ಹೊನ್ನಾವರದ ಜನತಾ ವಿದ್ಯಾಲಯ ಹಿಂದಿನ ಕಾಡಿನಲ್ಲಿ ಜೇನು ಗೂಡು ಕಟ್ಟಿದ್ದು, ಅಲ್ಲಿದ್ದ ದುಂಬಿಗಳ ಆಕ್ರಮಣಕ್ಕೆ ಮಂಜುನಾಥ ಅಂಬಿಗ ಅವರು ಸಾವನಪ್ಪಿದ್ದಾರೆ.
ಹೊನ್ನಾವರ ಅನಿಲಗೋಡದ ಹೊಳೆ ಬದಿಕೇರಿಯಲ್ಲಿ ಮಂಜುನಾಥ ಗಣಪ ಅಂಬಿಗ (53) ಅವರು ವಾಸವಾಗಿದ್ದರು. ಕೃಷಿ ಕೆಲಸ ಮಾಡಿಕೊಂಡು ಅವರು ಜೀವನ ನಡೆಸುತ್ತಿದ್ದರು. ಜನವರಿ 13ರ ಬೆಳಗ್ಗೆ ಮಂಜುನಾಥ ಅಂಬಿಗ ಅವರು ಕೃಷಿ ಕೆಲಸಕ್ಕಾಗಿ ಬೇರಂಕಿ ಗ್ರಾಮಕ್ಕೆ ಹೊರಟಿದ್ದರು. ಆ ವೇಳೆಯಲ್ಲಿ ಅನಿಲಗೋಡಿನ ಜನತಾ ವಿದ್ಯಾಲಯ ಬಳಿಯ ಹೆಜೇನು ನೊಣಗಳು ಅವರ ಮೇಲೆ ದಾಳಿ ನಡೆಸಿದವು.
ಅರಣ್ಯ ಪ್ರದೇಶದ ಮಣ್ಣಿನ ರಸ್ತೆಯಲ್ಲಿ ಸಾಗುತ್ತದ್ದ ಮಂಜುನಾಥ ಅಂಬಿಗ ಅವರಿಗೆ ಜೇನು ನೊಣಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಮ್ಮೆಗೆ ಮುತ್ತಿಗೆ ಹಾಕಿದ ದುಂಬಿಗಳು ಅವರ ತಲೆ, ಮೈ-ಕೈಗೆ ಕಚ್ಚಿ ಗಾಯಗೊಳಿಸಿದವು. ಇದರಿಂದ ಮಂಜುನಾಥ ಅಂಬಿಗ ಅವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.
ಆದರೆ, ಮಂಜುನಾಥ ಅಂಬಿಗ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. 10.45ರ ಅವಧಿಗೆ ಅವರು ಕೊನೆಯುಸಿರೆಳೆದಿದ್ದು, ವೈದ್ಯರು ಸಾವನ್ನು ದೃಢಪಡಿಸಿದರು. ಮಂಜುನಾಥ ಅಂಬಿಗ ಅವರ ಜೊತೆ ಕೆಲಸಕ್ಕೆ ಹೋಗಿದ್ದ ಜನಾರ್ಧನ ಲಕ್ಷö್ಮಣ ನಾಯ್ಕ ಅವರು ಪ್ರಾಣ ಉಳಿಸಿಕೊಂಡಿದ್ದು, ಅವರೇ ಈ ಬಗ್ಗೆ ಮಾಹಿತಿ ನೀಡಿದರು.