ಭಟ್ಕಳದ ಶಿರಾಲಿ ಬಳಿಯ ಪಾರ್ವತಿ ನಾಯ್ಕ ಅವರು ಬೆಳೆಸಿದ್ದ ಅಡಿಕೆ ಮರಗಳನ್ನು ಅದೇ ಊರಿನ ಮೂವರು ಕಡಿದಿದ್ದಾರೆ. ಇದನ್ನು ತಡೆಯಲು ಹೋದಾಗ ಎದುರಾಳಿಗಳು ಗುಂಪು ಕಟ್ಟಿಕೊಂಡು ಗಲಾಟೆ ಮಾಡಿದ್ದಾರೆ.
ಭಟ್ಕಳ ಶಿರಾಲಿಯ ಶಾರದಾಹೊಳೆ ಹಿರೇಹಿತ್ಲುವಿನ ಬೈರಜ್ಜಿಮನೆಯಲ್ಲಿ ಪಾರ್ವತಿ ಗಣಪತಿ ನಾಯ್ಕ ಅವರು ವಾಸವಾಗಿದ್ದಾರೆ. ಪಾರ್ವತಿ ನಾಯ್ಕ ಅವರ ಅಜ್ಜಿ ಈರಮ್ಮ ಬೈರಾ ನಾಯ್ಕ ಅವರಿಗೆ ಗಣಪತಿ ನಾಯ್ಕ ಅವರ ಕುಟುಂಬದ ಆಸ್ತಿ ಸಿಕ್ಕಿದ್ದು, ಭೂ ನ್ಯಾಯ ಮಂಡಳಿಯಿAದ ಆ ಭೂಮಿಯ ಹಕ್ಕಿನ ಆದೇಶವಾಗಿದೆ. ತಮ್ಮ ಪರವಾಗಿ ಆದೇಶ ಸಿಕ್ಕಿದ ಕಾರಣ ಪಾರ್ವತಿ ನಾಯ್ಕ ಅವರು ಅಲ್ಲಿದ್ದ ಅಡಿಕೆ ಮರಗಳ ಆರೈಕೆ ಮಾಡಿದ್ದಾರೆ. ಜೊತೆಗೆ ತಮ್ಮ ಜಾಗಕ್ಕೆ ಅವರು ಕಪೌಂಡನ್ನು ನಿರ್ಮಿಸಿದ್ದಾರೆ.
ಹೀಗಿರುವಾಗ ಅದೇ ಭಾಗದ ಸಾವಿತ್ರಿ ಗಣಪತಿ ನಾಯ್ಕ, ಪದ್ಮಾವತಿ ಶಂಕರ ನಾಯ್ಕ ಹಾಗೂ ಸೀತಾ ರಾಮಚಂದ್ರ ನಾಯ್ಕ ಅವರು ಜನವರಿ 27ರ ರಾತ್ರಿ ಆ ಪ್ರದೇಶಕ್ಕೆ ದಾಳಿ ಮಾಡಿದ್ದಾರೆ. ಕಲ್ಲಿನಿಂದ ಕಟ್ಟಿದ್ದ ಗೋಡೆ ಉದುರಿಸಿ ಅವರು ಅಲ್ಲಿದ್ದ ಅಡಿಕೆ ಗಿಡಗಳನ್ನು ಕಡಿದಿದ್ದಾರೆ. ಇದನ್ನು ತಡೆಯಲು ಹೋದ ಪಾರ್ವತಿ ನಾಯ್ಕ ಅವರನ್ನು ಬೆದರಿಸಿದ್ದು, ಇನ್ನಷ್ಟು ಜನರ ಗುಂಪು ಕಟ್ಟಿಕೊಂಡು ಬಂದು ರಂಪಾಟ ಮಾಡಿದ್ದಾರೆ. ನಾಲ್ಕು ಮರ ಕಡಿತದ ನಂತರ ಪಾರ್ವತಿ ನಾಯ್ಕ ಅವರು ತಮ್ಮ ಆಕ್ರೋಶಹೊರ ಹಾಕಿದ್ದು, ಬಂದವರೆಲ್ಲರೂ ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಎಲ್ಲಾ ವಿಷಯದ ಬಗ್ಗೆ ಪಾರ್ವತಿ ನಾಯ್ಕ ಅವರು ಭಟ್ಕಳ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಶುರು ಮಾಡಿದ್ದಾರೆ.