ಮೂರು ತಿಂಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವೈದ್ಯರು ಮನೆ ಮನೆಗೆ ಭೇಟಿ ನೀಡಿ 4,09,448 ಆರೋಗ್ಯ ತಪಾಸಣೆ ನಡೆದಿದ್ದಾರೆ. ಈ ವೇಳೆ 1303 ಜನರಲ್ಲಿ ಹೊಸದಾಗಿ ವಿವಿಧ ರೋಗಗಳು ಕಾಣಿಸಿಕೊಂಡಿದೆ. ಜೊತೆಗೆ 8558 ಜನರಲ್ಲಿ ವಿವಿಧ ರೋಗವಿರುವ ಅನುಮಾನವಿದ್ದು, ಆ ಬಗ್ಗೆ ತಪಾಸಣೆ ಮುಂದುವರೆದಿದೆ.
ಗೃಹ ಆರೋಗ್ಯ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ 2025ರ ಅಗಸ್ಟದಿಂದ ಅಕ್ಟೊಬರಿನವರೆಗೆ ಆರೋಗ್ಯ ತಪಾಸಣೆ ನಡೆದಿದ್ದು, ಅದರ ವರದಿ ಬಹಿರಂಗವಾಗಿದೆ. ಇದರಲ್ಲಿ 1,05,365 ಜನ ರಕ್ತದೊತ್ತಡ, 78084 ಮಧುಮೇಹ ಪರೀಕ್ಷೆಗೆ ಒಳಗಾಗಿದ್ದಾರೆ. ಅದರೊಂದಿಗೆ 3800 ಜನ ಮಾನಸಿಕ ಆರೋಗ್ಯ ಸಮಸ್ಯೆ, 7106 ಜನ ಅನಿಮಿಯಾ, 78042 ಜನ ಬಾಯಿ ಕ್ಯಾನ್ಸರ್, 29848 ಜನ ಸ್ತನ ಕ್ಯಾನ್ಸರ್, 8759 ಜನ ಗರ್ಭಕಂಠದ ಕ್ಯಾನ್ಸರ್, 21498 ಮಧುಮೇಹ ಕಾಲು, 19279 ಡಯಾಬೇಟಿಕ್ ರೆಟಿನೋಪತಿ ಪರೀಕ್ಷೆಗೆ ಒಳಗಾಗಿದ್ದಾರೆ. 16822 ಮಂದಿಗೆ ಉಚಿತವಾಗಿ ಸರ್ಕಾರದಿಂದ ಔಷಧವನ್ನು ವಿತರಿಸಲಾಗಿದೆ.
ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಸಾಂಕ್ರಾಮಿಕವಲ್ಲದ ರೋಗಗಳ ಕುರಿತಂತೆ ಉಚಿತವಾಗಿ ಆರೋಗ್ಯ ಪರೀಕ್ಷೆಗಳನ್ನು ನಡೆಸುವ ಈ ಯೋಜನೆಯಡಿ ಆರೋಗ್ಯ ಕಾರ್ಯಕರ್ತರ ಒಂದು ತಂಡ ದಿನಕ್ಕೆ 15 ಮನೆಗಳ ತಪಾಸಣೆ ನಡೆಸಲಿದೆ. ಪ್ರತಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಕಡ್ಡಾಯವಾಗಿ ಈ ತಂಡ ಮನೆ ಮನೆ ಭೇಟಿ ನೀಡುತ್ತಿದೆ. ರಕ್ತದೊತ್ತಡ ಸಮಸ್ಯೆ, ಮಧುಮೇಹ, ಬಾಯಿ, ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್, ನಿದ್ದೆಯಲ್ಲಿ ಉಸಿರುಗಟ್ಟುವಿಕೆ, ಮಾನಸಿಕ ಆರೋಗ್ಯದ ತಪಾಸಣೆ ನಡೆಸಲಿದ್ದು, ದೃಢಪಟ್ಟ ಪ್ರಕರಣಗಳಿಗೆ ಅಗತ್ಯ ಔಷÀಧ ವಿತರಣೆ, ಕೆಲವರಿಗೆ ಜೀವನ ಶೈಲಿ ಮಾರ್ಪಾಡಿಗೆ ಸಲಹೆ ನೀqಲಾಗುತ್ತಿದೆ. ಆರೈಕೆಯಲ್ಲಿರುವ ರೋಗಿಗಳಿಗೆ, ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಔಷÀಧೋಪಚಾರ ಮತ್ತು ಉಚಿತವಾಗಿ ಮಾತ್ರೆಗಳ ವಿತರಣೆ ನಡೆದಿದೆ.
ಆಶಾ ಕಾರ್ಯಕರ್ತೆಯರು ಸಹ ತಮ್ಮ ವ್ಯಾಪ್ತಿಯ ಮನೆಗೆ ತೆರಳಿ ಗೃಹ ಆರೋಗ್ಯ ಅಡಿಯಲ್ಲಿ ಬರುವ ವಿವಿಧ ಬಗೆಯ 14 ಕಾಯಿಲೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಾರೆ. ಅವರು ಸಂಶಯಾಸ್ಪದ ಪ್ರಕರಣಗಳಿದ್ದಲ್ಲಿ ಹತ್ತಿರದ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ತಪಾಸಣೆಗಾಗಿ ಕಳುಹಿಸುತ್ತಾರೆ. ಆಯುಷ್ಮಾನ್À ಆರೋಗ್ಯ ಕೇಂದ್ರದಲ್ಲಿ ಎಲ್ಲಾ 14 ಕಾಯಿಲೆಗಳ ತಪಾಸಣೆಯನ್ನು ಸಮುದಾಯ ಆರೋಗ್ಯಾಧಿಕಾರಿ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮಾಡಿ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ನಿರ್ದೇಶನ ಮಾಡುತ್ತಾರೆ.
`ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ರೋಗ ಬಾರದಂತೆ ಮುನ್ನಚ್ಚರಿಕೆವಹಿಸುವುದು ಮುಖ್ಯ. ಗೃಹ ಆರೋಗ್ಯ ಯೋಜನೆಯ ಮೂಲಕ ರೋಗಗಳನ್ನು ಸಾಕಷ್ಟು ಮೊದಲೇ ಪತ್ತೆ ಹಚ್ಚಲು ಸಾಧ್ಯವಿದ್ದು, ಆರೋಗ್ಯ ಸಮಸ್ಯೆ ಜೊತೆ ಅಕಾಲಿಕ ಮರಣವನ್ನು ತಡೆಗೆ ಇದು ಸಹಕಾರಿ’ ಎಂದು ಜಿಲ್ಲಾ ರಾಷ್ಟಿಯ ಕಾರ್ಯಕ್ರಮ ಅಧಿಕಾರಿ ಡಾ ಶಂಕರ್ ರಾವ್ ಅವರು ಹೇಳಿದ್ದಾರೆ.