ಕುಮಟಾದ ಕೋಡ್ಕಣಿ ಶಾಲೆಯಲ್ಲಿ ನಡೆದ ಮಕ್ಕಳ ಸಂತೆಗೆ ಬರಪೂರ ಜನ ಬಂದಿದ್ದು, ಶಾಲಾ ವಿದ್ಯಾರ್ಥಿಗಳು ಸೊಪ್ಪು-ತರಕಾರಿಗಳ ಜೊತೆ ವಿವಿಧ ಖಾದ್ಯಗಳನ್ನು ಮಾರಾಟ ಮಾಡಿದ್ದಾರೆ.
ಮಕ್ಕಳಲ್ಲಿ ಪ್ರಾಯೋಗಿಕ ಕಲಿಕೆ, ವ್ಯವಹಾರ ಜ್ಞಾನ ಮತ್ತು ಗಣಿತದ ಆಳ ಅಧ್ಯಯನ ವೃದ್ಧಿಸುವ ಉದ್ದೇಶದಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.ಕೋಡ್ಕಣಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಜನರಿಂದ ತುಂಬಿದ್ದು ನೆರೆದಿದ್ದವರು ಮಕ್ಕಳ ವ್ಯಾಪಾರ-ವಹೀವಾಟು ವೃದ್ಧಿಗೆ ಕೈ ಜೋಡಿಸಿದರು.
ವಿದ್ಯಾರ್ಥಿಗಳು ತಮ್ಮ ಮನೆಯಿಂದ ತಂದಿದ್ದ ತಾಜಾ ತರಕಾರಿಗಳು, ಸೊಪ್ಪು, ಹಣ್ಣುಗಳು, ಮನೆಯಲ್ಲೇ ತಯಾರಿಸಿದ ತಿಂಡಿ-ತಿನಿಸುಗಳು, ಮಂಡಕ್ಕಿ, ಕರಕುಶಲ ವಸ್ತುಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ಪ್ರದರ್ಶನ ನಡೆಸಿದರು. ‘ಬನ್ನಿ, ಬನ್ನಿ, ತಾಜಾ ತರಕಾರಿ ತಗೊಳ್ಳಿ’ ಎಂದು ಕೂಗುವಿದನ್ನು ನೋಡಿ ಜನ ಮರುಳಾದರು. ‘ಪುಸ್ತಕದ ಅರಿವಿನ ಜೊತೆಗೆ ಜೀವನದ ಕೌಶಲ್ಯಗಳನ್ನು ಕಲಿಸುವುದು ಇಂದಿನ ಅಗತ್ಯವಾಗಿದೆ. ಮಕ್ಕಳು ಹಣದ ಮೌಲ್ಯ ಮತ್ತು ದುಡಿಮೆಯ ಮಹತ್ವವನ್ನು ಅರಿಯಲು ಇಂತಹ ಕಾರ್ಯಕ್ರಮಗಳು ಸಹಕಾರಿ’ ಎಂದು ಆಯೋಜಕರು ವಿವರಿಸಿದರು. ಶಾಲಾ ಶಿಕ್ಷಕರು, ಎಸ್ಡಿಎಂಸಿ ಸದಸ್ಯರ ಜೊತೆ ಪೋಷಕರು ಹಾಗೂ ಊರ ನಾಗರಿಕರು ಸೇರಿ ಸಂತೆ ಯಶ್ಸಸ್ಸಿಗೆ ಕಾರಣರಾದರು.