ಭಟ್ಕಳದ ಅಮಿತ್ ಶಿರಾಳಿಕರ್ ಅವರ ಕಾರಿಗೆ ಅಡ್ಡಲಾಗಿ ಪೊಲೀಸರು ಕೈ ಮಾಡಿದ್ದಾರೆ. ಪೊಲೀಸರನ್ನು ನೋಡಿಯೂ ಕಾರು ನಿಲ್ಲಿಸಿದ ಕಾರಣ ಅವರ ವಿರುದ್ಧ ಕೇಸು ದಾಖಲಿಸಿದ್ದಾರೆ!
ಭಟ್ಕಳ ಹುರುಳಿಸಾಲ ಬಳಿಯ ಕಾರಗದ್ದೆಯಲ್ಲಿ ಅಮೀತ ಸುರೇಶ ಶಿರಾಳಿಕರ್ ಅವರು ವಾಸವಾಗಿದ್ದಾರೆ. 33 ವರ್ಷದ ಅಮೀತ ಶಿರಾಳಿಕರ್ ಅವರು ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ. ಕೈ ತುಂಬ ಸಂಬಳ ಸಿಗುವ ಕಾರಣ ಮೋಜು-ಮಸ್ತಿಗೆ ಅವರು ಎಂದಿಗೂ ಕೊರತೆ ಮಾಡಿಕೊಂಡಿಲ್ಲ. ಗೋವಾ ನೋಂದಣಿಯ ಹುಂಡೈ ಕ್ರೇಟಾ ಕಾರನ್ನು ಅಮೀತ ಶಿರಾಳಿಕರ್ ಅವರು ಹೊಂದಿದ್ದು, ಬೇರೆಯವರಿಗೆ ಅಪಾಯವಾಗುವಂತೆ ಕಾರು ಓಡಿಸುವುದು ಎಂದರೆ ಅವರಿಗೆ ಎಲ್ಲಿಲ್ಲದ ಖುಷಿ!
ಅದರಂತೆ, ಜನವರಿ 16ರಂದು ಅಮೀತ ಶಿರಾಳಿಕರ್ ಅವರು ತಮ್ಮ ಕಾರನ್ನು ಅತ್ಯಂತ ವೇಗವಾಗಿ ಓಡಿಸುತ್ತಿದ್ದರು. ಆ ದಿನ ಸಂಜೆ 5 ಗಂಟೆ ವೇಳೆಗೆ ಅಮೀತ ಅವರು ಕಾರಗದ್ದೆ 2ನೇ ಕ್ರಾಸಿನಿಂದ ಹೆದ್ದಾರಿಗೆ ಹೋಗುವ ಗುಡ್ ಲಕ್ ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದರು. ಇದನ್ನು ನೋಡಿದ ಭಟ್ಕಳ ಗ್ರಾಮೀಣ ಠಾಣೆಯ ಪಿಸೈ ರನ್ನಗೌಡ ಪಾಟೀಲ್ ಅವರು ಕಾರಿಗೆ ಅಡ್ಡಲಾಗಿ ಕೈ ಮಾಡಿದರು. ಕಾರು ನಿಲ್ಲಿಸುವಂತೆ ಸೂಚಿಸಿದರು.
ಅದಾಗಿಯೂ ಅಮೀತ ಶಿರಾಳಿಕರ್ ಕಾರು ನಿಲ್ಲಿಸಲಿಲ್ಲ. ಇನ್ನಷ್ಟು ವೇಗವಾಗಿ ಕಾರು ಓಡಿಸಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಅಮೀತ ಶಿರಾಳಿಕರ್ ಅವರ ಉದ್ದಟತನದ ವರ್ತನೆ ಪೊಲೀಸರಿಗೆ ಅನುಮಾನ ಮೂಡಿಸಿತು. ಹೀಗಾಗಿ ಆ ಕಾರು ಬೆನ್ನತ್ತಿ ಹೋದ ಪೊಲೀಸರು ಮುಂದಿನ ತಿರುವಿನಲ್ಲಿ ಅಡ್ಡಗಟ್ಟಿದರು. ಪೊಲೀಸರು ಕೈ ಮಾಡಿದರೂ ಕಾರು ನಿಲ್ಲಿಸಿದ ಕಾರಣ ಪ್ರಶ್ನಿಸಿದ್ದು, ಆ ವೇಳೆ ಇನ್ನಷ್ಟು ಉದ್ದಟತನ ಪ್ರದರ್ಶಿಸಿದ ಕಾರಣ ಅಮೀತ ಶಿರಾಳಿಕರ್ ಅವರ ವಿರುದ್ಧ ಪ್ರಕರಣ ದಾಖಲಿಸಿದರು.