ಕೇಂದ್ರ ಸರ್ಕಾರ ರೈತರ ಕಲ್ಯಾಣಕ್ಕಾಗಿ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ ಜಾರಿಗೆ ತಂದಿದ್ದು, ಕೀಟಗಳ ಬಗ್ಗೆ ಮಾಹಿತಿ ಹಾಗೂ ಅವುಗಳಿಂದ ಬರುವ ರೋಗ ನಿಯಂತ್ರಣಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಹೊರ ತಂದಿದೆ.
National Pest Surveillance System- NPSS ಎಂಬ ಅಪ್ಲಿನೇಶನ್’ನ್ನು ಮೊಬೈಲಿಗೆ ಅಳವಡಿಸಿದ ರೈತರು ಉಚಿತವಾಗಿ ಕೀಟಿ ನಿಯಂತ್ರಣ ಮಾಹಿತಿಪಡೆಯಲು ಅವಕಾಶ ನೀಡಲಾಗಿದೆ. ಪ್ಲೇ ಸ್ಟೋರಿನಲ್ಲಿ ಈ ಅಪ್ಲಿಕೇಶನ್ ಲಭ್ಯವಿದ್ದು, ವಿವಿಧ ಬೆಳೆಗಳಲ್ಲಿ ಕಾಣಬರುವ ಕೀಟ ಹಾಗೂ ರೋಗಗಳ ನಿಯಂತ್ರಣದ ಬಗ್ಗೆ ಅಲ್ಲಿ ಮಾಹಿತಿ ನೀಡಲಾಗುತ್ತದೆ.
ಕನ್ನಡ ಸೇರಿ ಅನೇಕ ಭಾಷೆಗಳಲ್ಲಿ ಮಾಹಿತಿ ಲಭ್ಯವಿದೆ. ಬಳಕೆದಾರ ಮಾಹಿತಿ ಪಡೆಯುವ ಮುನ್ನ ಬೆಳೆ, ಕೀಟ, ಊರಿನ ಮಾಹಿತಿಯನ್ನು ಆಯ್ಕೆ ಮಾಡಬೇಕಿದ್ದು, ಕನ್ನಡ ಅಕ್ಷರಗಳು ಅಲ್ಲಿ ಸರಿಯಾಗಿ ಪ್ರದರ್ಶನವಾಗುತ್ತಿಲ್ಲ. ಜೊತೆಗೆ ಮುಖ್ಯವಾಗಿ ಆಹಾರ ಬೆಳೆಗಳ ಕೀಟಬಾಧೆಗೆ ಮಾತ್ರ ಅಲ್ಲಿ ಪರಿಹಾರ ಒದಗಿಸುವ ಮಾಹಿತಿ ಸಿಗುತ್ತಿದೆ. ಅಕ್ಷರದ ಜೊತೆ ಧ್ವನಿ ಮುದ್ರಣದ ರೂಪದಲ್ಲಿಯೂ ಕೀಟನಾಶಕ ಬಳಕೆ ಬಗ್ಗೆ ಅಪ್ಲಿಕೇಶನ್ ಮೂಲಕ ಮಾಹಿತಿ ನೀಡಲಾಗುತ್ತಿದೆ.
ಅದಾಗಿಯೂ, ರೈತರು ಈ ಮೊಬೈಲ್ ಅಪ್ಲಿಕೇಶನ್ ಬಳಸಿ ಕೀಟ ನಿಯಂತ್ರಣದ ಬಗ್ಗೆ ಮಾಹಿತಿಪಡೆಯಲು ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಕೋರಿದ್ದಾರೆ.