ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾಡಳಿತ ರಂಗೋಲಿ ಹಾಗೂ ಅಡುಗೆ ಸ್ಪರ್ಧೆ ಆಯೋಜಿಸಿದೆ. ಡಿಸೆಂಬರ್ 24ರ ಬೆಳಗ್ಗೆ 10ಗಂಟೆಯಿoದ 1ಗಂಟೆಯವರೆಗೂ ಈ ಸ್ಪರ್ಧೆ ನಡೆಯಲಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ.
ರಂಗೋಲಿ ಸ್ಪರ್ಧೆಗೆ ಅರ್ಹತೆ: ಫ್ರೀ ಹ್ಯಾಂಡ್ ರಂಗೋಲಿ ಸ್ಪರ್ಧೆಗೆ 14-18 ವರ್ಷ ವಯೋಮಾನದನ ಮಕ್ಕಳು ( ಗಂಡು/ಹೆಣ್ಣು) ಮತ್ತು 18 ವರ್ಷ ಮೇಲ್ಪಟ್ಟ ಮಹಿಳೆಯರು ಭಾಗವಹಿಸಬಹುದಾಗಿದೆ. ಹೂವಿನ ರಂಗೋಲಿ ಸ್ಪರ್ಧೆಗೆ 18 ವರ್ಷ ಮೇಲ್ಪಟ್ಟ ಮಹಿಳೆಯರು ಭಾಗವಹಿಸಲು ಅರ್ಹರು. `ರಂಗೋಲಿ ಹಾಕಲು ಅಗತ್ಯವಾಗಿ ಬೇಕಾಗಿರುವ ಬಣ್ಣದ ಪುಡಿ, ಹೂ ಹಾಗೂ ಇತರೆ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು. ದೇವರ ಧಾರ್ಮಿಕ ಚಿತ್ರಗಳನ್ನು, ಕೋಮು ಭಾವನೆಗಳನ್ನು ಬಿಂಬಿಸುವoತಹ ಚಿತ್ರಗಳನ್ನು ಬಿಡಿಸತಕ್ಕದ್ದಲ್ಲ. ಕರಾವಳಿ ಉತ್ಸವ ಸಮಿತಿಯವರು ನಿಗದಿಪಡಿಸಿದ ಸ್ಥಳದಲ್ಲಿಯೇ ರಂಗೋಲಿಯನ್ನು ಬಿಡಿಸಬೇಕು. ವಯಸ್ಸಿನ ದೃಢಕರಣವನ್ನು ಕಡ್ಡಾಯ’ ಎಂಬ ನಿಯಮಗಳಿವೆ. ಡಿಸೆಂಬರ್ 23ರ ಮಧ್ಯಾಹ್ನ 12ಗಂಟೆಯೊಳಗೆ ಅರ್ಜಿ ಸಲ್ಲಿಸಿ. ಈ ಸ್ಪರ್ಧೆಯಲ್ಲಿ ಭಾಗವಹಿಸಲು `ರಂಗೋಲಿ ಸ್ಪರ್ಧೆಗೆ ಅರ್ಜಿ’ ಎಂಬ ಪದ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ: ರಂಗೋಲಿ ಸ್ಪರ್ಧೆಗೆ ಅರ್ಜಿ’
ಇನ್ನೂ ಗೊಂದಲಗಳಿದ್ದರೆ ಇಲ್ಲಿ ಫೋನ್ ಮಾಡಿ: 7760372068
ಅಡುಗೆ ಸ್ಪರ್ಧೆಗೆ ಅರ್ಹತೆ: ಅಡುಗೆ ಸ್ಪರ್ಧೆಗೆ18 ವರ್ಷ ಮೇಲ್ಪಟ್ಟ ಎಲ್ಲರೂ ಅರ್ಹರು. `ಸ್ಪರ್ಧೆಯಲ್ಲಿ ಭಾಗವಹಿಸುವವರು ಅಡುಗೆ ತಯಾರಿಸಲು ಬೇಕಾಗುವ ಪಾತ್ರೆಗಳನ್ನು ಹಾಗೂ ಸಾಂಬಾರ ಪದಾರ್ಥಗಳನ್ನು ತಾವೇ ತಂದುಕೊಳ್ಳಬೇಕು. ಕರಾವಳಿ ಉತ್ಸವ ಸಮಿತಿಯಿಂದ ಗ್ಯಾಸ್, ಸ್ಟೋವ್, ಅಡುಗೆಗೆ ನೀರು, ಒಂದು ಟೇಬಲ್, ಖುರ್ಚಿ ಹಾಗೂ ಪಾತ್ರೆ ತೊಳೆಯಲು ನೀರನ್ನು ಮಾತ್ರ ಕೊಡಲಾಗುತ್ತದೆ. ಸಸ್ಯಹಾರಿ ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸುವವರು ಬದನೆ, ಅಣಬೆ, ಹೀರೆಕಾಯಿ, ಹೂಕೋಸು ಹಾಗೂ ಬೆಂಡೆಕಾಯಿಗಳಲ್ಲಿ ಯಾವುದಾದರೂ ಎರಡು ತರಕಾರಿ ಬಳಸಿ ಅಡುಗೆ ಸಿದ್ಧಪಡಿಸಬೇಕು. ಮಾಂಸಹಾರಿ ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸುವವರು ಬಂಗಡೆ ಮೀನು, ಸಿಗಡಿ, ಅಂಜಲ್(ಇಸ್ವಾನ್) ಈ ಮೂರರಲ್ಲಿ ಯಾವುದಾದದರೂ ಒಂದು ಪ್ರಕಾರವನ್ನು ಮಾತ್ರ ಉಪಯೋಗಿಸಬೇಕು’ ಎಂಬ ನಿಯಮವಿದೆ.
ಅಡುಗೆ ಸ್ಪರ್ಧೆಗೆ ಹೆಸರು ನೋಂದಾಯಿಸಲು ಡಿ 23 ಕೊನೆ ದಿನ. ಆ ದಿನ ಮಧ್ಯಾಹ್ನ 12ಗಂಟೆಯವರೆಗೂ ಅರ್ಜಿ ಸ್ವೀಕಾರ ನಡೆಯಲಿದೆ. ಅಡುಗೆ ಸ್ಪರ್ಧೆಗೆ ಹೆಸರು ನೋಂದಾಯಿಸಲು ಅಡುಗೆ ಸ್ಪರ್ಧೆಗೆ ನೋಂದಣಿ ಎಂಬ ಪದ ಕ್ಲಿಕ್ ಮಾಡಿ: ಅಡುಗೆ ಸ್ಪರ್ಧೆಗೆ ನೋಂದಣಿ
ಇನ್ನೂ ಏನಾದರೂ ಗೊಂದಲವಿದ್ದರೆ ಇಲ್ಲಿ ಫೋನ್ ಮಾಡಿ: 7349113913