ಬೇಲಿಕೇರಿ ಅದಿರನ್ನು ಅಕ್ರಮವಾಗಿ ರಪ್ತು ಮಾಡಿದ ಪ್ರಕರಣದಲ್ಲಿ ತನಿಖಾ ಸಂಸ್ಥೆಗೆ ಹಿನ್ನಡೆ ಆಗಿದೆ. ಎಂಎಸ್‌ಪಿಎಲ್ ಲಿಮಿಟೆಡ್ ಹಾಗೂ ಅದರ ನಿರ್ದೇಶಕರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ ರದ್ಧುಪಡಿಸಿದೆ.
ಬಳ್ಳಾರಿ ಬಳಿಯ ಹೊಸಪೇಟೆಯಲ್ಲಿನ ಅಕ್ರಮ ಗಣಿಗಾರಿಕೆಗೆ ಸಂಬAಧಿಸಿದAತೆ ಸಮಾಜ ಪರಿವರ್ತನಾ ಸಮುದಾಯ ಮತ್ತು ಇತರರು 2009ರಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ ಅದರ ತನಿಖೆಗೆ ಸಮಿತಿ ನೇಮಿಸಿತ್ತು. 2009ರ ಜನವರಿಯಿಂದ 2010ರ ಮೇ 31ರವರೆಗೆ ಬೆಲೆಕೇರಿ ಬಂದರಿನ ಮೂಲಕ ರಫ್ತು ಮಾಡಿದ್ದ 32.27 ಲಕ್ಷ ಟನ್ ಕಬ್ಬಿಣದ ಅಧಿರಿನ ತನಿಖೆ ನಡೆಸಲು ಕೋರ್ಟು ಸಿಬಿಐಗೆ ನಿರ್ದೇಶನ ನೀಡಿತ್ತು. ಆ ಆಧಾರದಲ್ಲಿ ಸಿಬಿಐ ತನಿಖಾ ತಂಡದವರು ಎಂಎಸ್‌ಪಿಎಲ್ ಹಾಗೂ ಅದರ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. 9 ವರ್ಷದ ತನಿಖೆ ನಂತರ 2022ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿತ್ತು.
ಎಂಎಸ್‌ಪಿಎಲ್ ಮತ್ತು ಅದರ ನಿರ್ದೇಶಕರಾದ ನರೇಂದ್ರ ಕುಮಾರ್, ಬಲ್ಡೋಟಾ ಮತ್ತು ರಾಹುಲ್ ಕುಮಾರ್ ಅವರು ಗಣಿ ಇಲಾಖೆ ಪರವಾನಿಗೆ ಇಲ್ಲದೇ ಅದಿರು ಖರೀದಿಸಿದ ಬಗ್ಗೆ ದೂರಲಾಗಿತ್ತು. ಇದನ್ನು ಪ್ರಶ್ನಿಸಿ ಆರೋಪಿತರು ಹೈಕೋರ್ಟಿನ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ ಆರೋಪಕ್ಕೆ ಸಂಬAಧಿಸಿದ ಸಾಕ್ಷಿ ಇಲ್ಲದ ಕಾರಣ ಪ್ರಕರಣ ವಜಾ ಮಾಡಿತ್ತು. `ಅರ್ಜಿದಾರರ ವಿರುದ್ಧ 39 ಸಾವಿರ ಮೆಟ್ರಿಕ್ ಟನ್ ಅಕ್ರಮ ಅದಿರು ಸಾಗಾಟ ಆರೋಪವಿದೆ. ಅದು ರಾಜ್ಯ ತನಿಖಾ ವ್ಯಾಪ್ತಿಗೆ ಬರುತ್ತಿದ್ದ ಕಾರಣ ನೀಡಿ ಪ್ರಕರಣವನ್ನು 2024ರಲ್ಲಿ ವಜಾಗೊಳಿಸಿತ್ತು. ಇದನ್ನು ಸಿಬಿಐ ಸುಪ್ರೀಂಕೋರ್ಟಿನ ಮೊರೆ ಹೋಗಿದ್ದು, ಸುಪ್ರೀಂ ಕೋರ್ಟ ಮತ್ತೆ ಮೆರಿಟ್ ಆಧಾರದಲ್ಲಿ ವಿಚಾರಣೆ ನಡೆಸುವಂತೆ ಹೈಕೋರ್ಟಿಗೆ ನಿರ್ದೇಶನ ನೀಡಿತ್ತು.
ಪ್ರಾಥಮಿಕ ವಿಚಾರಣೆಗೆ ಒಳಪಟ್ಟಿದ್ದ ಮತ್ತು ಅಧಿಕೃತ ಪರವಾನಗಿ ಇಲ್ಲದೆ 50 ಸಾವಿರ ಮೆಟ್ರಿಕ್ ಟನ್‌ಗಿಂತ ಹೆಚ್ಚಿನ ಕಬ್ಬಿಣದ ಅದಿರನ್ನು ರಫ್ತು ಮಾಡಿದ ರಫ್ತುದಾರರ ವಿರುದ್ಧ ಮಾತ್ರ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಿಬಿಐಗೆ 2013ರಲ್ಲಿ ನ್ಯಾಯಾಲಯ ಅನುಮತಿ ನೀಡಿತ್ತು. 50 ಸಾವಿರ ಮೆಟ್ರಿಕ್ ಟನ್‌ಗಿಂತ ಕಡಿಮೆ ಇರುವ ಪ್ರಕರಣಗಳ ತನಿಖೆಯನ್ನು ರಾಜ್ಯಮಟ್ಟದಲ್ಲಿ ನಡೆಸಬೇಕು ಎಂದು ಸುಪ್ರೀಂ ಕೋರ್ಟ ಸೂಚಿಸಿತ್ತು. `ರಾಜಧನ ಮತ್ತು ಅರಣ್ಯ ಅಭಿವೃದ್ಧಿ ತೆರಿಗೆ ಪಾವತಿಸದೆ ಸರ್ಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ. ಪರವಾನಿಗೆ ಇಲ್ಲದೆ ಅದಿರು ಗಣಿಗಾರಿಕೆ ಮಾಡಲಾಗಿದೆ ಎಂದು ಸಿಬಿಐ ವಾದಿಸಿತ್ತು. ಇದನ್ನು ವಿರೋಧಿಸಿದ ಎಂಎಸ್‌ಪಿಎಲ್ `ಗಣಿಗಾರಿಕೆಗೆ ಪರವಾನಿಗೆಗಳನ್ನು ಪಡೆಯುವ ಜವಾಬ್ದಾರಿ ಖರೀದಿದಾರರದಲ್ಲ. ನಮ್ಮ ಖರೀದಿ ಒಪ್ಪಂದಗಳಲ್ಲಿ ಅದಿರು ಪೂರೈಕೆದಾರರು ಅಧಿಕೃತ ಪರವಾನಿಗೆಗಳನ್ನು ಪಡೆದಿರಬೇಕು’ ಎಂದು ವಾದಿಸಿತ್ತು.
ಈ ವಾದಗಳನ್ನು ಪರಿಗಣಿಸಿದ ನ್ಯಾಯಾಲಯ `ಸಿಬಿಐ ತನ್ನ ವಾದಗಳಿಗೆ ಪುರಾವೆಗಳನ್ನು ಒದಗಿಸಿಲ್ಲ. ಅಕ್ರಮ ನಡೆಸಲು ಪಿತೂರಿ ನಡೆಸಿದ್ದಾರೆ ಎಂದು ಸಾಬೀತಾಗದ ಹೊರತು ಅದಿರು ಪೂರೈಕೆದಾರರ ತಪ್ಪಿಗೆ ಖರೀದಿದಾರರನ್ನು ಹೊಣೆ ಮಾಡಲು ಸಾಧ್ಯವಿಲ್ಲ; ಎಂದು ಹೇಳಿದೆ. `ಕ್ರಿಮಿನಲ್ ಚಟುವಟಿಕೆಗೆ ಪೂರಕವಾಗಿ ಸಿಬಿಐ ಸಾಕ್ಷಿ ಒದಗಿಸಿಲ್ಲ’ ಎಂಬ ಕಾರಣಕ್ಕೆ ಕ್ರಿಮಿನಲ್ ಪ್ರಕರಣದ ಮೊಕದ್ದಮೆಯನ್ನು ನ್ಯಾಯಾಲಯ ರದ್ಧು ಮಾಡಿದೆ.