ಕಾರವಾರದ ಪಿಕಳೆ ನರ್ಸಿಂಗ್ ಹೋಂ’ನ ಔಷಧ ವಿತರಕ ರಾಜೀವ ಪಿಕಳೆ ಅವರು ಆತ್ಮಹತ್ಯೆಗೆ ಶರಣಾಗಿದ್ದರೂ ಅವರ ಆತ್ಮಸ್ಥೆöÊರ್ಯ ಕುಗ್ಗುವ ಹಾಗೇ ಮಾಡಿದ್ದ ಮೂವರನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.
ರಾಜೀವ ಪಿಕಳೆ ಅವರು ಈಚೆಗೆ ಕಣ್ತಪ್ಪಿನಿಂದ ಅವಧಿ ಮೀರಿದ ಔಷಧ ವಿತರಿಸಿದ್ದರು. ಆದ ಪ್ರಮಾದಕ್ಕೆ ಅವರು ಬಹಿರಂಗವಾಗಿ ಕ್ಷಮೆ ಕೋರಿದ್ದರು. ಅದಾಗಿಯೂ ರಾಜೀವ ಪಿಕಳೆ ಅವರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಮಾಡಿದ ಕಿಡಿಗೇಡಿಗಳು ಅದನ್ನು ಎಲ್ಲಡೆ ಹರಿಬಿಟ್ಟಿದ್ದರು. ಆ ಮೂಲಕ ಪಿಕಳೆ ಆಸ್ಪತ್ರೆಯ ಹೆಸರು ಹಾಳು ಮಾಡುವ ಪ್ರಯತ್ನ ಮಾಡಿದ್ದರು. ಇದರಿಂದ ಕುಗ್ಗಿದ ರಾಜೀವ ಪಿಕಳೆ ಅವರು ಬಂದೂಕಿನಿoದ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದರು.
ರಾಜೀವ ಪಿಕಳೆ ಅವರು ಅತ್ಯಂತ ಪ್ರಾಮಾಣಿಕರಾಗಿದ್ದು, ಮೃದು ಸ್ವಭಾವದವರಾಗಿದ್ದರು. ಅವರು ಕ್ಷಮೆ ಕೋರಿದ ನಂತರವೂ ವಿಡಿಯೋ ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗಿದ್ದರಿಂದ ಮಾನಸಿಕವಾಗಿ ನೋವು ಅನುಭವಿಸಿದ್ದರು. ಕಾರವಾರ ತಾಲೂಕಿನ ವೈಲವಾಡ ಗ್ರಾಮದ ಸುಭಾಷ ಕೃಷ್ಣ ನಾಯ್ಕ, ಹರಿಶ್ಚಂದ್ರ ನಾಯ್ಕ ಹಾಗೂ ಅನಿಲ್ ಸುರೇಶ್ ನಾಯ್ಕ ಎಂಬಾತರು ಆ ವಿಡಿಯೋ ಹರಿಬಿಟ್ಟವರಾಗಿದ್ದಾರೆ. ಈ ಹಿನ್ನಲೆ ಪೊಲೀಸರು ಆ ಮೂವರನ್ನು ವಶಕ್ಕೆಪಡೆದಿದ್ದಾರೆ.