ಜಲ ಜೀವನ ಯೋಜನೆ ಫಲಾನುಭವಿಗಳಿಂದ ಅಪರಿಚಿತರು ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಇದರೊಂದಿಗೆ ಅಪರಿಚಿತರು ಆಧಾರ್ ಕಾರ್ಡನ್ನು ಸಹ ಒಟ್ಟುಗೂಡಿಸುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾ ಪಂಚಾಯತಗೆ ದೂರು ನೀಡುವುದಾಗಿ ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರವರು ಹೇಳಿದ್ದಾರೆ. `ಜಲ ಜೀವನ ಯೋಜನೆ ಪಲಾನುಭವಿಗಳನ್ನು ಭೇಟಿ ಮಾಡಿದ ಕೆಲವರು ಅವರ ಆಧಾರ್ ಕಾರ್ಡಪಡೆಯುತ್ತಿದ್ದಾರೆ. ಜೊತೆಗೆ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ’ ಎಂದು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ದೂರಿದ್ದಾರೆ.
`ಆಂದ್ರ ಪ್ರದೇಶದ ಕಾರ್ಮಿಕರು ಜಲ ಜೀವನ ಕೆಲಸದಲ್ಲಿ ತೊಡಗಿದ್ದು, ಅವರೇ ಆಧಾರ್ ಕಾರ್ಡ ಕೇಳುತ್ತಿದ್ದಾರೆ. ಜೊತೆಗೆ ಪ್ರತಿ ಫಲಾನುಭವಿಗಳಿಂದ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರು ಬಂದಿದೆ’ ಎಂದವರು ವಿವರಿಸಿದರು. `ಆಧಾರ್ ಕಾರ್ಡಪಡೆಯುವುದು ನಿಯಮಬಾಹಿರ. ಆ ಆಧಾರ್ ಕಾರ್ಡ ದುರುಪಯೋಗವಾಗುವ ಸಾಧ್ಯತೆಗಳು ಹೆಚ್ಚಿವೆ’ ಎಂದು ಹೇಳಿದರು.
`ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಣವೂ ಕೊಡಬೇಕಾಗಿಲ್ಲ. ಆಧಾರ್ ಕಾರ್ಡ ಸಹ ನೀಡುವ ಹಾಗಿಲ್ಲ ಎನ್ನುತ್ತಾರೆ. ಹೀಗಿದ್ದರೂ ಆಧಾರ್ ಕಾರ್ಡಪಡೆಯುವುದ ಏಕೆ? ಎಂದವರು ಪ್ರಶ್ನಿಸಿದರು. `ಈ ಬಗ್ಗೆ ವಿವರವಾದ ತನಿಖೆ ನಡೆಯಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ, ತ್ಯಾಗರಾಜ್ ಮುಕ್ರಿ, ಮುನ್ನ ಸಾಬ್ ಆಗ್ರಹಿಸಿದರು.