ಶಿರಸಿಯ ಹೀಪನಳ್ಳಿ ಬಳಿಯ ಹೊನ್ನಜ್ಜೆಯಲ್ಲಿನ ಹೊಡೆದಾಟ ಪ್ರಕರಣ ಹೊಸ ಸ್ವರೂಪಪಡೆದಿದೆ. ತಾಯಿ ಬಗ್ಗೆ ಕೆಟ್ಟದಾಗಿ ನಿಂದಿಸಿ ಮೈ ಮುಟ್ಟಿದ ಕಾರಣ ರಕ್ಷಣೆಗಾಗಿ ಅನುಪಮ ಹೆಗಡೆ ಅವರು ರಕ್ಷಣೆಗಾಗಿ ಧಾವಿಸಿದ್ದು, ಈ ವೇಳೆ ನಡೆದ ನೂಕಾಟದಲ್ಲಿ ಶ್ರೀಧರ ಹೆಗಡೆ ಅವರ ಕೈಯಲ್ಲಿದ್ದ ಕತ್ತಿಯೇ ಅವರ ಮುಖಕ್ಕೆ ಬಡಿದಿದೆ. ರಕ್ತ ಸುರಿದರೂ ಶ್ರೀಪಾದ ಹೆಗಡೆ ಅವರು ತಮ್ಮ ಬೈಗುಳವನ್ನು ನಿಲ್ಲಿಸಿಲ್ಲ.
Advertisement. Scroll to continue reading.
ADVERTISEMENT
ಶ್ರೀಪಾದ ಹೆಗಡೆ ಅವರು ಅನುರಾಧಾ ಪುರುಷೋತ್ತಮ ಹೆಗಡೆ ಅವರ ಬಳಿ ಅನುಚಿತವಾಗಿ ವರ್ತಿಸಿದ ನಂತರ ಅವರ ಬಗ್ಗೆ ಕೆಟ್ಟದಾಗಿ ನಿಂದಿಸಿದ ವಿಡಿಯೋ ಮೊಬೈಲ್ ಮಿಡಿಯಾ ನೆಟ್‌ವರ್ಕಗೆ ಸಿಕ್ಕಿದೆ. ಈ ಬಗ್ಗೆ ಅನುರಾಧಾ ಪುರುಷೋತ್ತಮ ಹೆಗಡೆ ಅವರು ತಮಗಾದ ನೋವನ್ನು ತೋಡಿಕೊಂಡಿದ್ದು, ಶ್ರೀಪಾದ ಮಹಾಬಲೇಶ್ವರ ಹೆಗಡೆ ಅವರು ಅನುರಾಧಾ ಹೆಗಡೆ ಅವರ ಮಾಲ್ಕಿ ಜಾಗಕ್ಕೆ ಕತ್ತಿ ಹಿಡಿದು ಪ್ರವೇಶಿಸಿದ ದಾಖಲೆಗಳನ್ನು ಒದಗಿಸಿದ್ದಾರೆ.
ADVERTISEMENT
ಹೊಳೆಯಲ್ಲಿ ಹರಿಯುವ ನೀರನ್ನು ಮಂಡಗಾಲುವೆಯಲ್ಲಿ ಬಿಡುವ ವಿಷಯವಾಗಿ ಶಿರಸಿಯ ಹೀಪನಳ್ಳಿ ಬಳಿಯ ಹೊನ್ನಜ್ಜೆಯಲ್ಲಿನ ವಾತಾವರಣ ಹದಗೆಟ್ಟಿದೆ. ಇದೇ ವಿಷಯವಾಗಿ ಶ್ರೀಪಾದ ಹೆಗಡೆ ಅವರು ವೈಮನಸ್ಸು ಹೊಂದಿದ್ದು, ಡಿಸೆಂಬರ್ 21ರಂದು ಅನುರಾಧಾ ಹೆಗಡೆ ಅವರ ಮನೆ ಅಂಗಳಕ್ಕೆ ಕತ್ತಿ ಹಿಡಿದು ಹೋಗಿ ರಂಪಾಟ ಮಾಡಿದ್ದಾರೆ. `ಕೆಟ್ಟದಾಗಿ ಯಾಕೆ ಬಯ್ಯುವೆ?’ ಎಂದು ಪ್ರಶ್ನಿಸಿದಾಗ ಅನುರಾಧಾ ಹೆಗಡೆ ಅವರ ಬಟ್ಟೆ ಹರಿದಿದ್ದಾರೆ. ಈ ವೇಳೆ ಶ್ರೀಪಾದ ಹೆಗಡೆ ಅವರು ತಾವು ತಂದಿದ್ದ ಕತ್ತಿಯನ್ನು ಅನುರಾಧಾ ಹೆಗಡೆ ಅವರ ಕಡೆ ಬೀಸಿದ್ದು, ಅನುರಾಧಾ ಹೆಗಡೆ ಅವರ ಕೈ ಬೆರಳಿಗೆ ಗಾಯವಾಗಿದೆ.
ADVERTISEMENT
ಈ ವೇಳೆ ಅನುರಾಧಾ ಹೆಗಡೆ ಅವರ ಮಗ ಅನುಪಮ ಹೆಗಡೆ ಅವರು ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಗಲಾಟೆ ಕೇಳಿ ಅಂಗಳಕ್ಕೆ ಬಂದಿದ್ದಾರೆ. ತಾಯಿ ರಕ್ಷಣೆಗಾಗಿ ಅವರು ಧಾವಿಸಿದಾಗ ಅಲ್ಲಿ ನೂಕಾಟ ನಡೆದಿದ್ದು, ಶ್ರೀಪಾದ ಹೆಗಡೆ ಅವರ ಕೈಯಲ್ಲಿದ್ದ ಕತ್ತಿ ಅವರ ತಲೆಗೆ ಬಡಿದಿದೆ. ಮುಖದಿಂದ ರಕ್ತ ಸುರಿದರೂ ಶ್ರೀಪಾದ ಹೆಗಡೆ ಸುಮ್ಮನಾಗದೇ ಇನ್ನಷ್ಟು ರಂಪಾಟ ಮಾಡಿದ್ದಾರೆ. `ನಾನು ದ್ವೇಷ ಮಾಡುವುದಕ್ಕಾಗಿಯೇ ಬಂದಿದ್ದೇನೆ’ ಎಂಬ ನಿಟ್ಟಿನಲ್ಲಿ ಅವರು ಕೂಗಾಡಿದ್ದಾರೆ. ಗಲಾಟೆಯ ಶಬ್ದ ಕೇಳಿ ಅಕ್ಕ-ಪಕ್ಕದ ಮನೆಯವರು ಆಗಮಿಸಿದ್ದು, ತಂದಿದ್ದ ಕತ್ತಿ ಹಿಡಿದು ಶ್ರೀಪಾದ ಹೆಗಡೆ ಅವರು ಅಲ್ಲಿಂದ ಹೊರಟಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಅಲ್ಲಿದ್ದ ಜನ ವಿಡಿಯೋ ಮಾಡಿದ್ದು, ಅದನ್ನು ಮುಖ್ಯ ಸಾಕ್ಷಿಯನ್ನಾಗಿಸಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಅನುರಾಧಾ ಹೆಗಡೆ ಅವರು ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ಶುರು ಮಾಡಿದ್ದಾರೆ.
ಅನುರಾಧಾ ಹೆಗಡೆ ಕುಟುಂಬಕ್ಕೆ ಬೆದರಿಕೆ ಒಡ್ಡಿದ ಶ್ರೀಪಾದ ಹೆಗಡೆ ಅವರ ವಿಡಿಯೋ ಇಲ್ಲಿ ನೋಡಿ..