ಕಂಠಪೂರ್ತಿ ಕುಡಿದು ಬೈಕ್ ಓಡಿಸಿದ ನಿರಂಜನ ನಾಯ್ಕ ಅವರು ನರಸಿಂಹ ಹರಿಕಂತ್ರ ಅವರಿಗೆ ತಮ್ಮ ವಾಹನ ಗುದ್ದಿದ್ದಾರೆ. ಪರಿಣಾಮ ನರಸಿಂಹ ಹರಿಕಂತ್ರ ಅವರ ಕಾಲಿನ ಮೂಳೆ ಮುರಿದು ಅವರು ಆಸ್ಪತ್ರೆ ಸೇರಿದ್ದಾರೆ.
ಕುಮಟಾ ಹೊಲನಗದ್ದೆಯ ನರಸಿಂಹ ಹರಿಕಂತ್ರ ಅವರು ಡಿಸೆಂಬರ್ 6ರಂದು ಸೈಕಲ್ ಮೂಲಕ ಹೋಗುತ್ತಿದ್ದರು. ಕಡ್ಲೆ ಆಟದ ಮೈದಾನದ ಬಳಿ ತಮ್ಮ ಪಾಡಿಗೆ ತಾವು ತೆರಳುತ್ತಿದ್ದಾಗ ವೇಗವಾಗಿ ಬಂದ ಬೈಕ್ ಅವರಿಗೆ ಡಿಕ್ಕಿಯಾಯಿತು. ಕುಮಟಾದಿಂದ ಬಾಡದ ಕಡೆ ಹೋಗುತ್ತಿದ್ದ ನಿರಂಜನ ನಾಯ್ಕ ಅವರು ವೇಗವಾಗಿ ಬೈಕ್ ಓಡಿಸಿಕೊಂಡು ಬಂದು ಸೈಕಲಿಗೆ ಗುದ್ದಿದ್ದರು. ಸೈಕಲಿನಿಂದ ನರಸಿಂಹ ಹರಿಕಂತ್ರ ಅವರು ಪೆಟ್ಟು ಮಾಡಿಕೊಂಡರು. ಅಲ್ಲಿದ್ದ ಜನ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆ ವೇಳೆ ನರಸಿಂಹ ಹರಿಕಂತ್ರ ಅವರ ಕಾಲಿನ ಮೂಳೆ ಮುರಿದಿರುವುದು ಗಮನಕ್ಕೆ ಬಂದಿತು.
ಪೆoಟಿoಗ್ ಕೆಲಸ ಮಾಡಿಕೊಂಡಿದ್ದ ಜಯೇಶ ಹರಿಕಂತ್ರ ಅವರು ತಂದೆಗೆ ಅಪಘಾತವಾದ ವಿಷಯ ಕೇಳಿ ಆಸ್ಪತ್ರೆಗೆ ಓಡಿ ಬಂದರು. ಆಗ, ಅಪಘಾತಕ್ಕೆ ಕಾರಣರಾದ ಬಾಡದ ನಿರಂಜನ ನಾಯ್ಕ ಅವರು ಮದ್ಯದ ಅಮಲಿನಲ್ಲಿರುವುದು ಗೊತ್ತಾಯಿತು. ಕುಡಿದು ಬೈಕ್ ಓಡಿಸಿದಲ್ಲದೇ, ತಮ್ಮ ತಂದೆಗೆ ನೋವು ಮಾಡಿದ ನಿರಂಜನ ನಾಯ್ಕ ಅವರ ವಿರುದ್ಧ ಜಯಶೇಶ ಹರಿಕಂತ್ರ ಅವರು ಕಾನೂನು ಕ್ರಮಕ್ಕೆ ಮುಂದಾದರು. ನಿರಂಜನ ನಾಯ್ಕ ಅವರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.
`ಮದ್ಯಪಾನ ಮಾಡಿ ವಾಹನ ಓಡಿಸಬೇಡಿ’