ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಿರಸಿಯ ಪತ್ರಕರ್ತ ರವೀಶ ಹೆಗಡೆ ಬೆಂಗಳೂರು ಸೇರಿದ್ದಾರೆ. ಅಲ್ಲಿ ಅವರು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರ ಶುರು ಮಾಡಿದ್ದಾರೆ. ಕಾರು ಖರೀದಿಗೆ ಹೋದವರಿಂದ ಕಾಸುಪಡೆದು ಮೋಸ ಮಾಡಿದ್ದಾರೆ!
ಶಿರಸಿಯ ಅಜ್ಜಿಬಾಳ ಬಳಿಯ ಸೊಂಡ್ಲೆಬೈಲಿನ ರವೀಶ ವೆಂಕಟ್ರಮಣ ಹೆಗಡೆ ಅವರು ಸ್ವಸ್ತಿಕ್ ನ್ಯೂಸ್ ಮಿಡಿಯಾದ ರೂವಾರಿ. ಈ ಹಿಂದೆ ಅವರು ಯಲ್ಲಾಪುರದ ಉಮ್ಮಚ್ಗಿಯ ಸೊಸೈಟಿಯಲ್ಲಿ ಸಾಲ ಕೊಡಿಸುವ ವಿಷಯವಾಗಿ ಚಿಪಗಿಯ ದಿನೇಶ ಚಿಂಚ್ರೇಕರ್ ಅವರಿಗೆ ಮೋಸ ಮಾಡಿದ್ದರು. ಅದಕ್ಕೂ ಮುನ್ನ, ಮಣಿಪುರಂ ಫೈನಾನ್ಸಿನಲ್ಲಿ ಕೆಲಸ ಮಾಡುವ ರಾಜು ಲಮಾಣಿ ಅವರ ಹೆಸರಿನಲ್ಲಿ ವಿವಿಧ ಬ್ಯಾಂಕ್ ಖಾತೆ ತೆರದು ವಂಚಿಸಿದ್ದರು.
ಚಿಪಗೇರಿಯ ಮಹಾಬಲೇಶ್ವರ ಭಟ್ಟ ಅವರ ತೋಟ ಮಾರಾಟ ವ್ಯವಹಾರದಲ್ಲಿ ಮದ್ಯವರ್ತಿಯಾಗಿ ರವೀಶ ಹೆಗಡೆ ಮೂಗು ತೂರಿಸಿದ್ದು, ಅಲ್ಲಿಯೂ ಸಿದ್ದರಾಮೇಶ್ವರ ಮೆಣಸಿನಕಾಯಿ ಎಂಬಾತರಿAದ ಹಣಪಡೆದು ಅನ್ಯಾಯ ಮಾಡಿದ್ದರು. ಇದರೊಂದಿಗೆ ಇನ್ನೂ ಅನೇಕ ಹಣಕಾಸು ಅಪರಾತಪರದಲ್ಲಿ ರವೀಶ ಹೆಗಡೆ ಭಾಗಿಯಾದ ಬಗ್ಗೆ ಮೋಸ ಹೋದವರು ಪೊಲೀಸ್ ದೂರು ನೀಡಿದ್ದು, ಆ ಎಲ್ಲಾ ಪ್ರಕರಣ ವಿಚಾರಣೆ ನಡೆಯುತ್ತಿದೆ.
ಹೀಗಿರುವಾಗ ರವೀಶ ಹೆಗಡೆ ಬೆಂಗಳೂರು ಸೇರಿದ್ದು, ಅಲ್ಲಿನ ಚನ್ನಸಂದ್ರ ಸಾಯಿ ನಿಸರ್ಗ ಲೇಔಟಿನಲ್ಲಿ ವಾಸವಾಗಿದ್ದಾರೆ. ಜನರನ್ನು ಮೋಸ ಮಾಡುವುದಕ್ಕಾಗಿ ಅವರು ಸೆಕೆಂಡ್ ಹ್ಯಾಂಡ್ ಕಾರು ಕೊಡಿಸುವುದಾಗಿ ಹೊಸ ಜಾಲ ಬೀಸಿದ್ದಾರೆ. ಈ ಜಾಲಕ್ಕೆ ಹೊನ್ನಾವರದ ಹೊಸಾಕುಳಿ ಗ್ರಾಮದ ಹೆಬ್ಬಾರ್ತಕೇರಿಯ ಎಚ್ ಆರ್ ಗಣೇಶ ರಾಮಾ ಹೆಗಡೆ ಹಾಗೂ ರಾಮಚಂದ್ರ ಕೃಷ್ಣ ಹೆಗಡೆ ಸಿಕ್ಕಿಬಿದ್ದು ಹಣ ಕಳೆದುಕೊಂಡಿದ್ದಾರೆ.
ಸೆಕೆAಡ್ ಹ್ಯಾಂಡ್ ಕಾರು ಹುಡುಕುತ್ತಿದ್ದ ಎಚ್ ಆರ್ ಗಣೇಶ ಹೆಗಡೆ ಅವರು ರವೀಶ ಹೆಗಡೆ ಅವರಿಗೆ 4.25 ಲಕ್ಷ ರೂ ಹಣ ಕೊಟ್ಟಿದ್ದಾರೆ. ರಾಮಚಂದ್ರ ಹೆಗಡೆ ಅವರು ಸಹ 1.30 ಲಕ್ಷ ರೂ ಹಣ ಕೊಟ್ಟಿದ್ದಾರೆ. ಆದರೆ, ಈ ಹಣಪಡೆದ ರವೀಶ ಹೆಗಡೆ ಕಾರು ಕೊಡಲಿಲ್ಲ. ಹಣವನ್ನು ಮರಳಿಸಲಿಲ್ಲ. ಹೀಗಾಗಿ ಅವರಿಬ್ಬರು ಸೇರಿ ರವೀಶ ಹೆಗಡೆ ವಿರುದ್ಧ ದೂರು ನೀಡಲು ನಿರ್ಧರಿಸಿದ್ದು, ಕೊನೆಗೆ ಗಣೇಶ ಹೆಗಡೆ ಅವರು ತಮಗಾದ ಅನ್ಯಾಯದ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.