ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ಬಳಿಯ ರಾಮನಗರ- ಬೆಳಗಾವಿಯ ಖಾನಾಪುರ ಭಾಗದ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಈ ಅಫಘಾತದಲ್ಲಿ ಮೂವರು ಸಾವನಪ್ಪಿದ್ದಾರೆ.
ಗೋವಾ – ಬೆಳಗಾವಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು ರಾಮನಗರದ ಬಳಿ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಇನೋವಾ ಹಾಗೂ ರೆನಾಲ್ಟ್ ಕ್ವಿಡ್ ಕಾರುಗಳ ನಡುವೆ ಈ ಮುಖಾಮುಖಿ ಡಿಕ್ಕಿ ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಾರಿನಲ್ಲಿ ಸಿಲುಕಿ ವೃದ್ಧರೊಬ್ಬರು ಸಾವನಪ್ಪಿದ್ದಾರೆ. ಈ ಅಪಘಾತದಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಗೆ ರವಾನಿಸಲಾಗಿದೆ. ಸಾವನಪ್ಪಿದವರು ಹಾಗೂ ಗಾಯಗೊಂಡವರು ಹುಬ್ಬಳ್ಳಿ ತಾಲೂಕಿನ ಲಕ್ಷ್ಮೇಶ್ವರದವರಾಗಿದ್ದಾರೆ.
ಕುಟುಂಬವೊoದು ಗೋವಾಗೆ ಹೋಗಿ ಹುಬ್ಬಳ್ಳಿ ಕಡೆ ಮರಳುವಾಗ ಅವಘಡ ನಡೆದಿದೆ. ಆಂಬುಲೆನ್ಸ ಕೊರತೆಯಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಮಸ್ಯೆಯಾಗಿದ್ದು, ಜನ ಶಾಶ್ವತ ಆಂಬುಲೆನ್ಸ ನಿಯೋಜನೆಗೆ ಒತ್ತಾಯಿಸಿದ್ದಾರೆ. ರಾಮನಗರ ಪೊಲೀಸರು ಸ್ಥಳದಲ್ಲಿದ್ದಾರೆ.