ಕುಮಟಾದ ಹನುಮಂತ ಮುಕ್ರಿ ಅವರಿಗೆ ಪೊಲೀಸರ ಹೆಸರಿನಲ್ಲಿ ಪೋನ್ ಮಾಡಿ ಹಣ ಕೇಳಿದ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಅಪರಿಚಿತ ವ್ಯಕ್ತಿ ಫೋನ್ ಮಾಡಿ ಬೆದರಿಕೆ ಒಡ್ಡಿದ ಬಗ್ಗೆ ಹನುಮಂತ ಮುಕ್ರಿ ಅವರು ದೂರು ನೀಡಿದ್ದಾರೆ.
`ಜನವರಿ 22ರಂದು ರಾಮನಗರ ಪೊಲೀಸ್ ಠಾಣೆಯ ಪಿಸೈ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ಫೋನ್ ಮಾಡಿ ಬೆದರಿಸಿದ್ದಾರೆ. ಹುಡುಗಿಯೊಬ್ಬರಿಗೆ ಕೆಟ್ಟದಾಗಿ ಮೆಸೆಜ್ ಮಾಡಿದ ವಿಷಯ ಹೇಳಿ 3 ಲಕ್ಷ ರೂಪಾಯಿ ದಂಡ ಕಟ್ಟಬೇಕು ಎಂದು ಸೂಚಿಸಿದ್ದಾರೆ. ಕೂಡಲೇ 25 ಸಾವಿರ ರೂ ಪಾವತಿ ಮಾಡದೇ ಇದ್ದರೆ ಬಂಧಿಸುವುದಾಗಿ ಹೆದರಿಸಿದ್ದಾರೆ’ ಎಂದು ಹನುಮಂತ ಮುಕ್ರಿ ಅವರು ಪೊಲೀಸರ ಮುಂದೆ ವಿವರಿಸಿದ್ದಾರೆ.
ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ನೆರವುಪಡೆದ ಹನುಮಂತ ಮುಕ್ರಿ ಸೈಬರ್ ಕ್ರೆöÊಂ ವಂಚಕರನ್ನು ಸೆದೆಬಡಿಯುವಂತೆ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ಅಧೀಕ್ಷಕರಿಗೆ ಸಹ ಅವರು ತಮ್ಮ ದೂರು ಪತ್ರ ರವಾನಿಸಿದ್ದು, ಪೊಲೀಸ್ ಸಹಾಯಕ ಉಪನಿರೀಕ್ಷಕ ಸದಾನಂದ ನೆಗಳೂರು ಅಳಲು ಆಲಿಸಿದ್ದಾರೆ. ಅದಾದ ನಂತರ ಅವರು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಹಾಗೂ ಸುಧಾಕರ ನಾಯ್ಕ ಅವರಿಗೆ ಅವರಿಗೆ ವಂಚಕರನ್ನು ಬಂಧಿಸುವ ಭರವಸೆ ನೀಡಿದ್ದಾರೆ.