ಪಟ್ಟಣ ಪಂಚಾಯತ ಆಗಿ ಮೇಲ್ದರ್ಜೆಗೆ ಏರಿದ ಮಂಕಿಗೆ ಮೊದಲ ಚುನಾವಣೆ ನಡೆದಿದ್ದು, ಬಿಜೆಪಿ ಜಯಬೇರಿ ಬಾರಿಸಿದೆ. ಉತ್ತರ ಕನ್ನಡ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ ಅವರು ಸ್ವಕ್ಷೇತ್ರದಲ್ಲಿಯೇ ತಮ್ಮ ಬೆಂಬಲಿಗರನ್ನು ಆರಿಸಲಾಗದೇ ಮುಖಭಂಗ ಅನುಭವಿಸಿದ್ದಾರೆ.
Advertisement. Scroll to continue reading.
ಮಂಕಿ ಪಟ್ಟಣ ಪಂಚಾಯತದಲ್ಲಿ 20 ವಾರ್ಡುಗಳ ರಚನೆಯಾಗಿದೆ. ಈ ವಾರ್ಡುಗಳಿಗೆ ಚುನಾವಣೆ ನಡೆದಿದ್ದು, ಅದರಲ್ಲಿ 12 ವಾರ್ಡುಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹೀಗಾಗಿ ಬಿಜೆಪಿ ಅಲ್ಲಿ ಅಧಿಕಾರಕ್ಕೆ ಬರುವುದು ಸ್ಪಷ್ಟವಾಗಿದೆ. ಎರಡು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಆರು ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಈ ಕ್ಷೇತ್ರದಲ್ಲಿ ಮಂಕಾಳು ವೈದ್ಯ ಅವರು ಪ್ರಭಾವಿ ನಾಯಕರಾಗಿದ್ದಾರೆ. ಅದಾಗಿಯೂ ಅವರಿಗೆ ತಮ್ಮ ಎಲ್ಲಾ ಬೆಂಬಲಿಗರನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ. ವಿರೋಧಿ ಬಣದವರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದರಿಂದ ಮಂಕಾಳು ವೈದ್ಯ ಅವರಿಗೆ ಸಾಕಷ್ಟು ಮುಜುಗರವಾಗಿದೆ. ಅವರ ರಾಜಕೀಯ ಪ್ರಭಾವಕ್ಕೂ ಹಿನ್ನಡೆ ಆಗಿದೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಂಕಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.