ಪರಮೇಶ್ವರ ನಾಯ್ಕ, ಚಂದ್ರು ನಾಯ್ಕ ಹಾಗೂ ರಘು ನಾಯ್ಕ ಅವರು 10-15 ಗುಂಟೆ ಜಾಗದಲ್ಲಿ ಲಕ್ಷಾಂತರ ರೂ ದುಡಿದಿದ್ದಾರೆ. ಆದರೆ, ಅದು ಸಕ್ರಮವಾಗಲ್ಲ!
ಭಟ್ಕಳದ ಬೆಣಂದೂರಿನ ಪರಮೇಶ್ವರ ಜಟ್ಟಾ ನಾಯ್ಕ, ಮುಂಡಳ್ಳಿ ಚೌತನಿಯ ಚಂದ್ರ ನಾರಾಯಣ ನಾಯ್ಕ ಹಾಗೂ ಬೆಳಕೆ ಹಡೀನದ ರಘು ನಾರಾಯಣ ನಾಯ್ಕ ಅವರು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಮಂಡಳ್ಳಿ ಗ್ರಾಮದ ಸರ್ವೇ ನಂ 207ರಲ್ಲಿ ಕಾನೂನುಬಾಹಿರವಾಗಿ ಗಣಿಕಾರಿಕೆ ಮಾಡಿದ್ದಾರೆ. ಪರಮೇಶ್ವರ ನಾಯ್ಕ ಅವರ ಜೊತೆ ಸೇರಿ ಚಂದ್ರು ನಾಯ್ಕ ಹಾಗೂ ರಘು ನಾಯ್ಕ ಸೇರಿ ಚೀರೆಕಲ್ಲು ಕಳ್ಳ ಸಾಗಾಣಿಕೆ ಮಾಡಿದ್ದಾರೆ. ಆ ಮೂಲಕ ಅವರು ಪರಿಸರಕ್ಕೆ ಹಾನಿ ಮಾಡಿ ಲಕ್ಷಾಂತರ ರೂ ಸಂಪಾದಿಸಿದ್ದಾರೆ.
ಪರಮೇಶ್ವರ ನಾಯ್ಕ ಅವರು 15 ಗುಂಟೆ ಕ್ಷೇತ್ರದಲ್ಲಿ 2300 ಮೆಟ್ರಿಕ್ ಟನ್ ಚೀರೆಕಲ್ಲು ತೆಗೆದಿದ್ದಾರೆ. ಚಂದ್ರು ನಾಯ್ಕ ಅವರು 10 ಗುಂಟೆ ಜಾಗದಲ್ಲಿ 1500 ಮೆಟ್ರಿಕ್ ಟನ್ ಚೀರೆಕಲ್ಲು ತೆಗೆದಿದ್ದಾರೆ. ರಾಘು ನಾಯ್ಕ ಅವರು ಸಹ 10 ಗುಂಟೆ ಜಾಗದಲ್ಲಿ 1500 ಮೆಟ್ರಿಕ್ ಟನ್ ಚಿರೇಕಲ್ಲು ತೆಗೆದಿದ್ದಾರೆ. ಇದಕ್ಕೆ ಅವರು ಸರ್ಕಾರದಿಂದ ಪರವಾನಿಗೆ ಪಡೆದಿಲ್ಲ. ರಾಜಧನ ಪಾವತಿ ಮಾಡಿಲ್ಲ. ಪರಿಸರಕ್ಕೆ ಆಗುವ ಹಾನಿ ಬಗ್ಗೆ ಅರಿವಿದ್ದರೂ ಆ ಬಗ್ಗೆ ಯೋಚಿಸಿಲ್ಲ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಸುಭಾಶ್ಚಂದ್ರ ಅವರು ಈ ಗಣಿ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಆ ಮೂವರು ಸೇರಿ ನಡೆಸಿದ ಅಕ್ರಮಗಳನ್ನು ನೋಡಿ ಕಂಗಾಲಾಗಿದ್ದಾರೆ. 3.71 ಲಕ್ಷ ರೂ ಮೋಸವಾಗಿರುವ ಬಗ್ಗೆ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಆ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.