ಸಿದ್ದಾಪುರ ಆಡುಕಟ್ಟಾದ ಕೃಷ್ಣ ನಾಯ್ಕ ಅವರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. 20 ದಿನಗಳ ಕಾಲ ನಾಲ್ಕು ಆಸ್ಪತ್ರೆ ಓಡಾಟ, ಲಕ್ಷಾಂತರ ರೂ ವೆಚ್ಚ ಮಾಡಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಸಿದ್ದಾಪುರದ ಆಡುಕಟ್ಟಾದ ಕೃಷ್ಣ ರಾಮ ನಾಯ್ಕ ಅವರು ಕೃಷಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಜನವರಿ 10ರಂದು ತಾಳಗುಪ್ಪಾ ಕಡೆಯಿಂದ ಆಡುಕಟ್ಟಾ ಕಡೆ ಅವರು ಬೈಕ್ ಓಡಿಸುತ್ತಿದ್ದರು. ಅವರ ಬೈಕು ಎಂದಿಗಿAತ ವೇಗವಾಗಿ ಸಂಚರಿಸಿದ್ದು, ಮುಸುವಳ್ಳಿ ಬಳಿಯ ಚೌಡಿಗುಂಡಿ ಬಸ್ ನಿಲ್ದಾಣದ ಬಳಿ ಅಪಘಾತಕ್ಕೀಡಾಯಿತು. ಬೈಕ್ ಸ್ಕಿಡ್ ಆಗಿದ್ದರಿಂದ ಕೃಷ್ಣ ನಾಯ್ಕ ಅವರ ತಲೆಗೆ ನೋವಾಯಿತು. ಗುತ್ತಿಗೆ, ಮೈ-ಕೈಗೆ ಸಹ ಗಾಯವಾಯಿತು.
ಮೊದಲು ಕೃಷ್ಣ ನಾಯ್ಕ ಅವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಶಿವಮೊಗ್ಗ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಮುಂದೆ ಮಂಗಳೂರಿಗೆ ಕಳುಹಿಸಿ ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಅಲ್ಲಿಯೂ ಚೇತರಿಕೆ ಕಾಣದ ಪರಿಣಾಮ ಊರಿಗೆ ಕರೆತರಲಾಗುತ್ತಿದ್ದು, ಬರುವಾಗಲೇ ಉಸಿರಾಟ ಸಮಸ್ಯೆ ಕಾಣಿಸಿತು.
ಹೀಗಾಗಿ ಕೃಷ್ಣ ನಾಯ್ಕ ಅವರನ್ನು ಜನವರಿ 28ರಂದು ಅಲ್ಲಿಂದ ಸಾಗರದ ಭಾಗ್ವತ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಎರಡು ದಿನ ಆರೈಕೆ ಮಾಡಲಾಯಿತು. ಜನವರಿ 30ರಂದು ಅವರು ಸಾವಪ್ಪಿದರು. ಬೇಡ್ಕಣಿ ಹುಲಿಮನೆಯ ವಕೀಲ ಸುಧರ್ಶನ ಸೀತಾರಾಮ ನಾಯ್ಕ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.