಡೆ ಎದುರಾಗಲಿದೆ. ಅದಾಗಿಯೂ, ಬಾಕಿ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಅತಿಥಿಗಳ ಆಗಮನದಿಂದ ಸಂತೋಷ ಸಿಗಲಿದೆ. ಬುದ್ಧಿವಂತಿಕೆ ಬಳಸಿದರೆ ಸಮಸ್ಯೆ ಬಗೆಹರಿಯಲಿದೆ.
ತುಲಾ ರಾಶಿ: ಉದ್ಯೋಗ ಅವಕಾಶಗಳು ಇನ್ನಷ್ಟು ವಿಳಂಬವಾಗಲಿದೆ. ಆರ್ಥಿಕ ಬಿಕ್ಕಟ್ಟು ಎದುರಾಗದಂತೆ ಜಾಗ್ರತೆವಹಿಸಿ. ಶನಿ ಪೂಜೆಯಿಂದ ಫಲಗಳು ಸಿಗುತ್ತವೆ. ಬೇರೆಯವರಿಗೆ ಸಹಾಯ ಮಾಡಲು ಪ್ರಯತ್ನಿಸಿ
ವೃಶ್ಚಿಕ ರಾಶಿ: ಆರ್ಥಿಕ ಲಾಭ ಹೆಚ್ಚಾಗಲಿದೆ. ಕಚೇರಿ ಕೆಲಸದಲ್ಲಿ ಮೆಚ್ಚುಗೆ ಸಿಗಲಿದೆ. ಕುಟುಂಬದ ಬೆಂಬಲ ಪಡೆದು ಕೆಲಸ ಮಾಡಿ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ. ಸಮಾಜದಲ್ಲಿ ಗೌರವ ಸಿಗಲಿದೆ.
ಧನು ರಾಶಿ: ವೃತ್ತಿಯಲ್ಲಿನ ದೃಢತೆಯಿಂದ ಯಶಸ್ಸು ಖಚಿತ. ಹಣಕಾಸಿನಲ್ಲಿ ಜಾಗರೂಕತೆ ಅಗತ್ಯ. ಉದ್ಯೋಗದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿದೆ. ಆರೋಗ್ಯ ಚನ್ನಾಗಿರಲಿದೆ.
ಮಕರ ರಾಶಿ: ಸರ್ಕಾರಿ ಕೆಲಸಗಳು ವಿಳಂಬವಾಗಲಿದೆ. ವಿರೋಧಿಗಳು ಹೆಚ್ಚಾಗಲಿದ್ದಾರೆ. ವಾಹನ ಖರೀದಿಗೆ ಒಳ್ಳೆ ದಿನ ಅಲ್ಲ. ಶನಿಸ್ತೋತ್ರ ಪಠಣ ನಿಮಗೆ ಉಪಯುಕ್ತ. ಆರೋಗ್ಯದ ಕಡೆಯೂ ಗಮನಹರಿಸಿ.
ಕುಂಭ ರಾಶಿ: ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ. ಕೃಷಿ ಕೆಲಸದಲ್ಲಿ ಲಾಭ ಸಿಗಲಿದೆ. ಹಿರಿಯರ ಮಾತು ಗೌರವಿಸಿ. ಗೌರವ ಸಿಗಲಿದೆ. ಕಣ್ಣಿನ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಅಗತ್ಯ.
ಮೀನ ರಾಶಿ: ಖರ್ಚು-ವೆಚ್ಚ ಹೆಚ್ಚಳದಿಂದ ಶುಭ ಕಾರ್ಯಗಳಿಗೆ ಸಮಸ್ಯೆಯಾಗಬಹುದು. ಶತ್ರುಗಳ ಕಾಟ ಹೆಚ್ಚಾಗಲಿದ್ದು, ವಾದ ಮಾಡದಿರುವುದು ಒಳಿತು. ಉದ್ಯೋಗದಲ್ಲಿ ಕಿರಿಕಿರಿ ದೂರ ಮಾಡಲು ದೇವರ ಧ್ಯಾನ ಮಾಡಿ. ಶನಿ ದೇವರ ಆರಾಧನೆ ಪ್ರಯೋಜನಕಾರಿ.