ಶಿರಸಿಯ ಕೀರ್ತಿ ನಾಯಕ ಅವರಿಗೆ ಮದುವೆಯಾದ ಗಂಡನೇ ಚಿತ್ರಹಿಂಸೆ ಕೊಟ್ಟಿದ್ದಾರೆ. 10 ಲಕ್ಷ ರೂ ಮೌಲ್ಯದ ಬಂಗಾರದ ಒಡವೆ ಕೊಟ್ಟು ಮದುವೆ ಮಾಡಿದ್ದರೂ ಇನ್ನಷ್ಟು ಹಪಾಹಪಿತನಕ್ಕೆ ಬಿದ್ದ ಮಧುಕರ ನಾಯಕ ಅವರು ಕೀರ್ತಿ ನಾಯಕ ಅವರನ್ನು ಪೀಡಿಸುತ್ತಿದ್ದಾರೆ.
ಶಿರಸಿಯ ಮೇಲಿನ ಓಣಿಕೇರಿಯಲ್ಲಿ ಕೀರ್ತಿ ನಾಯಕ ಅವರು ವಾಸವಾಗಿದ್ದಾರೆ. 2024ರ ಮೇ 5ರಂದು ಅವರು ಕೊಪ್ಪಳದ ಬ್ಯಾಂಕ್‌ವೊAದರ ನೌಕರ ಮಧುಕರ ನಾಯಕ ಅವರನ್ನು ಮದುವೆ ಆಗಿದ್ದಾರೆ. ಅವರ ವಿವಾಹ ನೋಂದಣಿಯೂ ಆಗಿದೆ. ಮದುವೆ ಅವಧಿಯಲ್ಲಿ ಕೀರ್ತಿ ನಾಯಕ ಅವರ ಪಾಲಕರು 10 ಲಕ್ಷ ರೂ ಮೌಲ್ಯದ ಬಂಗಾರದ ಒಡವೆಯನ್ನು ಮಾಡಿಸಿಕೊಟ್ಟಿದ್ದಾರೆ. ಅದಕ್ಕೆ ತೃಪ್ತಿಯಾಗದ ಮಧುಕರ ನಾಯಕ ಅವರು ಇನ್ನಷ್ಟು ವರದಕ್ಷಿಣೆ ತರುವಂತೆ ಕೀರ್ತಿ ನಾಯಕ ಅವರನ್ನು ಕಾಡಿಸುತ್ತಿದ್ದಾರೆ.
ಮಧುಕರ ನಾಗಪ್ಪ ನಾಯಕ ಅವರು ಕೊಪ್ಪಳದ ಹಮಾಲರ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಮದುವೆ ಆದ ಹೊಸತರಲ್ಲಿ ಪತ್ನಿಯನ್ನು ಚನ್ನಾಗಿಯೇ ನೋಡಿಕೊಂಡ ಮಧುಕರ ನಾಯಕ ಅವರು ನಂತರ ಹಣದ ಹಪಾಹಪಿತನಕ್ಕೆ ಒಳಗಾಗಿದ್ದಾರೆ. ಕೀರ್ತಿ ನಾಯಕ ಅವರ ಮೇಲೆ ಮಧುಕರ ನಾಯಕ ಅವರಿಗೆ ಅನುಮಾನ. ಹೀಗಾಗಿ ಕೀರ್ತಿ ನಾಯಕ ಅವರನ್ನು ಮಧುಕರ ನಾಯಕ ಅವರು ಗೃಹ ಬಂಧನದಲ್ಲಿರಿಸಿದ್ದು, ಅವರು ಅಲ್ಲಿಂದ ತಪ್ಪಿಸಿಕೊಂಡು ತವರು ಮನೆಗೆ ಬಂದಿದ್ದಾರೆ.
ಕೀರ್ತಿ ನಾಯಕ ಹಾಗೂ ಮಧುಕರ ನಾಯಕ ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಅಗಸ್ಟ 7ರಂದು ಹೆಣ್ಣು ಮಗುವೊಂದು ಜನಿಸಿದ್ದು, ಆ ಮಗುವಿನ ಮುಖ ನೋಡಲು ಸಹ ಮಧುಕರ ನಾಯಕ ಅವರು ಬರುತ್ತಿಲ್ಲ. ನವೆಂಬರ್ 23ರಂದು ಕೀರ್ತಿ ನಾಯಕ ಅವರು ತವರು ಮನೆ ಸೇರಿದ್ದು, ಮಧುಕರ ನಾಯಕ ಅವರು ಪದೇ ಪದೇ ಕೀರ್ತಿ ನಾಯಕ ಅವರಿಗೆ ಫೋನ್ ಮಾಡಿ ವರದಕ್ಷಿಣೆ ತರುವಂತೆ ದುಂಬಾಲು ಬಿದ್ದಿದ್ದಾರೆ.
ವರದಕ್ಷಿಣೆ ಕೊಡದ ಕಾರಣ ಸಿಟ್ಟಿಗೆದ್ದ ಮಧುಕರ ನಾಯಕ ಅವರು ನವೆಂಬರ್ 25ರಂದು ಶಿರಸಿಗೆ ಬಂದಿದ್ದಾರೆ. ತಮ್ಮೊಂದಿಗೆ ಇನ್ನಷ್ಟು ಜನರನ್ನು ಕರೆದುಕೊಂಡು ಬಂದಿದ್ದ ಮಧುಕರ ನಾಯಕ ಅವರು ಮೇಲಿನ ಓಣಿಕೇರಿಗೆ ತೆರಳಿದ್ದಾರೆ. ಕೀರ್ತಿ ನಾಯಕ ಅವರಿದ್ದ ಮನೆ ಬಾಗಿಲು ಬಡಿದು ರಂಪಾಟ ಮಾಡಿದ್ದಾರೆ. ಕೀರ್ತಿ ನಾಯಕ ಅವರ ತಾಯಿ ಬಾಗಿಲು ತೆರೆದಾಗ ಕೆಟ್ಟದಾಗಿ ಬೈದು ನಿಂದಿಸಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ಕೀರ್ತಿ ನಾಯಕ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅನ್ಯಾಯ, ದೌರ್ಜನ್ಯ ಸೇರಿ ಯಾವುದೇ ಬಗೆಯ ಸಹಾಯಕ್ಕಾಗಿ ಮಹಿಳೆಯರು 181ಗೆ ಫೋನ್ ಮಾಡಿ