ಅಂಕೋಲಾ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಅಗಸೂರಿನ ಗಜಾನನ ನಾಯಕ ಅವರು ಒಂದುವರೆ ತಿಂಗಳು ಆಸ್ಪತ್ರೆಯಲ್ಲಿದ್ದು, ಸಾಕಷ್ಟು ಆರೈಕೆ ಮಾಡಿದರೂ ಚೇತರಿಸಿಕೊಂಡಿಲ್ಲ. ಆಸ್ಪತ್ರೆ ಓಡಾಟಕ್ಕಾಗಿ ದೊಡ್ಡ ಮಟ್ಟದಲ್ಲಿ ದುಡ್ಡು ಖರ್ಚು ಮಾಡಿದರೂ ಗಜಾನನ ನಾಯಕ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
2025ರ ಡಿಸೆಂಬರ್ 19ರಂದು ಅಂಕೋಲಾದ ಬೋಗ್ರಿಬೈಲ್ ಬಳಿ ಎರಡು ಬೈಕುಗಳ ನಡುವೆ ಅಪಘಾತ ನಡೆದಿತ್ತು. ಅಂಕೋಲಾದಿAದ ಯಲ್ಲಾಪುರದ ಕಡೆ ಬಡಿಗೇರಿಯ ನಟರಾಜ ನಾಯ್ಕ ಅವರು ಓಡಿಸುತ್ತಿದ್ದ ಬೈಕು ಎದುರಿನಿಂದ ಬಂದಿದ್ದ ಗಜಾನನ ಶಾಂತರಾಮ ನಾಯಕ ಅವರ ಬೈಕಿಗೆ ಡಿಕ್ಕಿ ಹೊಡೆದಿತ್ತು. ಆ ವೇಳೆ ನಟರಾಜ ನಾಯ್ಕ ಹಾಗೂ ಶಾಂತರಾಮ ನಾಯಕ ಇಬ್ಬರೂ ಡಾಂಬರ್ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದರು. ಅವರಿಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆ ಪೈಕಿ ಗಜಾನನ ನಾಯಕ ಅವರನ್ನು ಅಂಕೋಲಾ ಆಸ್ಪತ್ರೆಗೆ ದಾಖಲಿಸಿ, ನಂತರ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಅದಾದ ನಂತರ ಗಜಾನನ ನಾಯಕ ಅವರನ್ನು ಗೋವಾದ ಬಾಂಬೋಲಿಯA ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಲಿಸಲಾಯಿತು. ಸರಿಸುಮಾರು ಒಂದುವರೆ ತಿಂಗಳ ಕಾಲ ಅವರ ಆರೈಕೆ ಮಾಡಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಆ ದಿನ ನಡೆದ ಅಪಘಾತದಲ್ಲಿ ಹೊರಭಾಗದಿಂದ ಸಣ್ಣಪುಟ್ಟ ನೋವಾಗಿದ್ದರೂ ದೇಹದ ಒಳಗಿನ ನೋವು ಸಹಿಸುವ ಶಕ್ತಿ ಗಜಾನನ ನಾಯಕ ಅವರಿಗೆ ಇರಲಿಲ್ಲ. ಹೀಗಾಗಿ ಜನವರಿ 28ರಂದು ಅವರು ಗೋವಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಪಘಾತದ ಬಗ್ಗೆ ವಂದಿಗೆಯ ಸಂಜೀವ ಬೀರಣ್ಣ ನಾಯಕ ಅವರು ಅಂಕೋಲಾ ಪೊಲೀಸ್ ಪ್ರಕರಣ ದಾಖಲಿಸಿದ್ದು, ಆ ಅಪಘಾತದಿಂದ ನೋವು ಅನುಭವಿಸುತ್ತಿದ್ದ ಗಜಾನನ ನಾಯಕ (21) ಅವರು ಕೊನೆಯುಸಿರೆಳೆದ ಬಗ್ಗೆ ಆಸ್ಪತ್ರೆಯವರು ಮಾಹಿತಿ ನೀಡಿದರು.
`ನಿಮ್ಮ ಜೀವ ನಿಮ್ಮ ಕುಟುಂಬದವರಿಗೂ ಅಮೂಲ್ಯ. ನಿಧಾನವಾಗಿ ವಾಹನ ಚಲಾಯಿಸಿ’