ಮೇಷ ರಾಶಿ: ನಿಮ್ಮ ವೃತ್ತಿ ಜೀವನದಲ್ಲಿ ಸಣ್ಣ ಸವಾಲು ಎದುರಗಲಿದೆ. ಅದನ್ನು ಎದುರಿಸಿದರೆ ಗೌರವ ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಬೆಂಬಲದಿoದ ಸಮಸ್ಯೆ ದೂರವಾಗಲಿದೆ. ಪ್ರೀತಿ ಸಂಬAಧಗಳಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ. ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ.
ವೃಷಭ ರಾಶಿ: ಹಣಕಾಸು ವಿಷಯಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಕೆಲಸದಲ್ಲಿ ಸಹಕಾರ ಸಿಗುತ್ತದೆಯಾದರೂ ತುರ್ತು ನಿರ್ಧಾರಗಳು ಒಳ್ಳೆಯದಲ್ಲ. ಕುಟುಂಬದಲ್ಲಿ ಸುಖ ಶಾಂತಿ ಕಾಣಬಹುದು. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲ ಸಿಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.
ಮಿಥುನ ರಾಶಿ: ನಿಮ್ಮ ಅದೃಷ್ಟ ಚನ್ನಾಗಿದ್ದು, ವ್ಯವಹಾರದಲ್ಲಿ ಲಾಭದ ಅವಕಾಶಗಳು ಹೆಚ್ಚಿವೆ. ಬುದ್ಧಿವಂತಿಕೆಯಿAದ ಕಷ್ಟಕರ ವಿಷಯಗಳು ದೂರವಾಗುತ್ತವೆ. ನೀವು ಮಾಡುವ ಕೆಲಸ ಯಶಸ್ವಿಯಾಗಲಿದೆ. ಉಡುಗರೆ ಸಿಗುವ ಸಾಧ್ಯತೆಯಿದೆ.
ಕರ್ಕ ರಾಶಿ: ನಿಮ್ಮ ವೃತ್ತಿ ಜೀವನ ಸುಧಾರಿಸುತ್ತದೆ. ಹೊಸ ಯೋಜನೆಗಳು ಫಲ ನೀಡುತ್ತವೆ. ಸಂಪತ್ತು ಸೌಕರ್ಯಗಳು ದ್ವಿಗುಣಗೊಳ್ಳುತ್ತವೆ. ಕುಟುಂಬದ ಸಹಕಾರ ಸಿಗುತ್ತದೆ. ಹಣಕಾಸು ಲಾಭ ಸಿಗಲಿದೆ.
ಸಿಂಹ ರಾಶಿ: ಕೆಲಸದಲ್ಲಿ ನಿಮ್ಮ ಪ್ರಭಾವ ಹೆಚ್ಚುತ್ತದೆ. ಮೇಲಧಿಕಾರಿಗಳ ಬೆಂಬಲ ದೊರೆಯುತ್ತದೆ. ನಿಮ್ಮ ಆಶಯಗಳು ಈಡೇರುತ್ತವೆ. ಸಹೋದ್ಯೋಗಿಗಳೊಂದಿಗೆ ಸಮನ್ವಯ ಉತ್ತಮವಾಗಿರತ್ತದೆ. ಶಿಕ್ಷಣ ಸ್ಪರ್ಧೆಗಳಲ್ಲಿ ಯಶಸ್ಸು ಸಿಗಲಿದೆ.
ಕನ್ಯಾ ರಾಶಿ: ತಂಡದೊAದಿಗೆ ದುಡಿದರೆ ಕೆಲಸ ಸರಳವಾಗಿರುತ್ತದೆ. ವಿದ್ಯುತ್ ಉಪಕರಣಗಳ ಕೆಲಸದಲ್ಲಿ ಲಾಭ ಆಗಲಿದೆ ಶಿಕ್ಷಣದಲ್ಲಿ ಯಶಸ್ಸು ಸಾಧ್ಯವಿದೆ. ಕುಟುಂಬ ಸುಖ ಹಾಗೂ ಆರ್ಥಿಕ ನೆಮ್ಮದಿ ಸಿಗಲಿದೆ.
ತುಲಾ ರಾಶಿ: ಮಧ್ಯಾಹ್ನದ ವೇಳೆ ವ್ಯಾಪಾರದಲ್ಲಿ ಲಾಭ ಆಗಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯದ ಮಾತುಕಥೆ ಸಾಧ್ಯವಿದೆ. ಕೆಲಸದ ವಿಷಯದಲ್ಲಿ ಗೌರವ ಹೆಚ್ಚಾಗಲಿದೆ. ಶುಭ ಸುದ್ದಿ ನಿರೀಕ್ಷೆಯಲ್ಲಿರಿ.
ವೃಶ್ಚಿಕ ರಾಶಿ: ಆಭರಣ ವ್ಯವಹಾರಕ್ಕೆ ಒಳ್ಳೆಯ ದಿನ. ಲಾಭ ಅವಕಾಶಗಳು ಹೆಚ್ಚಿದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಸಿಗಲಿದೆ. ಉಡುಗರೆಯೊಂದು ನಿಮಗಾಗಿ ಕಾದಿದೆ.
ಧನು ರಾಶಿ: ಧನ ಯೋಗ ಪ್ರಭಾವ ಹೆಚ್ಚಾಗಿದ್ದು, ಸಂಪತ್ತು ಲಾಭ ಆಗಲಿದೆ. ವ್ಯವಹಾರ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಸಂತೋಷದ ಕ್ಷಣಗಳು ನಡೆಯಲಿದೆ. ಭಯ ಬೇಡ.
ಮಕರ ರಾಶಿ: ಒತ್ತಡಗಳ ನಡುವೆ ಜೀವಿಸಲು ಸಹನೆ ಅಗತ್ಯ. ಆರ್ಥಿಕ ಲಾಭ ಸಾಧ್ಯವಾದರೂ ಎಚ್ಚರಿಕೆ ಅಗತ್ಯ. ಹೂಡಿಕೆಗೆ ಒಳ್ಳೆಯ ದಿನ. ಆರೋಗ್ಯದ ಕಡೆ ಗಮನಹರಿಸಬೇಕು.
ಕುಂಭ ರಾಶಿ: ಹಿಂದಿನ ಕಾರ್ಯಗಳ ಪರಿಣಾಮ ಈ ದಿನ ದುಪ್ಪಟ್ಟು ಲಾಭ ಸಿಗಲಿದೆ. ಶತ್ರುಗಳು ಕುತಂತ್ರ ಮಾಡುವ ಸಾಧ್ಯತೆಯಿದ್ದು, ಎಚ್ಚರಿಕೆ ಅಗತ್ಯ. ವೃತ್ತಿ ಸವಾಲುಗಳು ಎದುರಾಗಲಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವಿರಿ.
ಮೀನ ರಾಶಿ: ನಿಮ್ಮ ಬುದ್ದಿ ಶಕ್ತಿ ಆಧಾರದಲ್ಲಿ ಯಶಸ್ಸು ಸಿಗಲಿದೆ. ಪ್ರೀತಿ ವಿಷಯದಲ್ಲಿ ಸಾಮರಸ್ಯ ಅಗತ್ಯ. ಆರೋಗ್ಯ ಚನ್ನಾಗಿರಲಿದೆ. ಶುಭ ಸಂಕೇತಗಳನ್ನು ಕಾಣುವಿರಿ.