ಜೋರಾಗಿ ಕಾರು ಓಡಿಸಿಕೊಂಡು ಬಂದ ರಾಘವೇಂದ್ರ ಹೆಗಡೆ ಅವರು ವಾಕಿಂಗ್ ಹೊರಟಿದ್ದ ಉಮ್ಮಯ್ಯಭಾನು ಶೇಖ್ ಅವರಿಗೆ ತಮ್ಮ ವಾಹನ ಗುದ್ದಿದ್ದಾರೆ. ಪರಿಣಾಮ ಉಮ್ಮಯ್ಯಭಾನು ಶೇಖ್ ಅವರ ಮೂರು ಹಲ್ಲು ಮುರಿದಿದೆ. ಕೈ-ಕಾಲಿಗೂ ಪೆಟ್ಟಾಗಿದೆ.
Advertisement. Scroll to continue reading.
ಯಲ್ಲಾಪುರ ನೂತನ ನಗರದ ರಾಘವೇಂದ್ರ ಮಹಾಬಲೇಶ್ವರ ಹೆಗಡೆ ಅವರು ತಮ್ಮದೇ ಆದ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ಉರ್ದು ಶಾಲೆಯಲ್ಲಿ ಬಿಸಿಯೂಟದ ಕೆಲಸ ಮಾಡುವ ಶೈನಾಜಬೇಗಂ ಅವರ ಜೊತೆ ವಾಕಿಂಗ್ ಹೊರಟಿದ್ದ ನೂತನ ನಗರದ ಉಮ್ಮಯ್ಯಭಾನು ಹೈದರ ಶೇಖ್ ಅವರಿಗೆ ರಾಘವೇಂದ್ರ ಹೆಗಡೆ ಅವರು ಕಾರು ಗುದ್ದಿದ್ದಾರೆ. ನ 29ರ ನಸುಕಿನಲ್ಲಿ ಈ ಅಪಘಾತ ನಡೆದಿದ್ದು, ಉಮ್ಮಯ್ಯಭಾನು ಶೇಖ್ ಅವರು ಹುಬ್ಬಳ್ಳಿಯ ಕ್ಷೇಮಾ ಅರ್ಥೋಪೆಟಿಕ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
ಆ ದಿನ ಬೆಳಗ್ಗೆ ರಾಘವೇಂದ್ರ ಹೆಗಡೆ ಅವರು ಶಿರಸಿ-ಯಲ್ಲಾಪುರ ಮಾರ್ಗವಾಗಿ ಕಾರು ಓಡಿಸುತ್ತಿದ್ದರು. ಎಪಿಎಂಸಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಗೆ ಅವರು ಕಾರು ಗುದ್ದಿದರು. ಅಲ್ಲಿಯೇ ಬಿದ್ದ ಉಮ್ಮಯ್ಯಭಾನು ಶೇಖ್ ಅವರು ಮುಂದಿನ ಮೂರು ಹಲ್ಲು ಮುರಿದುಕೊಂಡರು. ಜೊತೆಗೆ ಕೈ ಎಲುಬುಗಳು ಸಹ ಮುರಿದವು. ಕಾಲಿಗೂ ಪೆಟ್ಟಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಈ ಎಲ್ಲಾ ವಿಷಯದ ಬಗ್ಗೆ ಗಾಯಾಳು ಜೊತೆಗಿದ್ದ ಶೈನಾಜಬೇಗಂ ಅವರು ವರದಿ ಒಪ್ಪಿಸಿದರು. ಪೊಲೀಸರು ಕಾರು ಚಾಲಕ ರಾಘವೇಂದ್ರ ಹೆಗಡೆ ಅವರ ವಿರುದ್ಧ ಕ್ರಮ ಜರುಗಿಸಿದರು.
`ನಿಧಾನವಾಗಿ ವಾಹನ ಓಡಿಸಿ’