ಪ್ರಸಿದ್ಧ ಪುಣ್ಯ ಕ್ಷೇತ್ರ ಮುರುಡೇಶ್ವರ ಜಾತ್ರೆಗೆ ಲಕ್ಷಾಂತರ ಜನ ಆಗಮಿಸಿದ್ದು, ಎಲ್ಲರೂ ಸೇರಿ ಭಕ್ತಿ-ಭಾವದಿಂದ ದೇವರ ಸೇವೆ ಮಾಡಿದ್ದಾರೆ.
ಮಂಗಳವಾರ ಸಂಜೆ ಮುರುಡೇಶ್ವರ ದೇವರ ಮಹಾರಥೋತ್ಸವ ನಡೆದಿದೆ. ಮಂಟಪ ಅಲಂಕಾರ, ಭಕ್ತರ ಹರ್ಷೋದ್ಗಾರದ ನಡುವೆ ವಿಜ್ರಂಭಣೆಯಿAದ ಉತ್ಸವ ಆಚರಿಸಲಾಗಿದೆ. ಜಾತ್ರೆಯ ಅಂಗವಾಗಿ ಜನವರಿ 15ರಂದು ಮಕರ ಸಂಕ್ರಾAತಿಯ ದಿನ ಧ್ವಜಾರೋಹಣ ನಡೆಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪ್ರತಿ ದಿನ ಉತ್ಸವಾದಿಗಳು ನಡೆದವು. ಅದಾದ ನಂತರ ಚಿನ್ನದ ರಥೋತ್ಸವ ಜರುಗಿ ಜನವರಿ 20ರಂದು ಮಹಾರಥೋತ್ಸವ ಜರುಗಿತು. ಮಹಾರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹೋಮ ಹವನಗಳನ್ನು ಭಕ್ತರು ಕಣ್ತುಂಬಿಕೊoಡರು.
ಮಧ್ಯಾಹ್ನ ರಥಾರೋಹಣದ ನಂತರ ಸಾವಿರಾರು ಭಕ್ತಾಧಿಗಳು ರಥಕಾಣಿಕೆ ನೀಡಿ, ರಥೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಜೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವದ ಸಂದರ್ಭದಲ್ಲಿ ಸಾವಿರಾರು ಜನರು ಭಾಗವಹಿಸಿ ಭಕ್ತಿ ಪ್ರದರ್ಶನ ಮಾಡಿದರು. ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ನಾಗರಾಜ ಶೆಟ್ಟಿ, ಹಿರಿಯರಾದ ಎಸ್ ಎಸ್ ಕಾಮತ್, ಎನ್ ಎಸ್ ಭಟ್ರಹಿತ್ಲು, ಮಾವಳ್ಳಿ-1 ಗ್ರಾಮ ಪಂಚಾಯತ್ ಅಧ್ಯಕ್ಷೆ ನಯನಾ ನಾಯ್ಕ, ಮಾವಳ್ಳಿ – 2 ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನಾ ಪಡಿಯಾರ್, ಪ್ರಧಾನ ಅರ್ಚಕರಾದ ಜಯರಾಮ ಅಡಿಗಳ್, ಶಿವರಾಮ ಅಡಿಗಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾಂಗ್ರೆಸ್ ರಾಜ್ಯ ಮಹಿಳಾ ಕಾರ್ಯದರ್ಶಿ ಬೀನಾ ವೈದ್ಯ, ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ನಾಯ್ಕ ಜಮೀನ್ದಾರ, ಕೈಕಿಣಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು ನಾಯ್ಕ, ಉದ್ಯಮಿಗಳಾದ ಗಣೇಶ್ ಹರಿಕಾಂತ ಈ ಉತ್ಸವದಲ್ಲಿ ಮುಂಚೂಣಿಯಾಗಿ ಕಾಣಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಡಿ ವೈ ಎಸ್ ಪಿ. ಮಹೇಶ ಎಂ ಕೆ., ಮುರ್ಡೇಶ್ವರ ವೃತ್ತ ನಿರೀಕ್ಷಕ ಜಗದೀಶ ಹಂಚಿನಾಳ್ ಹಾಗೂ ಪಿಎಸ್ಐ ಹನುಮಂತ ಬಿರಾದಾರ ನೇತೃತ್ವದಲ್ಲಿ ಬಿಗಿ ಭದ್ರತೆ ಮಾಡಲಾಗಿತ್ತು. ದೂರ ದೂರದ ಊರಿನಿಂದ ಬಂದ ಭಕ್ತರು ಸಾಗರದ ಅಂಚಿನಲ್ಲಿ ನಡೆದ ಉತ್ಸವಕ್ಕೆ ಸಾಕ್ಷಿಯಾದರು.