ಕುಮಟಾದ ಬಾಲಚಂದ್ರ ಪಟಗಾರ ಹಾಗೂ ಮಹೇಶ ಪಟಗಾರ ಅವರ ನಡುವೆ ಹೊಡೆದಾಟ ನಡೆದಿದೆ. ಕೋಲ್ಡ್ ಡ್ರಿಂಕ್ಸ ಕುಡಿದು ಬರುತ್ತಿದ್ದ ಕುಪ್ಪಯ್ಯ ಪಟಗಾರ ಅವರಿಗೆ ಸರಾಯಿ ಕುಡಿದು ಬಂದಿದ್ದ ಮಹೇಶ ಪಟಗಾರ ಅವರು ಬಡಿಗೆ ತೆಗೆದುಕೊಂಡು ಬಡಿದಿದ್ದಾರೆ!
ಕುಮಟಾದ ಮಾಸೂರಿನಲ್ಲಿ ಬಾಲಚಂದ್ರ ಕುಪ್ಪಯ್ಯ ಪಟಗಾರ ಅವರು ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅದೇ ಊರಿನ ಮಹೇಶ ಹೊನ್ನಪ್ಪ ಪಟಗಾರ ಸಹ ಕೂಲಿ ಕಾರ್ಮಿಕರಾಗಿದ್ದಾರೆ. ಬಾಲಚಂದ್ರ ಪಟಗಾರ ಅವರು ತಾವು ದುಡಿದ ಹಣವನ್ನು ಮಾರಿಮನೆ ರಸ್ತೆ ಬಳಿಯ ಮಂಜುನಾಥ ಪಟಗಾರ ಅವರ ಅಂಗಡಿಗೆ ಕೊಟ್ಟು, ಅಲ್ಲಿಯೇ ಕೋಲ್ಡ್ ಡ್ರಿಂಕ್ಸ್ ಸೇವಿಸುತ್ತಾರೆ. ಮಹೇಶ ಪಟಗಾರ ಅವರು ತಾವು ದುಡಿದ ಹಣವನ್ನು ಸರಾಯಿ ಅಂಗಡಿಗೆ ಕೊಟ್ಟು ನಶೆಯೇರಿಸಿಕೊಳ್ಳುತ್ತಾರೆ.
ಹೀಗಿರುವಾಗ ಜನವರಿ 9ರ ಮಧ್ಯಾಹ್ನ ಬಾಲಚಂದ್ರ ಪಟಗಾರ ಅವರು ಎಂದಿನAತೆ ಮಂಜುನಾಥ ಪಟಗಾರ ಅವರ ಅಂಗಡಿಗೆ ಹೋಗಿದ್ದರು. ಅಲ್ಲಿ ತಮ್ಮ ಇಷ್ಟದ ತಂಪು ಪಾನೀಯ ಕುಡಿದು ಮನೆಗೆ ಮರಳುತ್ತಿದ್ದರು. ಕೋಲ್ಡ್ ಡ್ರಿಂಕ್ಸ್ ಕುಡಿದು ಬರುತ್ತಿದ್ದ ಬಾಲಚಂದ್ರ ಪಟಗಾರ ಅವರನ್ನು ಮಹೇಶ ಪಟಗಾರ ಅವರು ನೋಡಿ ಗುರಾಯಿಸಿದರು. `ಯಾಕೆ ಗುರಾಯಿಸುವೆ?’ ಎಂದು ಬಾಲಚಂದ್ರ ಪಟಗಾರ ಅವರು ಕೇಳಿದ್ದು, ಮದ್ಯದ ನಶೆಯಲ್ಲಿದ್ದ ಮಹೇಶ ಪಟಗಾರ ಅಲ್ಲಿಯೇ ಇದ್ದ ಬಡಿಗೆಯನ್ನು ತೆಗೆದುಕೊಂಡರು. ಬಾಲಚಂದ್ರ ಪಟಗಾರ ಅವರನ್ನು ಬೆನ್ನತ್ತಿ ಹೊಗಿ ಹೊಡೆಯಲು ಶುರು ಮಾಡಿದರು.
ಬಾಲಚಂದ್ರ ಪಟಗಾರ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಮಹೇಶ ಪಟಗಾರ ಅವರನ್ನು ಬಿಡಲಿಲ್ಲ. ಅಡ್ಡಗಟ್ಟಿ ಇನ್ನಷ್ಟು ಏಟು ಕೊಟ್ಟರು. ಇದರಿಂದ ಬಾಲಚಂದ್ರ ಪಟಗಾರ ಅವರ ಕಾಲು, ತೊಡೆ, ಕೈ, ಕಿವಿಗೆ ನೋವಾಯಿತು.