ಹೊಸ ವರ್ಷದ ಸಂಭ್ರಮದಲ್ಲಿದ್ದವರ ನಡುವೆ ಕಾರವಾರದಲ್ಲಿ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಏಳು ಜನರಿಗೆ ಗಾಯವಾಗಿದೆ.
ಕಾರವಾರದ ಕಿನ್ನರ ಗುಣಸುಭಾದ ಸಚೀನ ಚಂದೋಬಾ ನಾಗೇಕರ್, ಅವರ ಅಣ್ಣ ಹರೀಶ ನಾಗೇಕರ್, ಅವರ ತಮ್ಮ ಸುನೀಲ ನಾಗೇಕರ್ ಜೊತೆ ಅವರ ಮಗ ಸರ್ವೇಶ ನಾಗೇಕರ್ ಹೊಡೆದಾಟದಲ್ಲಿ ಭಾಗಿಯಾಗಿದ್ದಾರೆ. ಅವರ ಜೊತೆ ಕಿನ್ನರ ಗುಣಸಭಾದ ಉದ್ಧಾಸ ಮೋಹನ ಗೋವೇಕರ್, ಅವರ ಹೆಂಡತಿ ಸಂಗೀತಾ ಗೋವೇಕರ್ ಹಾಗೂ ಸಂಬAಧಿ ಸೈರೋಬಾ ಗೋವೇಕರ್ ಸಹ ಹೊಡೆದಾಟಕ್ಕೆ ಕೈ ಜೋಡಿಸಿದ್ದಾರೆ.
ಡಿಸೆಂಬರ್ 31ರ ರಾತ್ರಿ 12 ಗಂಟೆ ಅವಧಿಯಲ್ಲಿ ಈ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಎರಡು ಗುಂಪಿನವರು ಬೆಂಕಿಯ ಉಂಡೆಗನ್ನು ಚೆಲ್ಲಿ ನೋವು ಮಾಡಿಕೊಂಡಿದ್ದಾರೆ. ಪೊಳಿಪಾತಿನ ಸೈರೋಬಾ ಗೋವೇಕರ್ ಅವರ ಮನೆ ಮುಂದೆ ಪಾರ್ಟಿ ನಡೆಯುತ್ತಿದ್ದು, ರಾತ್ರಿ 12.30ರ ನಂತರವೂ ರಸ್ತೆ ಮೇಲೆ ಪಾರ್ಟಿ ನಡೆಸಿರುವುದೇ ಈ ಹೊಡೆದಾಟಕ್ಕೆ ಮೂಲ ಕಾರಣವಾಗಿದೆ.
ಆ ದಿನ ರಾತ್ರಿ ಸಚೀನ ನಾಗೇಕರ್ ಅವರು ಸಹೋದರರ ಜೊತೆ ಸಂಬAಧಿಕರ ಮನೆಗೆ ಊಟಕ್ಕೆ ಹೋಗಿದ್ದು, ಮರಳಿ ಬರುವಾಗ ಪೊಳಿಪಾತ್ ಬಳಿ ಕಿನ್ನರ ಮಾಳಿಪೋತಿನಲ್ಲಿ ಪಾರ್ಟಿ ನಡೆಯುವುದನ್ನು ನೋಡಿದರು. ಉದ್ಧಾಸ ಗೋವೇಕರ್ ಅವರು ರಸ್ತೆಯಲ್ಲಿ ಬೆಂಕಿ ಹಾಕಿಕೊಂಡಿರುವುದನ್ನು ಅವರು ಪ್ರಶ್ನಿಸಿದರು. `ರಸ್ತೆ ಪಕ್ಕ ಕಾರು ನಿಲ್ಲಿಸಿ ಬೆಂಕಿ ಹಾಕಲು ಈ ರಸ್ತೆ ನಿಮ್ಮ ಅಪ್ಪನದಾ?’ ಎಂದು ಸಚೀನ್ ನಾಗೇಕರ್ ಜೋರಾದರು. ಇದರಿಂದ ಉಲ್ಲಾಸ ಗೋವೇಕರ್ ಸಿಟ್ಟಾಗಿ ಸಚಿನ್ ನಾಗೇಕರ್ ಇದ್ದ ಬೈಕಿಗೆ ಖುರ್ಚಿ ಎಸೆದರು.
ಅದಾದ ನಂತರ ನಡೆದ ಹೊಡೆದಾಟದಲ್ಲಿ ಸಚಿನ್ ನಾಗೇಕರ್ ಅವರು ಅಲ್ಲಿದ್ದ ಬೆಂಕಿಗೆ ಬಿದ್ದರು. ಪರಿಣಾಮ ಅವರ ಕೈ-ಕಾಲಿಗೆ ಗಾಯವಾಯಿತು. ಸಚಿನ್ ನಾಗೇಕರ್ ಕಡೆಯವರಿಗೆ ಉದ್ಧಾಸ ಗೋವೇಕರ್ ಕಡೆಯವರು ಹೊಡೆಯಲು ಶುರು ಮಾಡಿದರು. ಇದಕ್ಕೆ ಪ್ರತಿಯಾಗಿ ಸಚಿನ್ ನಾಗೇಕರ್ ಅವರು ಸಹ ಅಲ್ಲಿದ್ದ ಬೆಂಕಿಯ ಚಂಡು ಬೀಸಿದರು. ಬೆಂಕಿ ಹೊತ್ತಿದ ಕಟ್ಟಿಗೆ ತೆಗೆದುಕೊಂಡು ಉದ್ಧಾಸ ಗೋವೇಕರ್ ಅವರ ಬೆನ್ನಿಗೆ ಹೊಡೆದರು.
ಸುನೀಲ ನಾಗೇಕರ್ ಹಾಗೂ ಹರೀಶ ನಾಗೇಕರ್ ಸಹ ಈ ಹೊಡೆದಾಟದಲ್ಲಿ ಭಾಗವಹಿಸಿದ್ದು, ಸಂಗೀತಾ ಗೋವೇಕರ್ ಹಾಗೂ ಸೈರೋಬಾ ಗೋವೇಕರ್ ಅವರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಈ ಗುಂಪು ಘರ್ಷಣೆಯಲ್ಲಿ ಅಲ್ಲಿದ್ದ ಏಳು ಜನ ನೋವು ತಿಂದರು.