ಸೈಬರ್ ಅಪರಾಧದ ಕುರಿತು ಅರಿವು, ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ, `ಭಟ್ಕಳದಲ್ಲಿರುವ 14 ಪಾಕಿಸ್ತಾನಿ ಪ್ರಜೆಗಳ ವಿಚಾರಣೆ, ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ಹಾಗೂ ಅಪಘಾತ ತಡೆಗೆ ಜಾಗೃತಿ ಸೇರಿ ಉತ್ತರ ಕನ್ನಡ ಪೊಲೀಸ್ ಇಲಾಖೆ ಅನೇಕ ಬಗೆಯ ಕಾರ್ಯ ಮಾಡುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಹೇಳಿದ್ದಾರೆ.
ಮಂಗಳವಾರ ಅವರು ಮಾಧ್ಯಮದವರ ಎದುರು ಕಾನೂನು ಸುವ್ಯವಸ್ಥೆ ಮತ್ತು ವಿವಿಧ ಅಪರಾಧ ಅಂಕಿಅ0ಶಗಳ ವಿಷಯ ಹಂಚಿಕೊoಡಿದ್ದಾರೆ. ಈ ವೇಳೆ ರಸ್ತೆ ಅಪಘಾತಗಳ ಕುರಿತು ಕಳವಳ ವ್ಯಕ್ತಪಡಿಸಿದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ 192 ಅಪಘಾತಗಳಲ್ಲಿ 214 ಜನರು ಪ್ರಾಣ ಕಳೆದುಕೊಂಡಿದ್ದಾರೆ’ ಎಂಬ ಮಾಹಿತಿ ತಿಳಿಸಿದರು. ಇದರೊಂದಿಗೆ `ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, 58,425 ಪ್ರಕರಣಗಳಿಂದ ಒಟ್ಟು 2.84 ಕೋಟಿ ದಂಡ ವಸೂಲಿ ಮಾಡಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ 1,039 ಜನರ ವಿರುದ್ಧ ಪ್ರಕರಣ ದಾಖಲಿಸಿ, 810 ಜನರ ಚಾಲನಾ ಪರವಾನಗಿ ರದ್ದುಪಡಿಸಲಾಗಿದೆ’ ಎಂದು ವಿವರಿಸಿದರು.
`2025ರ ಸಾಲಿನಲ್ಲಿ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 430 ಮಟ್ಕಾ ಹಾಗೂ ಒಸಿ ಪ್ರಕರಣಗಳು, 146 ಬೀದಿ ಗ್ಯಾಂಬ್ಲಿoಗ್, 442 ಅಬಕಾರಿ ಕಾಯ್ದೆ ಉಲ್ಲಂಘನೆ ಹಾಗೂ 295 ಮಾದಕ ದ್ರವ್ಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಉಳಿದಂತೆ ಅಕ್ರಮ ಮರಳು ಸಾಗಾಟಕ್ಕೆ ಸಂಬAಧಿಸಿದoತೆ 21 ಪ್ರಕರಣಗಳನ್ನು ದಾಖಲಿಸಲಾಗಿದ್ದು, 141 ಪ್ರಕರಣಗಳನ್ನು ಗಣಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಗಂಭೀರ ಅಪರಾಧಗಳ ಪೈಕಿ ಜಿಲ್ಲೆಯಲ್ಲಿ 17 ಕೊಲೆ, 15 ಅತ್ಯಾಚಾರ ಹಾಗೂ 7 ದರೋಡೆ ಪ್ರಕರಣಗಳು ದಾಖಲಾಗಿವೆ’ ಎಂಬ ವಿಷಯ ಬಹಿರಂಗಪಡಿಸಿದರು.
ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿದ ಅವರು `ಸಾರ್ವಜನಿಕರು ಲಕ್ಷಾಂತರ ರೂ ಹಣ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಅವಧಿಯಲ್ಲಿ 127 ಲಕ್ಷ ರೂಪಾಯಿಗಳನ್ನು ಫ್ರೀಜ್ ಮಾಡುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ಮೇಲೆ ನಿಗಾ ಇರಿಸಲಾಗಿದ್ದು, ಈವರೆಗೆ 36 ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದರು. `ಕಳೆದ ವರ್ಷ ನಾಪತ್ತೆಯಾಗಿದ್ದ 332 ಜನರ ಪೈಕಿ 300 ಜನರನ್ನು ಪತ್ತೆಹಚ್ಚಲಾಗಿದ್ದು, ಉಳಿದ 32 ಜನರ ಪತ್ತೆಗೆ ಕಾರ್ಯಚರಣೆ ಮುಂದುವರಿದಿದೆ’ ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ ಜಗದೀಶ ಜೊತೆಗಿದ್ದರು.