ಕಾರವಾರದ ಅಭಿಷೇಕ ಕಲ್ಗುಟ್ಕರ್ ಹಾಗೂ ಪ್ರಶಾಂತ ಗೋವೇಕರ್ ಅವರ ನಡುವೆ ಹೊಡೆದಾಟ ನಡೆದಿದೆ. ಪ್ರಶಾಂತ ಗೋವೇಕರ್ ಅವರ ಏಟಿಗೆ ಅಭಿಷೇಕ ಕಲ್ಗುಟ್ಕರ್ ಅವರು ಆಸ್ಪತ್ರೆ ಸೇರಿದ್ದಾರೆ.
ನಂದನಗದ್ದಾ ಚಿಪ್ಕರವಾಡದ ಅಭಿಷೇಕ ಸುರೇಶ ಕಲ್ಗುಟ್ಕರ್ ಅವರು ಕಿನ್ನರ ಸಿದ್ಧವಾಡದ ಪ್ರಶಾಂತ ದತ್ತಾರಾಮ ಗೋವೇಕರ್ ಅವರು ಅನಗತ್ಯವಾಗಿ ಹೊಡೆದ ಬಗ್ಗೆ ಪೊಲೀಸರಿಗೆ ದೂರಿದ್ದಾರೆ. ಡಿಸೆಂಬರ್ 6 ಸಂಜೆ ತಮ್ಮ ಮೇಲೆ ಹಲ್ಲೆ ನಡೆದಿರುವುದಾಗಿಯೂ ಅವರು ವಿವರಿಸಿದ್ದಾರೆ. ಕಾರವಾರದ ಅಜ್ವೀ ಓಷಿಯನ್ ಬಳಿ ಈ ಹೊಡೆದಾಟ ನಡೆದಿದೆ.
ಅಭಿಷೇಕ ಕಲ್ಗುಟ್ಕರ್ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಪ್ರಶಾಂತ ಗೋವೇಕರ್ ಅವರು ಆ ಕಾರಿಗೆ ಕೈ ಮಾಡಿದ್ದಾರೆ. ಅಭಿಷೇಕ್ ಕಲ್ಗುಟ್ಕರ್ ಅವರು ಕಾರು ಬಾಡಿಗೆಗೆ ಹೋಗಿದ್ದು, ಬಾಡಿಗೆಗೆ ಬಂದಿದ್ದ ವ್ಯಕ್ತಿಯ ಮುಂದೆಯೇ ಪ್ರಶಾಂತ ಗೋವೇಕರ್ ಅವರು ಅಭಿಷೇಕ ಕಲ್ಗುಟ್ಕರ್ ಅವರ ಮೇಲೆ ಕೈ ಮಾಡಿದ್ದಾರೆ. ಪ್ರಶಾಂತ ಗೋವೇಕರ್ ಅವರು ಕೆನ್ನೆಗೆ ಬಾರಿಸಿದ ಪರಿಣಾಮ ಅಭಿಷೇಕ ಕಲ್ಗುಟ್ಕರ್ ಅವರು ಆಸ್ಪತ್ರೆ ಸೇರಿದ್ದಾರೆ.
ಈ ಬಗ್ಗೆ ಅಭಿಷೇಕ ಕಲ್ಗುಟ್ಕರ್ ಅವರು ಅದೇ ದಿನ ಪೊಲೀಸರಿಗೆ ವರದಿ ಒಪ್ಪಿಸಿದ್ದಾರೆ. ಅದಾದ ನಂತರ ನ್ಯಾಯಾಲಯಕ್ಕೆ ಹೋಗಿ ನ್ಯಾಯಾಧೀಶರ ಮುಂದೆ ಪ್ರಶಾಂತ ಗೋವೇಕರ್ ಅವರ ವಿರುದ್ಧ ದೂರಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಕಾರವಾರ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.