ಕಾರವಾರದ ಕಾಳಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ.
ಕಾರವಾರದ ಕಿನ್ನರದಲ್ಲಿ ಕಾಳಿ ನದಿ ಹಿನ್ನೀರು ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಹುಬ್ಬಳ್ಳಿ ನೋಂದಣಿಯ ಲಾರಿ ಮೂಲಕ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಈ ಮೂವರು ಮರಳು ತೆಗೆಯಲು ಪರವಾನಿಗೆಪಡೆದಿಲ್ಲ. ಸಾಗಾಟಕ್ಕೆ ಅಗತ್ಯ ಅನುಮತಿ ತೆಗೆದುಕೊಂಡಿಲ್ಲ. ಪರಿಸರಕ್ಕೆ ಹಾನಿ ಆಗದ ರೀತಿ ಮರಳುಗಾರಿಕೆ ನಡೆಸುವ ಮುನ್ನಚ್ಚರಿಕೆವಹಿಸಿಲ್ಲ. ರಾಜಧನವನ್ನು ಸಹ ಪಾವತಿಸಿಲ್ಲ.
ತಮ್ಮ ಸ್ವಂತ ಲಾಭದ ಬಗ್ಗೆ ಮಾತ್ರ ಯೋಚಿಸಿರುವ ಗಣಿ ದಣಿಗಳು ರಾತ್ರಿ ವೇಳೆ ನದಿ ತೀರಕ್ಕೆ ಹೋಗಿ ಸರ್ಕಾರಿ ಸ್ವತ್ತನ್ನು ದೋಚುತ್ತಿದ್ದಾರೆ. ಪರಿಸರಕ್ಕೆ ಹಾನಿ ಆಗುವ ರೀತಿ ಮರಳುಗಾರಿಕೆ ನಡೆಸುತ್ತಿದ್ದಾರೆ. ಕಿನ್ನರದ ವಾಣಿವಾಡ ರಸ್ತೆಯಿಂದ ಕಾರವಾರದ ಕಡೆ ಆ ರೇತಿ ತುಂಬಿದ ಲಾರಿಗಳ ಓಡಾಟ ನಡೆಯುತ್ತಿದೆ. ಪುಕ್ಕಟ್ಟೆ ಸಿಗುವ ಆ ಮರಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಜನವರಿ 10ರಂದು ರಾತ್ರಿ ರಾಜ್ಯ ಹೆದ್ದಾರಿ ಮೇಲೆ ಕಾರವಾರ ಗ್ರಾಮೀಣ ಠಾಣೆ ಪಿಸೈ ನೇಹಲ್ ಖಾನ್ ಅವರು ನಿಂತಿದ್ದು, ಅವರ ಎದುರಿನಲ್ಲಿಯೇ ಅಕ್ರಮ ಮರಳು ಸಾಗಾಟದ ಲಾರಿ ಹೋಗಿದೆ. ತಕ್ಷಣ ನೇಹಲ್ ಖಾನ್ ಅವರು ಆ ಲಾರಿ ಬೆನ್ನತ್ತಿ ಹಿಡಿದಿದ್ದು, ಆ ವೇಳೆ ಲಾರಿ ಒಳಗಿದ್ದವರನ್ನು ಹಿಡಿದಿದ್ದಾರೆ. ಲಾರಿಯಲ್ಲಿದ್ದ 30 ಸಾವಿರ ರೂ ಮೌಲ್ಯದ 3 ಬರಾಸ್ ರೇತಿಯನ್ನು ಜಪ್ತು ಮಾಡಿದ್ದಾರೆ.