ಕಾರವಾರ ನಗರಸಭೆಯಲ್ಲಿ ನೀರು ಬಿಡುವ ಕೆಲಸ ಮಾಡುತ್ತಿದ್ದ ಅಮಿತ್ ಬಾಂದೇಕರ್ ಅವರು ಬಹಿರ್ದೆಸೆಗೆ ಹೋದಾಗ ಕಾಲು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಮನೆಯಲ್ಲಿ ಮಲಗಿದಾಗ ಸಾವನಪ್ಪಿದ್ದಾರೆ.
ಕಾರವಾರದ ಶಿರವಾಡ ಬಳಿಯ ನಾರಗೇರಿಯಲ್ಲಿ ಅಮೀತ ಪುತ್ತು ಬಾಂದೇಕರ್ (35) ಅವರು ವಾಸವಾಗಿದ್ದರು. ಅವರು ನಗರಸಭೆಯಲ್ಲಿ ನೀರು ಬಿಡುವ ಕೆಲಸ ಮಾಡಿಕೊಂಡಿದ್ದರು. ಕಳೆದ ಮೂರು ದಿನಗಳಿಂದ ಅವರಿಗೆ ಅನಾರೋಗ್ಯ ಕಾಡಿತ್ತು. ಹೊಟ್ಟೆ ನೋವಿನ ಕಾರಣ ಮನೆಯಲ್ಲಿ ವಿಶ್ರಾಂತಿಪಡೆಯುತ್ತಿದ್ದ ಅವರು ಕೆಲಸಕ್ಕೆ ಹಾಜರಾಗಿರಲಿಲ್ಲ.
ಡಿಸೆಂಬರ್ 4ರ ನಸುಕಿನ 3 ಗಂಟೆಗೆ ಅಮೀತ ಬಾಂದೇಕರ್ ಅವರು ಮನೆಯಿಂದ ಹೊರ ಹೋಗಿದ್ದರು. ಬಹಿರ್ದೆಸೆಗಾಗಿ ಅವರು ಮನೆ ಹಿಂದೆ ಹೋಗಿದ್ದು, ಅಲ್ಲಿ ಕಾಲು ಜಾರಿ ಬಿದ್ದಿದ್ದರು. ಇದನ್ನು ಅರಿತ ಅವರ ತಂದೆ-ತಾಯಿ ಅಮೀತ ಬಾಂದೇಕರ್ ಅವರನ್ನು ಮನೆಗೆ ಕರೆತಂದು ಉಪಚರಿಸಿದ್ದರು.
`ಆಸ್ಪತ್ರೆಗೆ ಹೋಗಿ ಬಾ’ ಎಂದು ಪಾಲಕರು ಸಲಹೆ ನೀಡಿದ್ದರು. `ನನಗೆ ಏನೂ ಆಗಿಲ್ಲ’ ಎಂದ ಅಮೀತ ಬಾಂದೇಕರ್ ಅವರು ಮನೆಯಲ್ಲಿಯೇ ಮಲಗಿದ್ದರು. 7.30ರ ವೇಳೆಗೆ ಅವರನ್ನು ಎಬ್ಬಿಸಲು ಹೋದಾಗ ಮಾತನಾಡಲಿಲ್ಲ. ಸಂಬAಧಿಕರು ಬಂದು ಕರೆದರೂ ಏಳಲಿಲ್ಲ.
ಹೀಗಾಗಿ ಎಲ್ಲರೂ ಸೇರಿ ಅಮೀತ ಬಾಂದೇಕರ್ ಅವರನ್ನು ಕಾರವಾರದ ಕಿಮ್ಸ್’ಗೆ ಕರೆದೊಯ್ದರು. ಅಲ್ಲಿನ ವೈದ್ಯರು `ಅಮೀತ ಬಾಂದೇಕರ್ ಇನ್ನಿಲ್ಲ’ ಎಂದು ಘೋಷಿಸಿದರು. ಮಾಜಾಳಿ ಗುರಾವಾಡದಲ್ಲಿ ವಾಸವಾಗಿರುವ ಅಮೀತ ಅವರ ಅಕ್ಕ ರತ್ನ ಚೈತನ್ಯ ಭಾನಾವಳಿ ಅವರು ಈ ವಿಷಯ ತಿಳಿದು ಆಘಾತಕ್ಕೆ ಒಳಗಾದರು. ಅಮೀತ ಅವರ ಸಾವಿನ ಬಗ್ಗೆ ಅವರೇ ಪೊಲೀಸರಿಗೆ ವರದಿ ಒಪ್ಪಿಸಿ, ಪ್ರಕರಣ ದಾಖಲಿಸಿದರು.