ಸ್ನೇಹಿತರೊಬ್ಬರಿಗೆ ಸಾಲ ಕೊಟ್ಟಿದ್ದ ಶಿರಸಿಯ ಮತೀನ್ ಅಬ್ದುಲ್ ಗಫಾರ್ ಅವರು ಸಾಲ ಮರಳಿಸದ ಕಾರಣ ಸ್ನೇಹಿತನ ಮಗಳನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ. 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಕಾರಣ ಮತೀನ್ ಅಬ್ದುಲ್ ಗಫಾರ ವಿರುದ್ಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಿದ್ದಾರೆ.
ಶಿರಸಿಯ ಮತೀನ್ ಅಬ್ದುಲ್ ಗಫಾರ ಎಂಬಾತರು ವ್ಯಕ್ತಿಯೊಬ್ಬರಿಗೆ ಸಾಲ ಕೊಟ್ಟಿದ್ದರು. ಸಾಲಪಡೆದ ವ್ಯಕ್ತಿ ಅದನ್ನು ಸಕಾಲದಲ್ಲಿ ತೀರಿಸಿರಲಿಲ್ಲ. ಸಾಲ ಹಿಂಪಡೆಯುವ ನೆಪದಲ್ಲಿ ಆ ವ್ಯಕ್ತಿಯ ಮನೆಗೆ ಭೇಟಿ ನೀಡುತ್ತಿದ್ದ ಮತೀನ್ ಅಬ್ದುಲ್ ಗಫಾರ ಅಲ್ಲಿದ್ದ 10 ವರ್ಷದ ಬಾಲಕಿಯನ್ನು ಪುಸಲಾಯಿಸುವ ಪ್ರಯತ್ನ ಮಾಡಿದ್ದರು. ಮಂಗಳವಾರ ಸಂಜೆಯೂ ಸಾಲ ಹಿಂಪಡೆಯಲು ಆ ವ್ಯಕ್ತಿ ಮನೆಗೆ ಹೋಗಿದ್ದ ಮತೀನ್ ಅಬ್ದುಲ್ ಗಫಾರ ಅಲ್ಲಿ ಬಾಲಕಿ ಬಿಟ್ಟು ಬೇರೆ ಯಾರೂ ಇಲ್ಲದಿರುವುದನ್ನು ಗಮನಿಸಿದರು.
ಆ ಬಾಲಕಿಯನ್ನು ತನ್ನ ವಶಕ್ಕೆಪಡೆದ ಮತೀನ್ ಅಬ್ದುಲ್ ಗಫಾರ ಹೀನಾಯ ಕೃತ್ಯವೆಸಗಿದರು. ಅದಾದ ನಂತರ ಕುಟುಂಬದವರು ಮನೆಗೆ ಮರಳಿದ್ದು, ಬಾಲಕಿ ನಡೆದ ವಿಷಯ ವಿವರಿಸಿದರು. ಬಾಲಕಿ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಅವರ ತಾಯಿ ಪೊಲೀಸ್ ದೂರು ನೀಡಿದರು. ಮತೀನ್ ಅಬ್ದುಲ್ ಗಫಾರ ತಲೆಮರೆಸಿಕೊಂಡಿದ್ದು, ಪೊಲೀಸರು ಅತ್ಯಾಚಾರಿ ಮತೀನ್ ಅಬ್ದುಲ್ ಗಫಾರ ಅವರ ಹುಡುಕಾಟ ನಡೆಸಿದ್ದಾರೆ.