`ಕಾರವಾರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿ 12 ವರ್ಷ ಕಳೆದರೂ ತಜ್ಞ ವೈದ್ಯರಿಲ್ಲದೇ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ನೂರಾರು ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಎಂದು ಕಟ್ಟಡ ನಿರ್ಮಿಸುವ ಬದಲು ತಜ್ಞ ವೈದ್ಯರ ನೇಮಕಾತಿಗೆ ಮೊದಲ ಆದ್ಯತೆ ಕೊಡಬೇಕು’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಆಗ್ರಹಿಸಿದ್ದಾರೆ.
ADVERTISEMENT
ಈ ಬಗ್ಗೆ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸೀನ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ. `ಕಿಮ್ಸ್ ಪ್ರಭಾರಿ ನಿರ್ದೇಶಕಿ ಡಾ ಪೂರ್ಣಿಮಾರನ್ನು ಬದಲಿಸಿ ಅನುಭವಿ ಸಮರ್ಥ ನಿರ್ದೇಶಕರನ್ನು ನೀಡಬೇಕು’ ಎಂದು ಪಟ್ಟುಹಿಡಿದಿರುವ ಅವರು 450 ಹಾಸಿಗೆಯ ಹೊಸ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿರುವುದನ್ನು ಗಮನಕ್ಕೆ ತಂದಿದ್ದಾರೆ. ಇದರೊಂದಿಗೆ ಕಿಮ್ಸ್ ಅವ್ಯವಸ್ತೆಗಳ ಬಗ್ಗೆ ಅವರು ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದಾರೆ.
ಇದರೊಂದಿಗೆ `ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತ ಆಂಬುಲೆನ್ಸ ನೀಡಬೇಕು. ಹೆರಿಗೆ ಕೋಣೆಯಲ್ಲಿ ಶೌಚಾಲಯ ಹಾಗೂ ನೀರಿನ ಕೋಣೆ ಇಲ್ಲದಿರುವುದನ್ನು ಗಮನಿಸಿ ಸೌಕರ್ಯ ಒದಗಿಸಬೇಕು. ಅಗತ್ಯ ತಜ್ಞರ ನೇಮಕಾತಿ ನಡೆಸಬೇಕು. ಅನಗತ್ಯ ಕಟ್ಟಡ ನಿರ್ಮಾಣದ ಬದಲು ಅಗತ್ಯ ಸೇವೆ ಒದಗಿಸಬೇಕು’ ಎಂದು ಆಗ್ರಹಿಸಿದರು. ಮಾಧವ ನಾಯಕ ಅವರು ಮಾತನಾಡಿದ್ದೇನು? ವಿಡಿಯೋ ಇಲ್ಲಿ ನೋಡಿ..