ಹಳಿಯಾಳದ ಸುಭಾಸ್ ವರ್ಣೇಕರ್ ಅವರ ಮನೆಯ ಬಳಿ ಬಾಬು ಅಡೋಳ್ಕರ್ ಅವರು ಶವವಾಗಿದ್ದಾರೆ. ಅವರ ಸಾವಿನ ಬಗ್ಗೆ ಕುಟುಂಬದವರಿಗೆ ಅನುಮಾನ ಶುರುವಾಗಿದೆ.
ಹಳಿಯಾಳದ ಮಾಗವಾಡ ಬಳಿಯ ಗೌಳಿವಾಡದಲ್ಲಿ ಬಾಬು ಅಡೋಳ್ಕರ್ (45) ಅವರು ವಾಸವಾಗಿದ್ದರು. ಬಾಬು ಆಡೋಳ್ಕರ್ ಅವರು 3-4 ದಿನಗಳಿಗೆ ಒಮ್ಮೆ ಮನೆಗೆ ಬರುತ್ತಿದ್ದರು. ಒಂದರೆಡು ದಿನ ಮನೆಯಲ್ಲಿ ವಾಸ ಹೂಡಿ ಮತ್ತೆ ಬೇರೆ ಕಡೆ ಹೋಗುತ್ತಿದ್ದರು.
ಬಾಬು ಅಡೋಳ್ಕರ್ ಅವರು ಒಂದು ದಿನವೂ ಸರಾಯಿ ಬಿಟ್ಟು ಬದುಕುತ್ತಿರಲಿಲ್ಲ. ಕೂಲಿ ಕೆಲಸದಲ್ಲಿ ಸಿಗುವ ಎಲ್ಲಾ ಹಣವನ್ನು ಅವರು ಸರಾಯಿ ಅಂಗಡಿಯವರಿಗೆ ಕೊಡುತ್ತಿದ್ದರು. ಪ್ರತಿ ದಿನ ಸರಾಯಿ ಕುಡಿದು ಅವರು ಎಲ್ಲೆಂದರಲ್ಲಿ ಮಲಗುತ್ತಿದ್ದರು. ಜನವರಿ 24ರಂದು ಅವರು ಮನೆಗೆ ಬಂದಿದ್ದು, ಮರುದಿನ ಮತ್ತೆ ಹೊರಗೆ ಹೋಗಿದ್ದರು. ಕೂಲಿ ಕೆಲಸಕ್ಕೆ ಹೋಗಿ ಬರುವುದಾಗಿ ಅವರು ಮನೆಯಲ್ಲಿ ಹೇಳಿದ್ದರು.
ಆದರೆ, ಹಳಿಯಾಳ ಪಟ್ಟಣದ ಗಣಪತಿ ದೇವಸ್ಥಾನ ಹಿಂದಿರುವ ಗಣೇಶನಗರದ ಸುಭಾಸ ರಾಮಚಂದ್ರ ವರ್ಣೇಕರ್ ಅವರ ಮನೆ ಕಪೌಂಡ್ ಬಳಿ ಬಾಬು ಅಡೋಳ್ಕರ್ ಅವರು ಬಿದ್ದಿದ್ದರು. ಸಮೀಪ ಹೊಗಿ ನೋಡಿದಾಗ ಆ ಖಾಲಿ ಜಾಗದಲ್ಲಿ ಅವರು ಶವವಾಗಿದ್ದರು. ಬಾಬು ಅವರ ಪತ್ನಿ ದೊಂಡುಬಾಯಿ ಅಡೋಳ್ಕರ್ ಅವರು ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಾವಿನ ಬಗ್ಗೆ ಅನುಮಾನವಿರುವುದಾಗಿಯೂ ದೊಂಡುಬಾಯಿ ಅವರು ಹೇಳಿದ್ದಾರೆ.