ಒಂದು ದಿನವೂ ಬಿಡದೇ ಸರಾಯಿ ಸೇವಿಸುತ್ತಿದ್ದ ಶಿರಸಿಯ ಗಣಪತಿ ಶಿರಗೋಡ ಅವರು ಸರಿಯಾಗಿ ಊಟ ಮಾಡಲು ಸಹ ಸಾಧ್ಯವಾಗದೇ ಸಾವನಪ್ಪಿದ್ದಾರೆ.
ಶಿರಸಿಯ ಕಸ್ತೂರಿಬಾ ನಗರದ ಮಸೀದಿ ಹಿಂದೆ ಗಣಪತಿ ಫಕ್ಕೀರಪ್ಪ ಶಿರಗೋಡ (60) ಅವರು ವಾಸವಾಗಿದ್ದರು. ಸೂಪಾದವರಾಗಿದ್ದ ಅವರು ಶಿರಸಿಯಲ್ಲಿಯೇ ಖಾಯಂ ಆಗಿದ್ದು, ಗಣಪತಿ ಶಿರಗೋಡ ಅವರ ಪುತ್ರ ಗುತ್ತೆಪ್ಪ ಶಿರಗೋಡ ಅವರು ತರಕಾರಿ ವ್ಯಾಪಾರ ಮಾಡಿ ಸಂಸಾರ ನಡೆಸುತ್ತಿದ್ದರು. ದುಡಿದ ಬಹುಪಾಲು ಹಣವನ್ನು ಗಣಪತಿ ಶಿರಗೋಡ ಅವರು ಸರಾಯಿ ಅಂಗಡಿಗೆ ಕೊಡುತ್ತಿದ್ದರು. ಗಣಪತಿ ಶಿರಗೋಡು ಅವರು ಸರಾಯಿ ಇಲ್ಲದೇ ಒಂದು ದಿನವೂ ಸಹ ಸುಮ್ಮನಿರುತ್ತಿರಲಿಲ್ಲ. ಆ ಪ್ರಮಾಣದಲ್ಲಿ ಅವರು ಮದ್ಯ ವ್ಯಸನಕ್ಕೆ ದಾಸರಾಗಿದ್ದರು.
ಜನವರಿ 19ರ ರಾತ್ರಿ 10.30ಕ್ಕೆ ಗಣಪತಿ ಶಿರಗೋಡ ಅವರು ಊಟ ಮಾಡುತ್ತಿದ್ದರು. ಆದರೆ, ಆ ವೇಳೆ ಅವರಿಗೆ ಊಟ ಮಾಡಲು ಸಾಧ್ಯವಾಗಲಿಲ್ಲ. ವಾಂತಿ ಮಾಡಿಕೊಂಡಿದ್ದ ಅವರನ್ನು ಗುತ್ತೆಪ್ಪ ಶಿರಗೋಡ ಅವರು ಆಸ್ಪತ್ರೆಗೆ ಕರೆದೊಯ್ದರು. ಶಿರಸಿ ಸರ್ಕಾರಿ ಆಸ್ಪತ್ರೆಯವರು ತಪಾಸಣೆ ನಡೆಸಿ `ಸ್ಕಾö್ಯನ್ ಮಾಡಬೇಕು’ ಎಂದರು. ಹೀಗಾಗಿ ಗಣಪತಿ ಶಿರಗೋಡ ಅವರನ್ನು ಶಿರಸಿ ಸ್ಕಾö್ಯನ್ ಸೆಂಟರ್’ಗೆ ಕರೆದೊಯ್ಯಲಾಯಿತು. ಅಲ್ಲಿ ತಪಾಸಣೆ ನಡೆಸಿ ಮರಳಿ ಆಸ್ಪತ್ರೆಗೆ ಬರುವಾಗ ಗಣಪತಿ ಶಿರಗೋಡ ಅವರು ಒಮ್ಮೆಗೆ ದೊಡ್ಡದಾಗಿ ಕೂಗಿದರು. ಅದಾದ ನಂತರ ಸಂಪೂರ್ಣವಾಗಿ ಮೌನವಾದರು.
ಗಣಪತಿ ಶಿರಗೋಡ ಅವರನ್ನು ಕುಟುಂಬದವರು ಎಬ್ಬಿಸುವ ಪ್ರಯತ್ನ ಮಾಡಿದರು. ಪದೇ ಪದೇ ಮಾತನಾಡಿಸಿದರು. ಆದರೆ, ಅವರು ಮಾತನಾಡಲಿಲ್ಲ. ಪರೀಕ್ಷಿಸಿದ ವೈದ್ಯರು ಗಣಪತಿ ಶಿರಗೋಡ ಇನ್ನಿಲ್ಲ ಎಂಬ ಸತ್ಯ ಬಿಚ್ಚಿಟ್ಟರು. ದಾರಿ ಮದ್ಯೆಯೇ ಅವರು ಸಾವನಪ್ಪಿದನ್ನು ಕುಟುಂಬದವರು ಖಚಿತಪಡಿಸಿಕೊಂಡರು.
`ಮದ್ಯ ವ್ಯಸನ ಅಪಾಯಕ್ಕೆ ಕಾರಣ’