ಕುಮಟಾದ ಹೆಗಡೆಯಲ್ಲಿ ಜನವರಿ 15ಕ್ಕೆ ಅದ್ಧೂರಿ ಜಾತ್ರೆ ನಡೆದಿದ್ದು, ಜಾತ್ರೆಗೆ ಬಂದಿದ್ದ ಅಂಗಡಿಕಾರರಿಗೆ ನ್ಯಾಯವಾದಿ ವಿನಾಯಕ ಪಟಗಾರ ಅವರು ಅನ್ನದಾನ ಮಾಡಿದ್ದಾರೆ.
ಕುಮಟಾದ ಹೆಗಡೆಯಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಇಲ್ಲಿನ ಶಾಂತಿಕಾoಬಾ ದೇವಿಯ ಜಾತ್ರೆಗೆ ಸಾವಿರಾರು ಜನ ಬರುತ್ತಾರೆ. ಬರುವ ಭಕ್ತರನ್ನು ನಂಬಿ ಬಗೆ ಬಗೆಯ ಅಂಗಡಿಕಾರರು ಮಳಿಗೆ ಹಾಕುತ್ತಿದ್ದು, ಅಂಗಡಿಕಾರರು ಮೂರು ದಿನಗಳ ಕಾಲ ಅಲ್ಲಿಯೇ ವಾಸವಾಗಿರುತ್ತಾರೆ. ಆ ಅಂಗಡಿಕಾರರ ಮೇಲೆ ಅನುಕಂಪಹೊoದಿದ ನ್ಯಾಯವಾದಿ ವಿನಾಯಕ ಶಿವರಾಮ ಪಟಗಾರ ಅವರು ತಮ್ಮ ಸ್ವಂತ ವೆಚ್ಚದಿಂದ ಅವರ ಹೊಟ್ಟೆ ಹಸಿವು ದೂರ ಮಾಡಿದ್ದಾರೆ.
ವಿನಾಯಕ ಪಟಗಾರ ಅವರು ಮನೆಯಲ್ಲಿಯೇ ಶುದ್ಧ ಆಹಾರ ತಯಾರಿಸಿ ಅದನ್ನು ಪ್ಯಾಕೇಟ್ ಮೂಲಕ ತಂದು ಅಂಗಡಿಕಾರರಿಗೆ ನೀಡಿದ್ದಾರೆ. ಅಂಗಡಿಕಾರರು ಇದ್ದ ಸ್ಥಳಕ್ಕೆ ತೆರಳಿ ಅವರಿಗೆ ಆಹಾರ ಕೊಟ್ಟಿದ್ದಾರೆ. ಕಳೆದ ಐದು ವರ್ಷಗಳಿಂದ ವಿನಾಯ ಪಟಗಾರ ಅವರು ಈ ಕಾರ್ಯ ಮಾಡುತ್ತಿದ್ದು, ಬೇರೆ ಬೇರೆ ಊರುಗಳಿಂದ ಕುಮಟಾಗೆ ಬಂದಿದ್ದವರಿಗೆ ಈ ಕ್ಷೇತ್ರದ ಬಗ್ಗೆ ಹೆಮ್ಮೆಯಾಗುವ ಹಾಗೇ ನಡೆದುಕೊಂಡಿದ್ದಾರೆ.
ವಿನಾಯಕ ಪಟಗಾರ ಅವರು ಗ್ರಾಮು ಒಕ್ಕಲು ಯುವ ಬಳಗದ ಅಧ್ಯಕ್ಷರೂ ಆಗಿದ್ದಾರೆ. ಅವರ ಸೇವಾ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿದೆ.