ಉತ್ತರ ಕನ್ನಡ ಜಿಲ್ಲೆಯನ್ನು ಸೇರಿ ರಾಜ್ಯದ ಅನೇಕ ಪೊಲೀಸ್ ವಾಹನಗಳಿಗೆ ಪೆಟ್ರೋಲ್ ತುಂಬಿಸುವ ವಿಷಯದಲ್ಲಿ ಅಪರಾತಪರ ನಡೆದಿದೆ.
ಸರ್ಕಾರಿ ಅಧೀನದಲ್ಲಿರುವ ಎಲ್ಲಾ ಪೊಲೀಸ್ ಠಾಣೆಯ ವಾಹನಗಳಿಗೂ ಇಂಧನ ತುಂಬಿಸುವ ಹೊಣೆಯನ್ನು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಆ ಗುತ್ತಿಗೆ ಷರತ್ತಿನ ಪ್ರಕಾರ ಇಂಧನ ಪಾವತಿ ನಂತರ ಪಾವತಿ ಮೊತ್ತದ ಶೇ 0.75ರಷ್ಟು ಹಣವನ್ನು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಸ್ಥೆ ಪೊಲೀಸ್ ಖಾತೆಗೆ ಪ್ರೋತ್ಸಾಹಧನ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದರೆ, 2016ರಿಂದಲೂ ಈ ಪ್ರೋತ್ಸಾಹಧನ ಸರಿಯಾಗಿ ಪಾವತಿ ಆಗಿಲ್ಲ. ಕೆಲವೊಮ್ಮೆ ಪಾವತಿಸಿದ ದಾಖಲೆಗಳಿದ್ದರೂ ಇಂಧನಕ್ಕಾಗಿ ನೀಡಿದ ಹಣಕ್ಕೆ ಅದು ತಾಳೆ ಆಗುತ್ತಿಲ್ಲ.
2016ರ ಏಪ್ರಿಲಿನಿಂದ 2017ರ ಮಾರ್ಚ 31ರವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 194 ಪೊಲೀಸ್ ವಾಹನಗಳಿದ್ದವು. 2017ರಿಂದ 2018ರವರೆಗೆ 184 ಹಾಗೂ 2018ರಿಂದ 2019ರವರೆಗೆ 202 ವಾಹನಗಳಿದ್ದವು. ಈ ಎಲ್ಲಾ ವಾಹನಗಳಿಗೆ ಇಂಧನ ಪಾವತಿಗಾಗಿ ಸರ್ಕಾರವೇ ಪೆಟ್ರೋ ಕಾರ್ಡ ಸೌಲಭ್ಯ ಕಲ್ಪಿಸಿತ್ತು. ಆ ಪೆಟ್ರೋ ಕಾರ್ಡ ಬಳಸಿ ಪೊಲೀಸ್ ವಾಹನಗಳಿಗೆ ಇಂಧನ ಭರ್ತಿ ಮಾಡಲಾಗುತ್ತಿದ್ದು, ಚುನಾವಣೆ ಹಾಗೂ ಇನ್ನಿತರ ಸನ್ನಿವೇಶಗಳ ಅವಧಿಯಲ್ಲಿ ಖಾಸಗಿ ವಾಹಹನಗಳನ್ನು ಸಹ ಬಾಡಿಗೆಗೆಪಡೆದು ಇಂಧನ ಪಾವತಿ ಮಾಡಲಾಗಿದೆ. ಆದರೆ, ಇಂಧನ ಪಾವತಿ ವಿಷಯವಾಗಿ ಸರ್ಕಾರಿ ಖಜಾನೆಯಿಂದ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಸ್ಥೆಗೆ ಹಣ ಪಾವತಿ ಆಗಿದ್ದರೂ, ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಸ್ಥೆಯಿAದ ಪೆಟ್ರೋ ಕಾರ್ಡ ಖಾತೆಗೆ ಬರಬೇಕಿದ್ದ ಪ್ರೋತ್ಸಾಹಧನ ಸರಿಯಾಗಿ ಬಂದಿಲ್ಲ.
2016ರ ಏಪ್ರಿಲ್ ತಿಂಗಳಿನಿAದ 2019ರ ಮಾರ್ಚಿನವರೆಗೆ ಇಂಧನಕ್ಕಾಗಿ ಪಾವತಿಸಿದ ಮೊತ್ತ ಹಾಗೂ ಗುತ್ತಿಗೆ ಸಂಸ್ಥೆಯಿAದ ಪೊಲೀಸ್ ಪೆಟ್ರೋ ಕಾರ್ಡಿಗೆ ಬಂದ ಪ್ರೋತ್ಸಾಹ ಹೊಂದಾಣಿಕೆ ಆಗುತ್ತಿಲ್ಲ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಪತ್ತೆಯಾಗಿದೆ. `ದಿ ಫೈಲ್’ ಪ್ರಕಟಿಸಿದ ತನಿಖಾ ವರದಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ-ಅoಶಗಳನ್ನು ವಿವರವಾಗಿ ಪ್ರಕಟಿಸಲಾಗಿದೆ. ಅದರ ಪ್ರಕಾರ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಸ್ಥೆಯಿAದ ರಾಜ್ಯ ಪೊಲೀಸ್ ಇಲಾಖೆಗೆ 24.61 ಲಕ್ಷ ರೂ ಬರಬೇಕಿದ್ದಯ, ಉತ್ತರ ಕನ್ನಡ ಪೊಲೀಸ್ ಘಟಕದ ಹಣಕಾಸು ವಿಷಯದಲ್ಲಿಯೂ 93311ರೂ ವ್ಯತ್ಯಾಸ ಬರುತ್ತಿದೆ.
ಇದರೊಂದಿಗೆ ಹೆಚ್ಚುವರಿ ಪೆಟ್ರೋ ಕಾರ್ಡ ಬಗ್ಗೆ ಲೆಕ್ಕ ಪರಿಶೋಧನೆಯಲ್ಲಿಯೂ ಮಾಹಿತಿ ಸಿಕ್ಕಿಲ್ಲ. ಪೊಲೀಸ್ ಇಲಾಖೆಯ ವಾಹನಗಳಿಗೆ ಇಂಧನ ತುಂಬಿಸಿದ ನಂತರ ಬರಬೇಕಾದ ಕ್ಯಾಶ್ ಬ್ಯಾಕ್ ವಿಷಯದಲ್ಲಿ ಹಲವು ಬಗೆಯ ಉಲ್ಲಂಘನೆ, ಲೋಪ, ನಿಗದಿಪಡಿಸಿದಕ್ಕಿಂತಲೂ ಕಡಿಮೆ ಮೊತ್ತ ಪಾವತಿಯಾಗಿದ್ದರೂ ಸರ್ಕಾರ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.