ರೈಲಿನ ಪ್ರಯಾಣಿಕರನ್ನು ದರೋಡೆ ಮಾಡುವದನ್ನೇ ಕೆಲಸವನ್ನಾಗಿಸಿಕೊಂಡಿದ್ದ ಜೋಶಿ ನಾಯ್ಕ ಹಾಗೂ ಪ್ರಹ್ಲಾದ ಪೂಜಾರಿ ಅವರು ಸಿಕ್ಕಿಬಿದ್ದಿದ್ದಾರೆ. ಕೊಂಕಣ ರೈಲ್ವೆ ಪೊಲೀಸರು ಆ ಕಳ್ಳರಿಬ್ಬರನ್ನು ಕಾರವಾರ ಪೊಲೀಸರಿಗೆ ಒಪ್ಪಿಸಿದ್ದಾರೆ.
Advertisement. Scroll to continue reading.
ಬುಧವಾರ ಬೆಳಗ್ಗೆ ಕಾರವಾರದ ಶಿರವಾಡ ರೈಲು ನಿಲ್ದಾಣಕ್ಕೆ ಮಂಗಳ ಎಕ್ಸಪ್ರೆಸ್ ರೈಲು ಆಗಮಿಸಿತು. ರೈಲ್ವೇ ಪೊಲೀಸರು ತಪಾಸಣೆ ನಡೆಸುತ್ತಿರುವಾಗ ಇಬ್ಬರು ಅನುಮಾನಾಸ್ಪದವಾಗಿ ವರ್ತಿಸಿದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರಿಬ್ಬರು ಕಳ್ಳತನ ಮಾಡುವುದಕ್ಕಾಗಿಯೇ ರೈಲು ಪ್ರಯಾಣ ಮಾಡುತ್ತಿರುವುದು ಗೊತ್ತಾಯಿತು.
ಕೊಂಕಣ ರೈಲ್ವೆ ಪೊಲೀಸ್ ಅಧಿಕಾರಿ ರಂಜAತ್ ಮರಾಂಡೆ ಅವರು ಬಳ್ಳಾರಿಯ ಜೋಶಿ ನಾಯ್ಕ ಹಾಗೂ ಕುಂದಾಪುರದ ಪ್ರಹ್ಲಾದ ಪೂಜಾರಿ ಅವರನ್ನು ವಶಕ್ಕೆಪಡೆದರು. ತಪಾಸಣೆ ನಡೆಸಿದಾಗ ಅವರ ಬಳಿ ಲಾಪ್‌ಟಾಪ್, ಐಫೋನ್ ಹಾಗೂ 3500ರೂ ಹಣ ಸಿಕ್ಕಿತು. ಡಿಸೆಂಬರ್ 2ರಂದು ಉದನಾ ಎಕ್ಸಪ್ರೆಸ್ ರೈಲಿನಲ್ಲಿ ಇದನ್ನು ಕದ್ದಿರುವುದಾಗಿ ಅವರಿಬ್ಬರು ಒಪ್ಪಿಕೊಂಡರು. ಹಳೆ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಸೌಜನ್ಯ ಶೆಟ್ಟಿ ಅವರು ಅದೇ ದಿನ 3.50 ಲಕ್ಷ ರೂ ಮೌಲ್ಯದ ಸಾಮಗ್ರಿ ಕಳ್ಳತನವಾದ ಬಗ್ಗೆ ದೂರು ನೀಡಿರುವುದು ಕಾಣಿಸಿತು.
ಈ ಹಿನ್ನಲೆ ರಂಜ ಮರಾಂಡೆ ಅವರು ಆ ಕಳ್ಳರಿಬ್ಬರನ್ನು ಕಾರವಾರ ಗ್ರಾಮೀಣ ಠಾಣೆಗೆ ಒಪ್ಪಿಸಿದರು. ಜೊತೆಗೆ ಅವರ ವಿರುದ್ಧ ದೂರು ನೀಡಿದರು.