ಅಂಕೋಲಾದಿಂದ ಕಾರವಾರ ಕಡೆ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕಾಮುಕನೊಬ್ಬ ಪ್ರವೇಶಿಸಿದ್ದು, ಮೈ ಮೇಲೆ ಕೈ ಹಾಕಿದನ್ನು ಕಾಮುಕನಿಗೆ ಯುವತಿಯೊಬ್ಬರು ಸರಿಯಾಗಿ ಬುದ್ದಿ ಕಲಿಸಿದ್ದಾರೆ. ಕಾಮುಕನಿಗೆ ಎರಡು ಏಟು ಕೊಟ್ಟಿದ್ದಲ್ಲದೇ ಅದನ್ನು ವಿಡಿಯೋ ಮಾಡಿ ಆತನ ಮಾನ ಹರಾಜು ಹಾಕಿದ್ದಾರೆ. ಯುವತಿ ಮಾಡಿದ ಧೈರ್ಯಕ್ಕೆ ಎಲ್ಲಡೆ ಮೆಚ್ಚುಗೆವ್ಯಕ್ತವಾಗಿದೆ.
ADVERTISEMENT
ಅಂಕೋಲಾದ ನಿಶಿಕಾ ಕಾನಡೆ ಅವರು ತಮ್ಮನ ಜೊತೆ ಮಂಗಳವಾರ ಸಂಜೆ ಅಂಕೋಲಾದಿoದ ಕಾರವಾರ ಬಸ್ ಹತ್ತಿದ್ದರು. ಬಸ್ಸಿನಲ್ಲಿ ಕುಳಿತ ಅವರು ನಿದ್ರೆಗೆ ಜಾರಿದ್ದರು. ಆಗ, ಅಮರ ಗುನಗಾ ಎಂಬಾತರು ಅದೇ ಬಸ್ಸು ಏರಿದ್ದು, ನಿಶಿಕಾ ಅವರ ಮೈ ಮುಟ್ಟಲು ಶುರು ಮಾಡಿದರು. ನಿದ್ರೆಯಿಂದ ಎದ್ದ ನಿಶಿಕಾ ಕಾನಡೆ ಮೈ ಮುಟ್ಟಿದವನನ್ನು ಪ್ರಶ್ನಿಸಿದರು. ಆತ ಇನ್ನಷ್ಟು ಉದ್ದಟತನದಿಂದ ಮಾತನಾಡಿದಾಗ ಆತನ ತಲೆಗೆ ಎರಡು ಬಿಟ್ಟರು. ಈ ವೇಳೆ ನಡೆದ ವಿದ್ಯಮಾನಗಳ ಬಗ್ಗೆ ನಿಶಿಕಾ ಕಾನಡೆ ವಿಡಿಯೋ ಮಾಡಿಕೊಂಡರು.
ನಿಶಿಕಾ ಕಾನಡೆ ಅವರು ವಿಡಿಯೋದಲ್ಲಿ ಹೇಳಿಕೊಂಡಿರುವ ಹಾಗೇ, ಕಿಟಕಿ ಬದಿಯ ಸೀಟಿನಲ್ಲಿ ನಿಶಿಕಾ ಅವರ ತಮ್ಮ ಕುಳಿತಿದ್ದರು. ನಿಶಿಕಾ ಅವರು ಮಧ್ಯದ ಆಸನದಲ್ಲಿದ್ದರು. ಈ ವೇಳೆ ಪಕ್ಕದ ಖಾಲಿ ಸೀಟಿನಲ್ಲಿ ಬಂದು ಕುಳಿತ ಅಮರ ಗುನಗಾ ತಮ್ಮ ಕೈ ಚಳಕ ಪ್ರದರ್ಶಿಸಲು ಶುರು ಮಾಡಿದ್ದು, ನಿಶಿಕಾ ಅವರ ಜೊತೆ ಅಸಭ್ಯವಾಗಿ ವರ್ತಿಸಿದರು. ನಿದ್ರೆಯಿಂದ ನಿಶಿಕಾ ಅವರು ಎದ್ದಾಗ ಅವರ ಎದೆ ಮೇಲೆ ಅಮರ ಗುನಗಾ ಅವರ ಕೈ ಹಾಕಿದನ್ನು ಗಮನಿಸಿದರು. ಈ ವೇಳೆ ಆಘಾತಕ್ಕೆ ಒಳಗಾದ ನಿಶಿಕಾ ಅವರು ಧೈರ್ಯದಿಂದ ಅಮರ ಗುನಗಾ ಅವರನ್ನು ತರಾಠೆಗೆ ತೆಗೆದುಕೊಂಡರು.
ADVERTISEMENT
ಅಮರ ಗುನಗಾ ಕಾರವಾರದಲ್ಲಿ ಬಸ್ ಇಳಿಯುವುದನ್ನು ಸಹ ಚಿತ್ರಿಸಿ ಅದನ್ನು ವೈರಲ್ ಮಾಡಿದರು. `ಅಮರ್ ಗುನಗಾ ಅವರನ್ನು ತರಾಠೆಗೆ ತೆಗೆದುಕೊಂಡ ನಿಶಿಕಾ ಕಾನಡೆ ಅವರು `ನಮ್ಮ ರಕ್ಷಣೆಗೆ ನಾವೇ ಮುಂದಾಗಬೇಕು’ ಎಂಬ ಸಂದೇಶ ಸಾರಿದ್ದಾರೆ. `ಯಾವ ಮಹಿಳೆಯರು ಅನ್ಯಾಯ ಸಹಿಸಬಾರದು’ ಎಂದು ಅವರು ಕರೆ ನೀಡಿದ್ದಾರೆ. ಜೊತೆಗೆ ಈ `ವಿಡಿಯೋ ಅಮರ ಗುನಗಾ ಅವರ ಕುಟುಂಬಕ್ಕೆ ತಲುಪುವವರೆಗೂ ಶೇರ್ ಮಾಡಿ’ ಎಂದು ಮನವಿ ಮಾಡಿದ್ದಾರೆ. ನಿಶಿಕಾ ಅವರ ಧೈರ್ಯದ ಬಗ್ಗೆ ಎಲ್ಲಡೆ ಮೆಚ್ಚುಗೆವ್ಯಕ್ತವಾಗಿದೆ.