ಮದುವೆ ನಂತರ ಪರ ಸ್ತ್ರೀ ಸಹವಾಸಕ್ಕೆ ಬಿದ್ದ ವಿಜಯ ನಾಯ್ಕ ಅವರು ಪತ್ನಿಯಿಂದ ದೂರವಾಗಿದ್ದು, ಸ್ವಂತ ಮಗುವಿನ ಮೇಲೆ ಕ್ರೌರ್ಯ ಮೆರೆದಿದ್ದಾರೆ. 6 ವರ್ಷದ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ ಬಾತ್ ರೂಮಿನಲ್ಲಿ ಕೂಡಿ ಹಾಕುವ ಮೂಲಕ ವಿಕೃತಿ ತೋರಿದ್ದಾರೆ!
Advertisement. Scroll to continue reading.
ADVERTISEMENT
ಕುಮಟಾದ ಹೆಗಡೆಯಲ್ಲಿನ ಬಾಡಿಗೆ ಮನೆಯಲ್ಲಿ ವಿಜಯ ನಾಯ್ಕ ವಾಸವಾಗಿದ್ದರು. ವಿಜಯ ನಾಯ್ಕ ಅವರು 13 ವರ್ಷದ ಹಿಂದೆ ಕುಮಟಾ ಗುಂದದ ಚೈತ್ರಾ ನಾಯ್ಕ ಅವರನ್ನು ವಿವಾಹವಾಗಿದ್ದು, ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ತ**ಷ ನಾಯ್ಕ ಹಾಗೂ ಹ**ಷಾ ನಾಯ್ಕ ಜನಿಸಿದ್ದರು. ಈ ನಡುವೆ ವಿಜಯ ನಾಯ್ಕ ತಾವು ವಾಸವಿದ್ದ ಮನೆಗೆ ಮತ್ತೊಬ್ಬ ದೀಪಾ ನಾಯ್ಕ ಎಂಬಾತರನ್ನು ಕರೆತಂದರು. ಇದನ್ನು ಚೈತ್ರಾ ನಾಯ್ಕ ಅವರು ವಿರೋಧಿಸಿದರು. ಆ ವಿರೋಧ ಅವರಿಬ್ಬರ ನಡುವೆ ಬಿರುಕು ಮೂಡಲು ಕಾರಣವಾಯಿತು. ಕೋರ್ಟಿನ ಕಟಕಟೆ ಏರಿ ವಿಜಯ ನಾಯ್ಕ ಹಾಗೂ ಚೈತ್ರ ನಾಯ್ಕ ಅವರು ವಿಚ್ಚೇದನಪಡೆದರು.
ADVERTISEMENT
ತಂದೆ-ತಾಯಿ ಬೇರೆಯಾಗಿದ್ದರಿಂದ 6 ವರ್ಷದ ತ**ಷ ನಾಯ್ಕ ತಬ್ಬಲಿಯಾದರು. ಆ ಆರು ವರ್ಷದ ಬಾಲಕನ ಜೊತೆ 10 ವರ್ಷದ ಬಾಲಕಿಯನ್ನು ನೋಡಿಕೊಳ್ಳುವುದಾಗಿ ವಿಜಯ ನಾಯ್ಕ ಅವರು ನ್ಯಾಯಾಲಯಕ್ಕೆ ಹೇಳಿದ್ದರಿಂದ ನ್ಯಾಯಾಲಯ ತಂದೆಯ ಬಳಿ ಮಕ್ಕಳು ಬೆಳೆಯಲು ಬಿಟ್ಟಿತು. ಆದರೆ, ತ**ಷ ನಾಯ್ಕ ಅವರು ತಾಯಿ ಬೇಕು ಎಂದು ಹಠ ಶುರು ಮಾಡಿದರು. ಈ ಹಠ ಸಹಿಸದ ವಿಜಯ ನಾಯ್ಕ ಆ ಮಗುವಿನ ಮೇಲೆ ತಮ್ಮ ಕೋಪ ತೋರಿಸಿದರು.
ADVERTISEMENT
ಪ್ರೇಯಸಿ ದೀಪಾ ನಾಯ್ಕ ಅವರ ಜೊತೆ ಹೆಗಡೆಯಲ್ಲಿ ವಾಸವಾಗಿದ್ದ ವಿಜಯ ನಾಯ್ಕ ಅವರು ಮಕ್ಕಳನ್ನು ಹೆಗಡೆಯ ವಿವೇಕನಗರದ ಶಾಲೆಗೆ ದಾಖಲಿಸಿದ್ದರು. ಆ ಶಾಲೆ ಬಳಿ ಹೋಗಿ ಮಕ್ಕಳನ್ನು ನೋಡುವ ಅವಕಾಶದಿಂದಲೂ ಚೈತ್ರಾ ನಾಯ್ಕ ಅವರು ದೂರವಾದರು. ಹೀಗಿರುವಾಗ ಕಳೆದ ಒಂದು ತಿಂಗಳಿನಿAದ ಮಗು ಶಾಲೆಗೆ ಬಾರದ ವಿಷಯ ಚೈತ್ರಾ ನಾಯ್ಕ ಅವರ ಗಮನಕ್ಕೆ ಬಂದಿತು. ಶಾಲೆಯವರ ಮೂಲಕವೇ ವಿಚಾರಿಸಿದಾಗ `ಮಗುವಿಗೆ ಆರೋಗ್ಯ ಸರಿ ಇಲ್ಲ’ ಎಂದು ವಿಜಯ ನಾಯ್ಕ ಉತ್ತರಿಸಿದ್ದರು. ಆದರೆ, ತಮ್ಮನನ್ನು ಶೌಚಾಲಯದಲ್ಲಿ ಕೂಡಿ ಹಾಕಿ ಹಿಂಸೆ ನೀಡುತ್ತಿರುವ ಬಗ್ಗೆ ಬಾಲಕನ ಅಕ್ಕ ಹ**ಷಾ ನಾಯ್ಕ ಮಾಹಿತಿ ನೀಡಿದ್ದರು. ತಾಯಿ ಚೈತ್ರಾ ನಾಯ್ಕ ಅವರಿಗೆ ಫೋನ್ ಮಾಡಿದ ಬಾಲಕಿ ಈ ವಿಷಯ ಹೇಳಿದ್ದರು.
ಪೊಲೀಸರ ಸಹಾಯಪಡೆದು ಹೆಗಡೆ ಮನೆ ಶೋಧ ನಡೆಸಿದಾಗ ಬಾತ್ ರೂಮಿನೊಳಗೆ ಬಾಲಕನನ್ನು ಕೂಡಿ ಹಾಕಿರುವುದು ಗೊತ್ತಾಯಿತು. ಆ ಬಾಲಕನನ್ನು ಬೆಂಕಿಯಿAದ ಮೈ ಸುಟ್ಟಿರುವುದು, ಬಾರಕೋಲಿನಿಂದ ಬಾರಿಸಿರುವುದು, ಕಣ್ಣಿಗೆ ಕಾರದಪುಡಿ ಎರಚಿ ನೋವು ಮಾಡಿರುವುದು ಕಾಣಿಸಿತು. ಕುಮಟಾ ಆಸ್ಪತ್ರೆ ವೈದ್ಯರು ಬಾಲಕನಿಗೆ ಚಿಕಿತ್ಸೆ ನೀಡಿದ್ದು, ಒಂದು ಹೊತ್ತಿನ ಊಟ, ಬಟ್ಟೆಯನ್ನು ಕೊಡದೇ ಚಿತ್ರಹಿಂಸೆ ನೀಡಿದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡರು. ಚಿತ್ರಹಿoಸೆ ಅನುಭವಿಸದ ಬಾಲಕ ಹೇಳಿದ್ದೇನು? ಆತನ ತಾಯಿ ಮಾತು ಏನು? ವಿಡಿಯೋ ಇಲ್ಲಿ ನೋಡಿ..