ಮೇಷ ರಾಶಿ: ಈ ದಿನ ನಡೆಯುವ ಕೆಲ ಸಂಗತಿಗಳು ಕಲಹಕ್ಕೆ ಕಾರಣವಾಗಲಿದೆ. ಸಹನೆಯಿಂದ ಕೆಲಸ ಮಾಡುವುದು ಮುಖ್ಯ. ಆರ್ಥಿಕ ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸುವುದು ಅಗತ್ಯ.
ವೃಷಭ ರಾಶಿ: ಸಾಲದ ಬಿಕ್ಕಟ್ಟು ದೂರವಾಗಲಿದೆ. ಆರೋಗ್ಯದಲ್ಲಿ ಲಘು ಸಮಸ್ಯೆಗಳು ಕಾಣಲಿದೆ. ಬಿಸಿಲು ಪ್ರದೇಶದಲ್ಲಿ ತಿರುಗಾಟಕ್ಕೆ ಹೋಗಬೇಡಿ.
ಮಿಥುನ ರಾಶಿ: ಹಣಕಾಸು ವ್ಯವಹಾರಗಳು ಈ ದಿನ ಬೇಡ. ಕೆಲಸ ಕಾರ್ಯಗಳು ಸರಾಗವಾಗಿ ಸಾಗಲಿದೆ. ವ್ಯಕ್ತಿಕತ ವಿಷಯಗಳ ಕಡೆ ಗಮನಹರಿಸಿ.
ಕರ್ಕ ರಾಶಿ: ಕೆಲಸದಲ್ಲಿ ಅಧಿಕ ಒತ್ತಡ ಎದುರಾಗಲಿದೆ. ಆ ಒತ್ತಡ ಸರಿಯಾಗಿ ಎದುರಿಸಿದರೆ ಸಮಸ್ಯೆಗಳಿಲ್ಲ. ಆರ್ಥಿಕವಾಗಿ ಯಶಸ್ಸು ಸಿಗಲಿದೆ.
ಸಿಂಹ ರಾಶಿ: ಜೀವನದಲ್ಲಿ ಮುನ್ನಡೆ ಸಾಧಿಸಲು ತಾಳ್ಮೆ ಅಗತ್ಯ. ನಿಯಮಿತ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ನಿಮ್ಮ ವ್ಯಕ್ತಿತ್ವವನ್ನು ಅನಾವರಣಗೊಳಿಸಲು ಸಕಾಲ.
ಕನ್ಯಾ ರಾಶಿ: ನಿಮ್ಮ ಶ್ರಮಕ್ಕೆ ಸಾರ್ಥಕತೆ ದೊರೆಯಲಿದೆ. ಯಾವುದೇ ಹಣಕಾಸಿನ ನಿರ್ಧಾರದಲ್ಲಿ ಜಾಗ್ರತೆ ಅಗತ್ಯ. ಕುಟುಂಬ ಸಂಬAಧಗಳಲ್ಲಿ ಸೌಹಾರ್ಧ ಹೆಚ್ಚಿಸಲು ಪ್ರಯತ್ನಿಸಿ.
ತುಲಾ ರಾಶಿ: ಹಣಕಾಸು ವಿಷಯದಲ್ಲಿ ಧೈರ್ಯದ ಜೊತೆ ತಾಳ್ಮೆಯೂ ಬೇಕು. ಆರೋಗ್ಯದ ಕಡೆ ಗಮನಹರಿಸಿ. ಅನಗತ್ಯ ಮಾತು ಬೇಡ.
ವೃಶ್ಚಿಕ ರಾಶಿ: ವೃತ್ತಿ ಜೀವನದಲ್ಲಿ ಉನ್ನತಿ ಸಾಧ್ಯವಿದೆ. ವ್ಯವಹಾರದಲ್ಲಿ ನೂತನ ಅವಕಾಶಗಳು ಸಿಗುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸವಾದರೆ ವೈದ್ಯರನ್ನು ಭೇಟಿ ಮಾಡಿ.
ಧನು ರಾಶಿ: ಉದ್ಯೋಗ ಹುಡುಕಾಟದಲ್ಲಿರುವುವರಿಗೆ ಶುಭ ಸುದ್ದಿಯ ಸಾಧ್ಯತೆಗಳಿವೆ. ಹೊಸ ಉದ್ಯೋಗದ ನಿರೀಕ್ಷೆಯಲ್ಲಿರಿ. ಮನಸ್ಸಿಗೆ ಶಾಂತಿ ಸಿಗಲಿದೆ.
ಮಕರ ರಾಶಿ: ನಿಮ್ಮ ಶ್ರಮಕ್ಕೆ ತಕ್ಕ ಪ್ರತಿ ಫಲ ಸಿಗಲಿದೆ. ಹೊಸ ಯೋಜನೆಗಳ ಅನುಷ್ಠಾನ ಆಗಲಿದೆ. ಹಣಕಾಸು ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಕುಂಭ ರಾಶಿ: ಮಾತುಗಾರಿಕೆಯಿಂದ ಯಶಸ್ಸು ಸಾಧ್ಯವಿದೆ. ಸ್ನೇಹಿತರ ನೆರವು ಧೈರ್ಯ ಕೊಡಲಿದೆ. ಶ್ರದ್ಧೆಯಿಂದ ಮಾಡಿದ ಕೆಲಸ ಸರಿಯಾಗಿ ಸಾಗಲಿದೆ.
ಮೀನ ರಾಶಿ: ಆರೋಗ್ಯವನ್ನು ಸರಿಯಾಗಿರಿಸಿಕೊಂಡರೆ ಆನಂದದಿAದ ಜೀವನ ನಡೆಸಲು ಸಾಧ್ಯ. ಸೋಮಾರಿತನದಿಂದ ದೂರವಿದ್ದು, ಲವಲವಿಕೆಯಿಂದ ಇರಲು ಪ್ರಯತ್ನಿಸಿ.