ಹೊನ್ನಾವರ ಕರ್ಕಿಯ ಲೋಹಿತ್ ದೇವಾಡಿಗ ಅವರು ಹಿಮ್ಮುಖವಾಗಿ ಲಾರಿ ಓಡಿಸಿದ್ದು, ಅಂಕೋಲಾದ ಅಂಗಡಿಯೊoದಕ್ಕೆ ಆ ಲಾರಿ ಗುದ್ದಿದೆ. ಪರಿಣಾಮ ಆ ಅಂಗಡಿ ಮುರಿದು ಬಿದ್ದಿದೆ.
ಅಂಕೋಲಾ ಹಿರೇಗುತ್ತಿಯ ಅಶೋಕ ಹಮ್ಮಣ್ಣ ನಾಯಕ ಅವರ ಅಂಗಡಿಗೆ ಹೊನ್ನಾವರ ಕರ್ಕಿಯ ಲೋಹಿತ್ ಚಂದ್ರಕಾAತ ದೇವಾಡಿಗ ಅವರು ಲಾರಿ ಗುದ್ದಿದ್ದಾರೆ. ಅವಸರದಲ್ಲಿ ಓಡಿದ ಶ್ರೀಕುಮಾರ ರೋಡ್‌ಲೈನ್ಸಿನ ಲಾರಿ ಅಪಘಾತಕ್ಕೀಡಾಗಿದೆ. ಲಾರಿ ಚಾಲಕ ಮಾಡಿದ ತಪ್ಪಿಗೆ ಅಶೋಕ ನಾಯಕ ಅವರು ನಷ್ಟ ಅನುಭವಿಸಿದ್ದಾರೆ.
ಜನವರಿ 28ರಂದು ಈ ಅವಘಡ ನಡೆದಿದೆ. ಶ್ರೀಕುಮಾರ ರೋಡ್ ಲೈನ್ಸಿನ ಲಾರಿಯೊಂದು ಡಿಸೀಲ್ ಹಾಕಿಸಿಕೊಂಡಿದ್ದು, ಅದೇ ಕಂಪನಿಯ ಇನ್ನೊಂದು ಲಾರಿಗೆ ಡಿಸೇಲ್ ಹಾಕಿಸಿದ ನಂತರ ಲೋಹಿತ್ ದೇವಾಡಿಗ ಅವರು ಲಾರಿಯನ್ನು ಹಿಮ್ಮುಖವಾಗಿ ಚಲಾಯಿಸಿದ್ದಾರೆ. ಆ ವೇಳೆ ಲಾರಿ ಅಲ್ಲಿಯೇ ಇದ್ದ ಅಂಗಡಿಗೆ ಗುದ್ದಿದೆ.
ಗುದ್ದಿದ ನಂತರವೂ ಲಾರಿ ಅಲ್ಲಿಗೆ ನಿಂತಿಲ್ಲ. ಲಾರಿ ಗುದ್ದಿದ ರಭಸಕ್ಕೆ ಅಂಗಡಿ ಮುರಿದು ಬಿದ್ದಿದ್ದು, ಬೆಳಗ್ಗೆ ಬೇಗ ಈ ಅವಘಡ ನಡೆದ ಕಾರಣ ಅಂಗಡಿಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಜೀವಾಪಾಯ ಸಂಭವಿಸಿಲ್ಲ. `ಲಾರಿ ಚಾಲಕ ಮಾಡಿದ ತಪ್ಪಿಗೆ ತಮಗೆ 5 ಲಕ್ಷ ರೂ ಹಾನಿಯಾಗಿದೆ’ ಎಂದು ಅಶೋಕ ನಾಯಕ ಅವರು ದೂರಿದ್ದಾರೆ.