ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗದ ಕಾರಣ ವಿಜಯ ಹೊಸ್ಕಟ್ಟಾ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಮಸ್ಯೆಯಾಗಿದ್ದು, ಅರ್ದ ಆಯಸ್ಸಿಗೆ ಅವರು ಜೀವ ಬಿಟ್ಟಿದ್ದಾರೆ.
ಕುಮಟಾದ ಗೋಕರ್ಣ ಬಳಿಯ ಮೊಗೇರಿಕಟ್ಟೆಯಲ್ಲಿ ವಿಜಯ ಹೊಸ್ಕಟ್ಟಾ (46) ಅವರು ವಾಸವಾಗಿದ್ದರು. ಇಲೆಕ್ಟಿçಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದ ಅವರು ಗ್ರಾಮ ಪಂಚಾಯತದ ಬೀದಿ ದೀಪ ನಿರ್ವಹಣೆ ಕೆಲಸವನ್ನು ಮಾಡಿಕೊಂಡಿದ್ದರು. ವಿಜಯ ಹೊಸ್ಕಟ್ಟಾ ಅವರಿಗೆ ಈಚೆಗೆ ಮೆದುಳು ಸಂಬAಧಿಸಿದ ಸಮಸ್ಯೆ ಕಾಣಿಸಿಕೊಂಡಿತ್ತು. ಅದಕ್ಕೆ ಅವರು ಚಿಕಿತ್ಸೆಪಡೆಯುತ್ತಿದ್ದರು.
ವಾರದ ಹಿಂದೆ ವಿಜಯ ಹೊಸ್ಕಟ್ಟಾ ಅವರಿಗೆ ಹಠಾತ್ ಆಗಿ ತಲೆನೋವು ಕಾಣಿಸಿಕೊಂಡಿತು. ದಿಢೀರ್ ಆಗಿ ಅವರು ಕುಸಿದು ಬಿದ್ದಿದ್ದು, ಕುಟುಂಬದವರು 108ಗೆ ಫೋನ್ ಮಾಡಿದರು. ಅವರ ಮನೆಯಿಂದ 1ಕಿಮೀ ದೂರದಲ್ಲಿ 108 ಆಂಬುಲೆನ್ಸ ನಿಲುಗಡೆಯಿದ್ದರೂ 45 ನಿಮಿಷದ ನಂತರ ಆಂಬುಲೆನ್ಸ್ ಬಂದಿತು. ವಿಜಯ ಹೊಸ್ಕಟ್ಟಾ ಅವರನ್ನು ಗೋಕರ್ಣ ಆಸ್ಪತ್ರೆಗೆ ಕರೆದೊಯ್ದು, ನಂತರ ಅಂಕೋಲಾ ಆಸ್ಪತ್ರೆಗೆ ಬಿಡಲಾಯಿತು. ನಂತರ ಅವರನ್ನು ಬೇರೆ ಆಂಬುಲೆನ್ಸಿನ ಮೂಲಕ ಕಾರವಾರಕ್ಕೆ ಕರೆದೊಯ್ಯಲಾಯಿತು. ಮೆದುಳಿನ ರಕ್ತಸ್ರಾವ ಹೆಚ್ಚಾದ ಕಾರಣ ನಂತರ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು.
`ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗಲಿಲ್ಲ. ಹೀಗಾಗಿ ಪ್ರಾಥಮಿಕ ಚಿಕಿತ್ಸೆ ಕೊಡುವಲ್ಲಿ ತಡವಾಗಿದೆ’ ಎಂದು ಸಮೀಪದ ನಿವಾಸಿ ಸೂರ್ಯ ನಾಯಕ ಅವರು ವಿವರಿಸಿದರು. 20 ಸಾವಿರಕ್ಕೂ ಅಧಿಕ ಜನ ವಸತಿಯಿರುವ ಗೋಕರ್ಣದಲ್ಲಿ ಆರೋಗ್ಯ ಸೇವೆ ಸರಿಯಾಗಿಲ್ಲ. ಆರೋಗ್ಯ ಸೇವೆ ಸರಿಯಾಗಿದ್ದಿದ್ದರೆ ವಿಜಯ ಹೊಸ್ಕಟ್ಟಾ ಅವರನ್ನು ಬದುಕಿಸಬಹುದಿತ್ತು’ ಎಂದವರು ವಿವರಿಸಿದರು.
ಕರಾವಳಿ ಉತ್ಸವದ ಹಿನ್ನಲೆ ಆಂಬುಲೆನ್ಸ್’ಗಳನ್ನು ಕಾರವಾರಕ್ಕೆ ಹೆಚ್ಚುವರಿಯಾಗಿ ನಿಯೋಜಿಸಿದ್ದರಿಂದ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗುತ್ತಿಲ್ಲ ಎಂದು ಜನ ದೂರಿದರು.