ಕರಾವಳಿ ಉತ್ಸವದ ಅಂಗವಾಗಿ ಬುಧವಾರ ಕಾರವಾರಕ್ಕೆ ಹೆಲಿಕಾಪ್ಟರ್ ಆಗಮಿಸಿದೆ.
Advertisement. Scroll to continue reading.
ಆಗಸದಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್ ನೋಡಿ ಸಂಭ್ರಮಿಸುತ್ತಿದ್ದ ಮಕ್ಕಳು ಈ ದಿನ ಸ್ವತಃ ಹೆಲಿಕಾಪ್ಟರಿನಲ್ಲಿ ಹಾರಾಡಿ ಸಂತಸವ್ಯಕ್ತಪಡಿಸಿದ್ದಾರೆ. ಆಶಾನಿಕೇತನ ಶಾಲೆಯ ಕಿವುಡ ಹಾಗೂ ಮಕ್ಕಳಿಗೆ ಶಾಸಕ ಸತೀಶ್ ಸೈಲ್ ಅವರು ತಮ್ಮ ಪ್ರಾಯೋಜಕತ್ವದಲ್ಲಿ ಹೆಲಿಕಾಪ್ಟರ್ ಯಾನ ನಡೆಸಿದ್ದಾರೆ. ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಹೆಲಿಕ್ಯಾಪ್ಟರ್ ಮೂಲಕ ಹಾರಾಟ ಮಾಡಿದ ಮಕ್ಕಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.
ಡಿಸೆAಬರ್ 21ರಂದು ನಡೆದ ಶಾಸಕ ಸತೀಶ್ ಸೈಲ್ ಅವರು ತಮ್ಮ ಜನ್ಮದಿನದ ಪ್ರಯುಕ್ತ ಆಶಾ ನಿಕೇತನ ವಿಶೇಷ ಶಾಲೆಗೆ ಭೇಟಿ ನೀಡಿದ್ದರು. ಆ ವೇಳೆಯಲ್ಲಿಯೇ ಮಕ್ಕಳನ್ನು ಹೆಲಿಕಾಪ್ಟರ್ ಮೂಲಕ ಹಾರಾಟ ನಡೆಸುವ ಯೋಜನೆ ರೂಪಿಸಿದ್ದರು. ಸತೀಶ್ ಸೈಲ್ ಅವರ ಪುತ್ರಿ ಸಾಚಿ ಸೈಲ್ ಸಹ ಮಕ್ಕಳಿಗೆ ವಿಶೇಷ ಕೊಡುಗೆ ನೀಡಲು ನಿರ್ಧರಿಸಿದ್ದು, ಈ ದಿನ ಸೈಲ್ ಕುಟುಂಬದವರು ಮಕ್ಕಳ ಜೊತೆ ಹೆಲಿಕಾಪ್ಟರ್ ಹಾರಾಟ ನಡೆಸಿದರು. ನಾಲ್ವರು ಪೌರ ಕಾರ್ಮಿಕರಿಗೆ ಸಹ ಸತೀಶ್ ಸೈಲ್ ಅವರು ಹೆಲಿಕಾಪ್ಟರ್ ಹತ್ತಿಸಿದರು.
`ಸಾರ್ವಜನಿಕರಿಗೆ ಅನುಕೂಲವಾಗುವಂತೆ 3900ರೂ ದರದಲ್ಲಿ ಹೆಲಿಕಾಪ್ಟರ್ ಯಾನಕ್ಕೆ ಅವಕಾಶ ನೀಡಲಾಗಿದೆ. 7 ನಿಮಿಷಗಳ ಕಾಲ ಹೆಲಿಕಾಪ್ಟರ್ ಹಾರಾಟ ನಡೆಸಲಿದೆ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಮಾಹಿತಿ ನೀಡಿದರು. `ಮುಂದಿನ 5 ದಿನಗಳ ಕಾಲ ಹೇಲಿಕ್ಯಾಪ್ಟರ್ ರೈಡ್ ಬೆಳ್ಳಗೆ 9 ಗಂಟೆಯಿAದ ಸಂಜೆ 4 ಗಂಟೆಯವರೆಗೆ ನಡೆಯಲಿದೆ’ ಎಂದು ತಿಳಿಸಿದರು.