ದಾoಡೇಲಿಯ ಪ್ರಶಾಂತ ರೇವಣಕರ್ ಅವರ ಮಾಲಿಕತ್ವದ ರೆಸಾರ್ಟಿಗೆ ಪಕ್ಕದ ಜಮೀನಿನ ರಾಮಾ ಚರಾಟಕರ್ ಅವರು ಬೀಗ ಹಾಕಿದ್ದಾರೆ. ಅದಾದ ನಂತರ `ಬೀಗ ತೆಗೆಯಬೇಕು ಎಂದಾದರೆ ನೀ ನಾ ಹೇಳಿದ ಹಾಗೇ ಕೇಳಬೇಕು’ ಎಂದು ಪ್ರಶಾಂತ ಅವರ ಪತ್ನಿ ಪ್ರತಿಮಾ ರೇವಣಕರ್ ಅವರಿಗೆ ರಾಮಾ ಚರಾಕರ್ ಸೂಚಿಸಿದ್ದಾರೆ. ಅದೇ ವೇಳೆ ಪ್ರತಿಮಾ ರೇವಣಕರ್ ಅವರ ಮೈ ಮೇಲೆ ಕೈ ಹಾಕಿ ಪೆಟ್ಟು ತಿಂದಿದ್ದಾರೆ.
ದಾoಡೇಲಿಯ ಅಂಬಿಕಾನಗರದಲ್ಲಿ ಪ್ರಶಾಂತ ರೇವಣಕರ್ ಅವರು ಫಾರ್ಮ ಹೌಸ್ ಹೊಂದಿದ್ದಾರೆ. ಫಾರ್ಮ ಹೌಸ್ ಸುತ್ತ ಕಪೌಂಡ್ ನಿರ್ಮಿಸಿ ಅವರು ಅದಕ್ಕೆ ಬೀಗ ಹಾಕುತ್ತಾರೆ. ಆಗಾಗ ಅವರು ಅಲ್ಲಿ ಕುಟುಂಬಸಹಿತವಾಗಿ ಆಗಮಿಸಿ ಪಾರ್ಟಿ ಮಾಡುತ್ತಾರೆ. ಜನವರಿ 1ರಂದು ಸಹ ಅವರು ಅಲ್ಲಿಗೆ ಹೋಗಿದ್ದು, ಆ ವೇಳೆ ಪಕ್ಕದ ಜಮೀನಿನವರ ಜೊತೆ ಜಗಳವಾಗಿದೆ. ಬೊಮ್ಮನಳ್ಳಿಯ ರಾಮಾ ಚರಾಟಕರ್ ಅವರು ಕೇಗದಾಳದ ಪ್ರಶಾಂತ ರೇವಣಕರ್ ಹಾಗೂ ಅವರ ಪತ್ನಿ ಪ್ರತಿಮಾ ರೇವಣಕರ್ ಅವರ ತಂಟೆಗೆ ಹೋಗಿ ಆಸ್ಪತ್ರೆ ಸೇರಿದ್ದಾರೆ.
ಜನವರಿ 1ರಂದು ಪ್ರಶಾಂತ ರೇವಣಕರ್ ಅವರ ರೆಸಾರ್ಟ ಗೇಟಿಗೆ ರಾಮಾ ಚರಾಟಕರ್ ಅವರು ಬೀಗ ಹಾಕಿದ್ದಾರೆ. ಅದಾದ ನಂತರ `ಚಾವಿ ಬೇಕಾದರೆ ನನ್ನನ್ನು ಸಂಪರ್ಕಿಸಿ’ ಎಂದು ಅಲ್ಲಿ ಚೀಟಿಯನ್ನು ಬರೆದಿದ್ದಾರೆ. ತಾವು ರೆಸಾರ್ಟ ಒಳಗಿದ್ದಾಗ ಹೊರಗಿನಿಂದ ಬೀಗ ಹಾಕಿದನ್ನು ನೋಡಿದ ಪ್ರತಿಮಾ ರೇವಣಕರ್ ಅವರು ರಾಮಾ ಚರಾಟಕರ್ ಅವರಿಗೆ ಫೋನ್ ಮಾಡಿದ್ದಾರೆ. ಚಾವಿ ಹಿಡಿದು ಬಂದ ರಾಮಾ ಚರಾಟಕರ್ ಅವರು ಪ್ರತಿಮಾ ರೇವಣಕರ್ ಅವರ ಮೈ ಮುಟ್ಟಿದ್ದು, ಈ ವೇಳೆ ಅಲ್ಲಿಗೆ ಬಂದ ಪ್ರಶಾಂತ ರೇವಣಕರ್ ಇದನ್ನು ಖಂಡಿಸಿದರು. ಈ ವೇಳೆ ವಾಗ್ವಾದ ನಡೆದಿದ್ದು, ಹೊಡೆದಾಟ ನಡೆದಿದೆ.
ರಾಮಾ ಚರಾಟಕರ್ ಅವರಿಗೆ ಬಾಸುಂಡೆ ಬರುವ ರೀತಿ ಪೆಟ್ಟು ಬಿದ್ದಿದೆ. ಪ್ರಶಾಂತ ರೇವಣಕರ್ ಹಾಗೂ ಅವರ ಕುಟುಂಬದವರು ಬೂಟು ಗಾಲಿನಿಂದ ರಾಮಾ ಚರಾಟಕರ್ ಅವರನ್ನು ತುಳಿದು ನೋವುಂಟು ಮಾಡಿದ್ದಾರೆ. `ಪ್ರಶಾಂತ ರೇವಣಕರ್ ಅವರು ಗೇಟಿಗೆ ಬೀಗ ಹಾಕಿರಲಿಲ್ಲ. ಇದರಿಂದ ನಾವು ಸಾಕಿದ ದನ ಅವರ ರೆಸಾರ್ಟಿಗೆ ನುಗ್ಗಿದ್ದರಿಂದ ಬೇರೆ ಬೀಗ ಹಾಕಿದ್ದೇನೆ’ ಎಂದು ರಾಮಾ ಚರಾಟಕರ್ ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಅಂಬಿಕಾನಗರದ ಪೊಲೀಸರು ಎರಡು ಕಡೆಯವರ ಮಾತು ಆಲಿಸಿ ಪ್ರಕರಣ ದಾಖಲಿಸಿದ್ದಾರೆ.