ಕಾರವಾರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವ ನೋಡಲು ಬಂದ ಸತೀಶ ನಾಯ್ಕ ಹಾಗೂ ಗ್ಲಾಡಸನ್ ಬ್ಯಾರಟೋ ನಡುವೆ ಹೊಡೆದಾಟ ನಡೆದಿದೆ. ಜಿಲ್ಲಾಧಿಕಾರಿ ಕಚೇರಿ ಎದುರೇ ಅವರಿಬ್ಬರು ಹೊಡೆದಾಡಿಕೊಂಡಿದ್ದಾರೆ.
ಡಿಸೆoಬರ್ 25ರ ರಾತ್ರಿ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಅವರು ಕರಾವಳಿ ಉತ್ಸವದ ಭದ್ರತೆಯಲ್ಲಿದ್ದು, ಅವರ ಮುಂದೆಯೇ ಸತೀಶ ನಾಯ್ಕ ಹಾಗೂ ಗ್ಲಾಡಸನ್ ಬ್ಯಾರಟೋ ಕುಸ್ತಿ ಹೊಡೆದಿದ್ದಾರೆ. ಕಾರವಾರದ ಕಡವಾಡದ ಗ್ಲಾಡಸನ್ ಪಾಸ್ಕಲ್ ಬ್ಯಾರಟ್ಟೋ ಹಾಗೂ ಹೊಸಾಳಿ ದುಮ್ಮನಶಟ್ಟಾದ ಸತೀಶ ಕೃಷ್ಣಾನಂದ ನಾಯ್ಕ ನಡುವೆ ಮೊದಲಿನಿಂದಲೂ ವೈಯಕ್ತಿಕ ದ್ವೇಷವಿದ್ದು, ಕರಾವಳಿ ಉತ್ಸವದ ಅವಧಿಯಲ್ಲಿಯೇ ಅವರು ದ್ವೇಷ ಸಾಧನೆಗೆ ಮುಂದಾಗಿದ್ದಾರೆ.
ಪೊಲೀಸರು ಭದ್ರತಾ ಕರ್ತವ್ಯದಲ್ಲಿದ್ದರೂ ಅದನ್ನು ನಿರ್ಲಕ್ಷಿಸಿ ಅವರಿಬ್ಬರು ಮಾರಾಮಾರಿ ನಡೆಸಿದ್ದಾರೆ. ಪೊಲೀಸರು ತಡೆದರೂ ಸಹ ಸುಮ್ಮನಾಗದೇ ಹೊಡೆದಾಟ ಮುಂದುವರೆಸಿದ್ದಾರೆ. ಉತ್ಸವ ನೋಡಲು ಬಂದ ಅನೇಕರು ಈ ಹೊಡೆದಾಟ ನೋಡಿದ್ದು, ಶಾಂತಿ ಭಂಗವಾಗುವ ರೀತಿ ಶ ನಾಯ್ಕ ಹಾಗೂ ಗ್ಲಾಡಸನ್ ಬ್ಯಾರಟೋ ವರ್ತಿಸಿದ್ದಾರೆ. ಈ ಎಲ್ಲಾ ಹಿನ್ನಲೆ ಚಂದ್ರಶೇಖರ ಮಠಪತಿ ಅವರು ಆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.