ಸಾಲು ಮರದ ತಿಮ್ಮಕ್ಕ ಅವರ ನಿಧನದ ಹಿನ್ನಲೆ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ಆದೇಶ ಹರಿದಾಡುತ್ತಿದೆ. ಆದರೆ, ಇದು ಸರ್ಕಾರದ ಅಧಿಸೂಚನೆಯೇ ಅಲ್ಲ!
Advertisement. Scroll to continue reading.
ನವೆಂಬರ್ 14ರಂದು ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಅವರು ನಿಧನರಾಗಿದ್ದಾರೆ. 114 ವರ್ಷಗಳ ಕಾಲ ಜೀವಿಸಿದ ಅವರು ಸಾವಿರಾರು ಮರಗಳನ್ನು ನೆಟ್ಟು ಪೋಷಿಸಿದ್ದು, ಅವರ ಸೇವೆಯ ಸ್ಮರಣಾರ್ಥ ಸರ್ಕಾರ ಸಂತಾಪ ವ್ಯಕ್ತಪಡಿಸಿದೆ. ಜೊತೆಗೆ ಈ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್ ಆರ್ ಅವರು ಅಧಿಸೂಚನೆ ಹೊರಡಿಸಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಆದೇಶಿಸಿದ್ದಾರೆ.
ಆದರೆ, ಈ ನಡುವೆ ಸರ್ಕಾರದ ಉಪಕಾರ್ಯದರ್ಶಿ ಹೆಸರಿನಲ್ಲಿ ಇನ್ನೊಂದು ಅಧಿಸೂಚನೆ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ಅಧಿಸೂಚನೆಯಲ್ಲಿ ರಾಜ್ಯದ ಎಲ್ಲಡೆ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಬಗ್ಗೆ ನಮೂದಿಸಲಾಗಿದೆ. ಆದರೆ, `ಈ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರಜೆ ಘೋಷಿಸಿ ಕಿಡಿಗೇಡಿಗಳು ಹೊರಡಿಸಿದ ಅಧಿಸೂಚನೆ ಹರಿದಾಡುತ್ತಿದ್ದು, ಶನಿವಾರ ಶಾಲಾ-ಕಾಲೇಜಿಗೆ ರಜೆ ಇಲ್ಲ.
ಈ ಬಗ್ಗೆ ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕಿ ಲತಾ ನಾಯಕ ಅವರು ಸಹ ಸ್ಪಷ್ಟಪಡಿಸಿದ್ದಾರೆ. `ಶಾಲಾ ಕಾಲೇಜಿಗೆ ರಜೆ ಎನ್ನವ ಬಗ್ಗೆ ಸರ್ಕಾರದ ಹೆಸರಿನಲ್ಲಿ ಪತ್ರ ಹರಿದಾಡುತ್ತಿದ್ದು, ಅದರಲ್ಲಿ ಸತ್ಯಾಂಶವಿಲ್ಲ. ಶನಿವಾರ ಶಾಲಾ-ಕಾಲೇಜುಗಳು ಎಂದಿನoತೆ ನಡೆಯಲಿದೆ’ ಎಂದು ಲತಾ ನಾಯಕ ಅವರು ಹೇಳಿದ್ದಾರೆ. ನಕಲಿ ಅಧೀಸೂಚನೆಯಲ್ಲಿ ಬಳಸಲಾದ ಅಕ್ಷರಗಳ ಪಾಂಟ್ ಅಧಿಕೃತ ಅಧಿಸೂಚನೆಗಿಂತ ಬಿನ್ನವಾಗಿದೆ. ಜೊತೆಗೆ ಅಧಿಸೂಚನೆಯಲ್ಲಿ ಹಾಕಿದ ಪ್ರತಿಗಳು ಸಹ ಸಂಬoಧವಿಲ್ಲದವರಿಗೆ ರವಾನಿಸಿದ ರೀತಿಯಿದ್ದು, ಸರ್ಕಾರಿ ಅಧಿಸೂಚನೆಯನ್ನು ಕಿಡಿಗೇಟಿಗಳು ಎಡಿಟ್ ಮಾಡಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
`ಸುಳ್ಳು ಸುದ್ದಿ ಡಿಲಿಟ್ ಮಾಡಿ. ಸತ್ಯವನ್ನು ಶೇರ್ ಮಾಡಿ’