ಶಿರಸಿಯಲ್ಲಿ ಸೈಬರ್ ಕಫೆ ನಡೆಸುತ್ತಿದ್ದ ಮೇಘನ ನಾಯ್ಕ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿ ಸಾವಿನ ನಂತರ ಮಂಕಾಗಿದ್ದ ಅವರು ತಾಯಿಯ ಅಗಲುವಿಕೆ ಸಹಿಸಲಾಗದೇ ಪ್ರಾಣ ಬಿಟ್ಟಿದ್ದಾರೆ.
ಶಿರಸಿಯ ಗಾಂಧೀನಗರದ ಭಾಸ್ಕರ ಧಾಮೋಧರ ನಾಯ್ಕ ಅವರಿಗೆ ಮೂವರು ಮಕ್ಕಳು. ಆ ಪೈಕಿ ಅರ್ಚನಾ ನಾಯ್ಕ ಅವರು ಶಿರಸಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಮೇಘನ ನಾಯ್ಕ ಅವರು ಸೈಬರ್ ಸೆಂಟರ್ ನಡೆಸಿ ಬದುಕು ಕಟ್ಟಿಕೊಂಡಿದ್ದು, ಮೇಘನ ನಾಯ್ಕ ಅವರು ಮೂಲ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು. ಮೇಘನ ನಾಯ್ಕ ಅವರು ಮನೆಯಲ್ಲಿಯೇ ಸೈಬರ್ ಸೆಂಟರ್ ನಡೆಸಿ ಬದುಕು ಕಟ್ಟಿಕೊಂಡಿದ್ದರು.
2025ರ ನವೆಂಬರ್ 24ರಂದು ಭಾಸ್ಕರ ನಾಯ್ಕ ಅವರ ಪತ್ನಿ ಸಾವನಪ್ಪಿದರು. ತಾಯಿ ಸಾವಿನ ನಂತರ ಮೇಘನ ನಾಯ್ಕ ಅವರು ತೀರಾ ಮಂಕಾದರು. ಸದಾ ತಾಯಿ ಬಗ್ಗೆ ಚಿಂತೆ ಮಾಡುತ್ತಿದ್ದ ಮೇಘನ ನಾಯ್ಕ ಅವರು ಮಾನಸಿಕವಾಗಿ ಕುಗ್ಗಿದರು. ಮೇಘನ ನಾಯ್ಕ ಅವರು ಮೊದಲಿನಂತೆ ಮಾತನಾಡುತ್ತಿರಲಿಲ್ಲ. ಯಾರ ಬಳಿಯೂ ಹೆಚ್ಚು ಹೊತ್ತು ಸಮಯ ಕಳೆಯುತ್ತಿರಲಿಲ್ಲ.
ಒಂಟಿತನವನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದ ಮೇಘನ ನಾಯ್ಕ ಅವರನ್ನು ಕುಟುಂಬದವರು ಹಾಗೇ ಇರಲು ಬಿಟ್ಟಿದ್ದರು. ಡಿಸೆಂಬರ್ 31ರ ಬೆಳಗ್ಗೆ ಮೇಘನ ನಾಯ್ಕ ಅವರ ಅಕ್ಕ ಅರ್ಚನಾ ನಾಯ್ಕ ಅವರು ನೀರು ತುಂಬಲು ಮೂಲ ಮನೆಗೆ ಬಂದಿದ್ದು, ಆಗ ಮೇಘನ ನಾಯ್ಕ ಅವರ ಬಳಿ ಕೊನೆಯದಾಗಿ ಮಾತನಾಡಿದ್ದರು. ಜನವರಿ 1ರಂದು ಬೆಳಗ್ಗೆ ಮತ್ತೆ ನೀರು ತುಂಬಲು ಮನೆಗೆ ಬಂದಾಗ ಮೇಘನ ನಾಯ್ಕ ಅಲ್ಲಿದ್ದ ಫ್ಯಾನಿಗೆ ನೇತಾಡುತ್ತಿದ್ದರು.
ಮೇಘನ ನಾಯ್ಕ ಕೊನೆಯುಸಿರೆಳೆದ ಬಗ್ಗೆ ಅರ್ಚನಾ ನಾಯ್ಕ ಅವರು ಕೂಡಲೇ ತಂದೆ ಭಾಸ್ಕರ ನಾಯ್ಕ ಅವರಿಗೆ ಫೋನ್ ಮಾಡಿದರು. ಮಗಳ ಮನೆಯಲ್ಲಿದ್ದ ಭಾಸ್ಕರ ನಾಯ್ಕ ಅವರು ಅಲ್ಲಿಂದ ಓಡೋಡಿ ಬಂದಿದ್ದು, ಮಗನ ಶವ ನೋಡಿ ಬಿಕ್ಕಿ ಬಿಕ್ಕಿ ಅತ್ತರು. ತಾಯಿ ಸಾವನಪ್ಪಿದ ಆಘಾತದಲ್ಲಿಯೇ ಮೇಘನ ನಾಯ್ಕ ಅವರು ಕೊನೆಯುಸಿರೆಳೆದದನ್ನು ಭಾಸ್ಕರ ನಾಯ್ಕ ಅವರು ಖಚಿತಪಡಿಸಿದರು.