ಅಂಕೋಲಾದಲ್ಲಿ 9ನೇ ತರಗತಿ ಓದುತ್ತಿದ್ದ ಬಾಲಕಿಯ ಅಪಹರಣ ನಡೆದಿದೆ. ಶಾಲೆಗೆ ಹೋಗಬೇಕಿದ್ದ ಬಾಲಕಿ ಶಾಲೆಗೂ ಹೋಗಿಲ್ಲ. ಸಂಜೆ ಮನೆಗೂ ಮರಳಿಲ್ಲ.
Advertisement. Scroll to continue reading.
ಅಂಕೋಲಾದ ಹಾರವಾಡ ನಿಧಿ ನಾಯ್ಕ ಅವರು ಸೀಬರ್ಡ ಉದ್ಯೋಗಿಯಾಗಿದ್ದಾರೆ. ಅವರು ತಮ್ಮ ಪುತ್ರಿಯ ಹುಡುಕಾಟ ಶುರು ಮಾಡಿದ್ದಾರೆ. ಡಿಸೆಂಬರ್ 08ರಂದು ನಿಧಿ ಅವರ ಪುತ್ರಿ ಎಂದಿನoತೆ ಶಾಲೆಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಬೆಳಗ್ಗೆ 8.30ಕ್ಕೆ ಮನೆಯಿಂದ ಹೊರಟ ಅವರು ನಂತರ ಎಲ್ಲಿ ಹೋದರು? ಎಂದು ಗೊತ್ತಾಗಲಿಲ್ಲ.
ಸಂಜೆಯಾದರೂ ಅವರು ಮನೆಗೆ ಬಾರದ ಕಾರಣ ಪಾಲಕರು ಹುಡುಕಾಟ ಶುರು ಮಾಡಿದರು. ಶಾಲೆಯ ಕಡೆಯೂ ಹುಡುಕಾಟ ನಡೆಸಿದರು. ಆದರೆ, ಬಾಲಕಿ ಅವರು ಶಾಲೆಗೂ ಬಂದಿಲ್ಲ ಎಂಬ ವಿಷಯ ಅರಿವಿಗೆ ಬಂದಿತು. ಸಂಬoಧಿಕರ ಮನೆಗೆ ಫೋನ್ ಮಾಡಿದರೂ ಬಾಲಕಿ ಸುಳಿವು ಸಿಗಲಿಲ್ಲ.
ಅಪರಿಚಿತರು ಬಾಲಕಿಯನ್ನುಪುಸಲಾಯಿಸಿ ಅಪಹರಿಸಿರುವ ಅನುಮಾನ ಕಾಡಿತು. ಈ ಹಿನ್ನಲೆ ನಿಧಿ ನಾಯ್ಕ ಅವರು ಅಂಕೋಲಾ ಪೊಲೀಸ್ ಠಾಣೆಗೆ ಹೋದರು. ಅಪರಿಚಿತರು ಮಗಳನ್ನು ಅಪಹರಿಸಿದ ಬಗ್ಗೆ ದೂರು ನೀಡಿದರು. ಪೊಲೀಸರು ಸಹ ಬಾಲಕಿಗಾಗಿ ಅವರಿಗಾಗಿ ಶೋಧ ಶುರು ಮಾಡಿದರು.
ಇದೀಗ ಬಂದ ಸುದ್ದಿ: ತಾಸಿನ ಒಳಗೆ ಹುಡುಕಾಟ!
ಬಾಲಕಿ ಕಾಣೆಯಾಗಿರುವ ಪ್ರಕರಣ ದಾಖಲಿಸಿದ ಪೊಲೀಸರು ತಕ್ಷಣ ಹುಡುಕಾಟ ಶುರು ಮಾಡಿದ್ದು, ಕಾಣೆಯಾದ ರಾತ್ರಿಯೇ ಬಾಲಕಿಯನ್ನು ಪತ್ತೆ ಮಾಡಿದ್ದಾರೆ. ಸದ್ಯ ಬಾಲಕಿ ಪಾಲಕರ ಜೊತೆ ಮನೆಗೆ ಮುಟ್ಟಿದ್ದಾರೆ. ಬಾಲಕಿ ಸದ್ಯ ಸುರಕ್ಷಿತವಾಗಿದ್ದು, ಪಾಲಕರು ನಿಶ್ಚಿಂತೆಯಿoದ ಇದ್ದಾರೆ.
“ಅಪರಿಚಿತರರಿಂದ ದೂರವಿರುವಂತೆ ಮಕ್ಕಳಿಗೆ ಅರಿವು ಮೂಡಿಸಿ’